ಕೆ.ಎನ್.ರಾಜಣ್ಣ ರ ಅಮೃತ ಮಹೋತ್ಸವ ಯಶಸ್ಸಿಗೆ ನಿರ್ಧಾರ

KannadaprabhaNewsNetwork |  
Published : Jun 16, 2025, 02:23 AM IST
ಪೋಸ್ಟರ್ ಬಿಡುಗಡೆ | Kannada Prabha

ಸಾರಾಂಶ

ಕೆ.ಎನ್.ಆರ್‌ ಅವರು ಸಾಗಿಬಂದ ಹಾದಿ, ಅವರ ಹೋರಾಟ, ಕೊಡುಗೆಗಳನ್ನು ದಾಖಲುಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತುಮಕೂರುಸಹಕಾರ ಸಚಿವ ಕೆ.ಎನ್.ರಾಜಣ್ಣನವರ 75ನೇ ಹುಟ್ಟುಹಬ್ಬ ಆಚರಣೆಯ ಅಮೃತ ಮಹೋತ್ಸವ ಈ ತಿಂಗಳ 21 ರಂದು ನಗರದಲ್ಲಿ ಏರ್ಪಾಟಾಗಿದ್ದು, ಕೆ.ಎನ್.ಆರ್‌ ಅವರು ಸಾಗಿಬಂದ ಹಾದಿ, ಅವರ ಹೋರಾಟ, ಕೊಡುಗೆಗಳನ್ನು ದಾಖಲುಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವಾಗಿದೆ ಎಂದು ಆಡಿಟರ್‌ ಟಿ.ಆರ್.ಆಂಜನಪ್ಪ ಹೇಳಿದರು.ಕೆ.ಎನ್.ರಾಜಣ್ಣನವರ ಹುಟ್ಟು ಹಬ್ಬಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.ರಾಜಣ್ಣ ಒಂದು ಜಾತಿ ನಂಬಿ ರಾಜಕಾರಣ ಮಾಡಿದವರಲ್ಲ, ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿಯ ನಾಯಕ ಎಂದರು. 75 ವರ್ಷ ಪೂರ್ಣಗೊಳಿಸಿರುವ ಕೆ.ಎನ್.ರಾಜಣ್ಣನವರರಾಜಕಾರಣದ ಹಾದಿ ಕಠಿಣವಾಗಿತ್ತು. ಎದುರಾಗುವ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿಕೊಂಡು ಜನರೊಂದಿಗೆ ನಡೆದು ಬೆಳೆದರು ಎಂದರು.

ವಿವೇಕಾನಂದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿ ಮಾತನಾಡಿ, ಕೆ.ಎನ್.ರಾಜಣ್ಣನವರು ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಬಡವರಿಗೆ ಸಾಲ ಸೌಲಭ್ಯ ದೊರೆಯದ ಸಂದರ್ಭದಲ್ಲಿ ಸಣ್ಣಪುಟ್ಟ ಸಮಾಜದವರೂ ಸಹಕಾರ ಸಂಸ್ಥೆ ಸ್ಥಾಪಿಸಿ ಸಾಲ ಸೌಕರ್ಯ ಪಡೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಮುಖಂಡರಾದ ಮಲ್ಲಸಂದ್ರ ಶಿವಣ್ಣ, ಎಂ.ಕೆ.ವೆಂಕಟಸ್ವಾಮಿ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್, ಸವಿತಾ ಸಮಾಜ ಅಧ್ಯಕ್ಷ ಮಂಜೇಶ್‌ ಒಲಂಪಿಕ್, ಮುಖಂಡರಾದ ಹೆಬ್ಬಾಕ ಮಲ್ಲಿಕಾರ್ಜುನ್, ಆರ್.ಎನ್.ವೆಂಕಟಾಚಲ, ಲಕ್ಷ್ಮೀಕಾಂತರಾಜೇಅರಸು, ನಟರಾಜ ಶೆಟ್ಟಿ, ರಾಜೇಶ್‌ದೊಡ್ಮನೆ, ಶಾಂತಕುಮಾರ್, ಡಮರುಗೇಶ್, ಅಣ್ಣೇನಹಳ್ಳಿ ಶಿವಕುಮಾರ್, ನಾರಾಯಣಸ್ವಾಮಿ, ವಿಠಲ್, ತೇಜೇಶ್, ಗುರುರಾಘವೇಂದ್ರ, ಎನ್.ಅರುಣ್‌ಕುಮಾರ್, ರಾಜಣ್ಣ ಮೊದಲಾದವರು ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌