ರಜತ ಮಹೋತ್ಸವ ಹಿನ್ನೆಲೆ ನಗರದ ಜ್ಯೋತಿಬಾ ದೇವರ ಪಲ್ಲಕ್ಕಿ ಉತ್ಸವ

KannadaprabhaNewsNetwork |  
Published : Apr 25, 2026, 03:45 AM IST
24ಕಶ: | Kannada Prabha

ಸಾರಾಂಶ

ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿರುವ ಜ್ಯೋತಿಬಾ ದೇವಸ್ಥಾನದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಮದಬಾವಿ ಗ್ರಾಮಕ್ಕೆ ತೆರಳಿದ್ದ ಶ್ರೀ ಜ್ಯೋತಿಬಾ ಪಲ್ಲಕ್ಕಿಯು ಮಂಗಳವಾರ ನಗರದಲ್ಲಿ ಭವ್ಯವಾದ ಮೆರವಣಿಗೆಯೊಂದಿಗೆ ನಗರಕ್ಕೆ ಮರಳಿತು.

ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿರುವ ಜ್ಯೋತಿಬಾ ದೇವಸ್ಥಾನದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಮದಬಾವಿ ಗ್ರಾಮಕ್ಕೆ ತೆರಳಿದ್ದ ಶ್ರೀ ಜ್ಯೋತಿಬಾ ಪಲ್ಲಕ್ಕಿಯು ಮಂಗಳವಾರ ನಗರದಲ್ಲಿ ಭವ್ಯವಾದ ಮೆರವಣಿಗೆಯೊಂದಿಗೆ ನಗರಕ್ಕೆ ಮರಳಿತು.

ನಗರದ ಕೊರಿಶೆಟ್ಟಿ ತೋಟ ಹಾಗೂ ಇಬ್ರಾಹಿಂ ರೋಜಾದಿಂದ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಿತು. ಸಾಂಪ್ರದಾಯಿಕ ವಾದ್ಯಗೋಷ್ಠಿ, ಭಕ್ತರ ಜಯಘೋಷ ಮತ್ತು ಭಕ್ತಿಭಾವದ ಮಧ್ಯೆ ನಡೆದ ಮೆರವಣಿಗೆ ನಗರದಲ್ಲಿ ಹಬ್ಬದ ವಾತಾವರಣದಂತಿತ್ತು. ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಜ್ಯೋತಿಬಾ ನಾಮಸ್ಮರಣೆ, ಮೊಳಗಲಿದ್ದು, ಭಕ್ತಿ, ಪರಂಪರೆ ಮತ್ತು ಸಮುದಾಯ ಏಕತೆಯ ಮಹೋತ್ಸವವಾಗಿದೆ. ಇದರೊಟ್ಟಿಗೆ ಏ.25 ಹಾಗೂ 26 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 25 ರಂದು ಗಣ ಹೋಮ ಆಯೋಜಿಸಿದ್ದು, ಈ ಹೋಮದಲ್ಲಿ ದಂಪತಿಗಳು ಭಾಗಿಯಾಗಲು ಅವಕಾಶವಿದೆ. ಅಂದೇ ಸಾಯಂಕಾಲ ಸಾಯಂಕಾಲ 6 ಗಂಟೆಗೆ ದೀಪೋತ್ಸವ ನಡೆಯಲಿದೆ. ಏ.26 ರಂದು ಮಧ್ಯಾಹ್ನ12.30ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಕಾರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಲು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶಿವಾಜಿ ಗಾಯಕವಾಡ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದುವೆಗಳಲ್ಲಿ ಮಕ್ಕಳ ಮುದ್ದಿಸುವಸೋಗಿನಲ್ಲಿ ಕದಿಯುತ್ತಿದ್ದವನ ಸೆರೆ
ಕೆಎಸ್‌ಟಿಡಿಸಿಯಿಂದ ಬನ್ನೇರುಘಟ್ಟ-ಮುತ್ಯಾಲಮಡು ಪ್ರವಾಸ ಯೋಜನೆ