ಮಾದರಹಳ್ಳಿ ಸೊಸೈಟಿ ಅಧ್ಯಕ್ಷರಾಗಿ ಕೆ.ನಾಗೇಶ್ ಅವಿರೋಧ ಆಯ್ಕೆ

KannadaprabhaNewsNetwork |  
Published : Mar 06, 2026, 02:00 AM IST
5ಕೆಎಂಎನ್ ಡಿ23 | Kannada Prabha

ಸಾರಾಂಶ

ಕೆ.ಎಂ.ದೊಡ್ಡಿ ಹೋಬಳಿಯ ಮಾದರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಂಬರಹಳ್ಳಿ ಕೆ.ನಾಗೇಶ್, ಉಪಾಧ್ಯಕ್ಷರಾಗಿ ಕೋಲಕಾರನದೊಡ್ಡಿ ಗ್ರಾಮದ ಚನ್ನ ಬಸವಯ್ಯ ಅವಿರೋಧವಾಗಿ ಆಯ್ಕೆ.

ಕೆ.ಎಂ.ದೊಡ್ಡಿ: ಹೋಬಳಿಯ ಮಾದರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಂಬರಹಳ್ಳಿ ಕೆ.ನಾಗೇಶ್, ಉಪಾಧ್ಯಕ್ಷರಾಗಿ ಕೋಲಕಾರನದೊಡ್ಡಿ ಗ್ರಾಮದ ಚನ್ನ ಬಸವಯ್ಯ ಅವಿರೋಧವಾಗಿ ಆಯ್ಕೆಯಾದರು.

ಸಂಘದಲ್ಲಿ 11 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದು ಅನರ್ಹ ಮತದಾರರು ಮತದಾನದ ಹಕ್ಕು ನೀಡುವಂತೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಹೈಕೋರ್ಟ್ ಸ್ಥಳೀಯ ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿಯನ್ನು ದಾವೆ ಮುಕ್ತಾಯಗೊಳಿಸಿತ್ತು.

ಅದರಂತೆ ಅರ್ಹ ಮತದಾರರು ಮಾಡಿದ್ದ ಮತ ಎಣಿಕೆ ಅನ್ವಯ ಫಲಿತಾಂಶ ಘೋಷಣೆ ಮಾಡಿ ಮಾ.2ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರನ್ನು ಕೂಡ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಸುಧಾಕರ್ ಪಾಲ್ಗೊಂಡಿದ್ದರು.

ಈ ವೇಳೆ ಮುಖಂಡರಾದ ಎ.ಜಿ.ಕೃಷ್ಣ, ಮನು, ಶಂಕರಲಿಂಗೇಗೌಡ, ಚನ್ನಪ್ಪ, ಸತೀಶ, ಉಮೇಶ, ಯೋಗೇಶ, ದೇವರಾಜು, ಬೂದನೂರು ಚಂದ್ರು, ತಮ್ಮಣ್ಣ, ಕೃಷ್ಣ, ದೇವೀರಮ್ಮ‌ ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದರು.ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಬೇಡ: ಪುಟ್ಟಸ್ವಾಮಿ

ಕನ್ನಡಪ್ರಭ ವಾರ್ತೆ ಮಂಡ್ಯ

೨೦೨೫-೨೬ನೇ ಸಾಲಿನ ವಿಶೇಷ ಘಟಕ ಯೋಜನೆ-ಗಿರಿಜನ ಉಪಯೋಜನೆ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆಯನ್ನು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘಗಳ ಸದಸ್ಯರಿಗೆ ಅನುಗುಣವಾಗಿ ಗುರಿ ನಿಗದಿಪಡಿಸುವಂತೆ ನಿರ್ದೇಶಕ ಪುಟ್ಟಸ್ವಾಮಿ ಆಗ್ರಹಪಡಿಸಿದರು.ಈ ಸಾಲಿನಲ್ಲಿ ಮಂಡ್ಯ ಜಿಲ್ಲೆಗೆ ೨೦ ಗುರಿಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ೨೫ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿವೆ. ಸಹಕಾರ ಸಂಘಗಳನ್ನು ಗಣನೆಗೆ ತೆಗೆದುಕೊಳ್ಳದೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುವಿಗಳನ್ನು ಆಯ್ಕೆ ಮಾಡಲು ನಿಗಮ ಮತ್ತು ಇಲಾಖೆ ಅಧಿಕಾರಿಗಳು ಅಧಿಸೂಚನೆ ಹೊರಡಿಸಿರುವುದು ಸ್ಥಳೀಯ ಕುರಿಗಾಹಿಗಳಿಗೆ ಅನ್ಯಾಯವೆಸಗಿದಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಹಿಂದೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಯಾಯ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಸಂಘಗಳ ಸದಸ್ಯರಿಗೆ ಅನುಗುಣವಾಗಿ ಗುರಿಗಳನ್ನು ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಗೆ ಕಳುಹಿಸಿ ಜಿಪಂ ಸಿಇಓ ಅಧ್ಯಕ್ಷತೆಯಲ್ಲಿ ಪಶುಪಾಲನಾ ಉಪನಿರ್ದೇಶಕರು ಹಾಗೂ ನಿಗಮದ ಸಹಾಯಕರ ಉಪಸ್ಥಿತಿಯಲ್ಲಿ ಸಹಕಾರ ಸಂಘಗಳ ಸದಸ್ಯರಿಗೆ ಯೋಜನೆಯ ಪ್ರಯೋಜನವನ್ನು ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ ಸಹಕಾರ ಸಂಘಗಳನ್ನು ಗಣನೆಗೆ ತೆಗೆದುಕೊಳ್ಳದೆ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಯೋಜಿಸಿರುವುದು ಸೂಕ್ತವಾಗಿಲ್ಲ ಎಂದರು.ಜಿಲ್ಲೆಗೆ ೨೦ ಗುರಿಗಳನ್ನು ನೀಡಲಾಗಿದ್ದು, ಕೇವಲ ೨ ರಿಂದ ೩ ಗುರಿ ಆಯ್ಕೆ ಮಾಡಲು ಶಾಸಕರ ಅಧ್ಯಕ್ಷತೆ ವಹಿಸುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ಕನಿಷ್ಠ ಒಂದು ತಾಲೂಕಿಗೆ ೨೦ ಗುರಿಗಳನ್ನು ನೀಡಿ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಿದ್ದರೆ ಕನಿಷ್ಠ ಹೋಬಳಿಯೊಂದರ ೫ ಫಲಾನುಭವಿಗಳಿಗಾದರೂ ತಲುಪುತ್ತಿತ್ತು. ಹಾಗಾಗಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘಗಳಿಗೆ ಅನುಗುಣವಾಗಿ ಗುರಿಗಳನ್ನು ನಿಗದಿಪಡಿಸುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕೆ.ಪಿ.ಶಿವರಾಮು, ಶಿವಣ್ಣ, ರಾಜದೊರೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನಿಯೋಗದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
ಜ್ಞಾನ ದೇಗುಲಕ್ಕೆ ಮಾಡುವ ದಾನವೂ ಸರ್ವಶ್ರೇಷ್ಠ: ಶಾಸಕ ಎಚ್.ಟಿ.ಮಂಜು