ವಚನಕಾರರಿಂದ ಸಾಹಿತ್ಯ ದೈವ ಭಾಷೆ: ಸುತ್ತೂರು ಶ್ರೀ

KannadaprabhaNewsNetwork |  
Published : Jun 24, 2026, 03:45 AM IST
ಸಮ್ಮೇಳನ ಉದ್ಘಾಟನೆ | Kannada Prabha

ಸಾರಾಂಶ

ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ ಬಸವಾದಿ ಪ್ರಮುಖರ ಕೊಡುಗೆಯಾಗಿದ್ದು, 12ನೇ ಶತಮಾನದಲ್ಲಿ ವಚನಕಾರರು ಸಾಹಿತ್ಯವನ್ನು ದೈವ ಭಾಷೆಯನ್ನಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದು ಸುತ್ತೂರು ಮಹಾಸಂಸ್ಥಾನ ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.

ಕುಶಾಲನಗರ: ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ ಬಸವಾದಿ ಪ್ರಮುಖರ ಕೊಡುಗೆಯಾಗಿದ್ದು, 12ನೇ ಶತಮಾನದಲ್ಲಿ ವಚನಕಾರರು ಸಾಹಿತ್ಯವನ್ನು ದೈವ ಭಾಷೆಯನ್ನಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದು ಸುತ್ತೂರು ಮಹಾಸಂಸ್ಥಾನ ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.

ಕುಶಾಲನಗರದಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಶರಣ ಸಾಹಿತ್ಯ ವಚನಗಳ ಅಧ್ಯಯನಗಳ ಮೂಲಕ ಮಾನವನ ಅಂತರಂಗದ ಬದಲಾವಣೆ ಆಗಲು ಸಾಧ್ಯ ಎಂದ ಶ್ರೀಗಳು, ಆಧ್ಯಾತ್ಮಿಕ ಧಾರ್ಮಿಕ ನೆಲೆಗಟ್ಟಿನಲ್ಲಿ ವಚನ ಸಾಹಿತ್ಯ ನೆಲೆ ನಿಂತಿವೆ. ಪ್ರತಿಯೊಂದು ಕ್ಷೇತ್ರದಲ್ಲಿ ರಾಜಕೀಯ ಸಾಮಾಜಿಕ ಬೆಳವಣಿಗೆಗಳ ನಡುವೆ ಧಾರ್ಮಿಕ ಬೆಳವಣಿಗೆಗಳು ಆಗಬೇಕಾಗಿದೆ ಎಂದರು.

ಸಮ್ಮೇಳನದ ಉದ್ಘಾಟನೆ ನೆರವೇರಿಸಿದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಶರಣರಿದ್ದಲ್ಲಿ ಸಂಸ್ಕಾರ ಸಾಹಿತ್ಯ ಸಂಗೀತ ಸೇರಿದಂತೆ ಎಲ್ಲ ರೀತಿಯ ಸೇವೆಗಳನ್ನು ಕಾಣಬಹುದು. ಶರಣ ತತ್ವ ಅಳವಡಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.

ಮನೆಯಿಂದಲೇ ಸಮಾನತೆ:

ಆಶಯ ನುಡಿಗಳನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಮನೆಯಿಂದಲೇ ಸಮಾನತೆ ಆರಂಭ ಆಗಬೇಕು. ಆ ಮೂಲಕ ಸಮಾಜದಲ್ಲಿ ಸಮಗ್ರ ಸಮಾನತೆಯನ್ನು ಕಾಣಲು ಸಾಧ್ಯ. ಸಮುದಾಯವನ್ನು ಒಗ್ಗಟ್ಟು ಮಾಡುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದರು.

ಕುಶಾಲನಗರದಲ್ಲಿ ನಿರ್ಮಾಣವಾಗಲಿರುವ ವೀರಶೈವ ಮಹಾಸಭಾ ಕಟ್ಟಡಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಶಾಸಕರು, ತಮ್ಮ ಅನುದಾನದ ಮೂಲಕ 50 ಲಕ್ಷ ರು. ನೀಡುವ ಭರವಸೆ ನೀಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಸಾಹಿತ್ಯದ ಆಶಯ ಮೂಲ ಉದ್ದೇಶದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಪರಿಷತ್ ಮೂಲಕ ನೊಂದ ಶೋಷಣೆಗೊ ಳಗಾದ ವರ್ಗಕ್ಕೆ ಸಾಂತ್ವನ ಹೇಳುವ ಕೆಲಸ ಆಗುತ್ತಿದೆ ಎಂದರು.

ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅನುಭಾವ ನುಡಿಗಳನ್ನು ಆಡಿದ ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಜ್ಞಾನದ ದಾರಿದೀಪಗಳನ್ನು ಜೀವನದಲ್ಲಿ ರೂಪಿಸುವ ಕೆಲಸವನ್ನು ಶರಣ ಸಾಹಿತ್ಯಗಳು ತಿಳಿಸಿಕೊಡುತ್ತದೆ ಎಂದರು.

ಹಿರಿಯ ನ್ಯಾಯವಾದಿ ಎ.ಚ್ಎಸ್. ಚಂದ್ರಮೌಳಿ, ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧಕರಾದ ಟಿ.ಆರ್. ಶರವಣ ಕುಮಾರ್, ಎಂ.ಬಿ. ಬಸವರಾಜು, ಸುಶೀಲಾ ಎಸ್.ಕೆ. ವೀರಪ್ಪ, ಭಾರದ್ವಾಜ್ ಆನಂದ ತೀರ್ಥ, ಜೆ.ಎಸ್. ಗಿರೀಶ್, ಲಕ್ಷ್ಮಮ್ಮ, ವರಪ್ರಸಾದ್ ಮತ್ತು ಮಣಜೂರು ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಅರಮೆರಿ ಕಳಂಚೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಮಠಾಧೀಶ ನಟರಾಜ ಸ್ವಾಮೀಜಿ, ಚೆನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಅಪ್ಪಾಜಿ ಸ್ವಾಮೀಜಿ, ಇಮ್ಮಡಿ ಶಿವಲಿಂಗ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಮಾಹಿತಿ ಆಯೋಗದ ಮಾಜಿ ಅಧ್ಯಕ್ಷ ಜೆ.ಎಸ್. ವಿರೂಪಾಕ್ಷಯ್ಯ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ. ಶಿವಪ್ಪ, ಹಾಸನ ಪರಿಷತ್ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕದಳಿ ವೇದಿಕೆಯ ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ್, ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಸಿದ್ದಪ್ಪ, ಅಕ್ಕನ ಬಳಗ ಕದಳಿ ವೇದಿಕೆ ಪದಾಧಿಕಾರಿಗಳು ಮತ್ತು ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರು, ಸಂಚಾಲಕರು ಇದ್ದರು.

ಸಮ್ಮೇಳನದ ಅಂಗವಾಗಿ ಕುಶಾಲನಗರದ ಬಸವೇಶ್ವರ ದೇವಾಲಯದಿಂದ ಹೊರಟು ಸಮ್ಮೇಳನದ ಸಭಾಂಗಣ ತನಕ ಬೃಹತ್ ಮೆರವಣಿಗೆ ನಡೆಯಿತು. ಕಲಾ ತಂಡಗಳೊಂದಿಗೆ ನಡೆದ ಮೆರವಣಿಗೆಗೆ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಹನಾ ಮತ್ತಿತರರು ಚಾಲನೆ ನೀಡಿದರು. ಈ ಸಂದರ್ಭ ವಿವಿಧ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು.

ಸಭಾಂಗಣದ ಆವರಣದಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಧ್ವಜ ಆರೋಹಣ ಮಾಡಲಾಯಿತು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಸ್ವಾಗತಿಸಿ, ಕೊಡಗು ವಿವಿ ಉಪನ್ಯಾಸಕ ಡಾ. ಜಮೀರ್ ಅಹ್ಮದ್ ನಿರೂಪಿಸಿದರು.

(ಫೋಟೋ-23 ಶರಣ)

ಕ್ಯಾಪ್ಸನ್‌: ಕುಶಾಲನಗರದಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ₹1.02 ಕೋಟಿ ಮೌಲ್ಯದ ಮದ್ಯ ಜಪ್ತಿ
ವಿಚಿತ್ರ ದೇಹ ರಚನೆಯ ಕರು ಜನನ