ಇಂದು ವಿರಾಟಪುರ ವಿರಾಗಿ ಸಿನಿಮಾ ಉಚಿತ ಪ್ರದರ್ಶನ

KannadaprabhaNewsNetwork |  
Published : Jan 17, 2024, 01:51 AM IST
30 | Kannada Prabha

ಸಾರಾಂಶ

ಗುರುದೇವ ಸೇವಾ ಸಂಸ್ಥೆ (ಸಮಾಧಾನ) ನಿರ್ಮಿಸಿರುವ ಈ ಸಿನಿಮಾವನ್ನು ಬಿ.ಎಸ್. ಲಿಂಗದೇವರು ರಚಿಸಿ, ನಿರ್ದೇಶಿಸಿದ್ದಾರೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಂಬಾಳದ ಮೌನತಪಸ್ವಿ ಜಡೆಯ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಿನಿಮಾ ವೀಕ್ಷಿಸುವರು.ಈ ಸಿನಿಮಾ ಬಿಡುಗಡೆಗೂ ಮುನ್ನ ಪ್ರೀಮಿಯರ್ ಪ್ರದರ್ಶನದಲ್ಲಿ ಸುಮಾರು 160 ಹೌಸ್ ಫುಲ್ ಪ್ರದರ್ಶನ ಕಂಡಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕಾರಣಿಕ ಪುರುಷ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧರಿಸಿದ ಚಿತ್ರ ''ವಿರಾಟಪುರ ವಿರಾಗಿ'' ಸಿನಿಮಾ ಪ್ರದರ್ಶನವನ್ನು ಜ. 17 ರಂದು ಸಂಜೆ 4ಕ್ಕೆ ಬನ್ನಿಮಂಟಪದ ಜೆಎಸ್ ಎಸ್ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶಿ ತವಾಗಿ ಏರ್ಪಡಿಸಿದೆ.

ಶ್ರೀ ಗುರುದೇವ ಸೇವಾ ಸಂಸ್ಥೆ (ಸಮಾಧಾನ) ನಿರ್ಮಿಸಿರುವ ಈ ಸಿನಿಮಾವನ್ನು ಬಿ.ಎಸ್. ಲಿಂಗದೇವರು ರಚಿಸಿ, ನಿರ್ದೇಶಿಸಿದ್ದಾರೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಂಬಾಳದ ಮೌನತಪಸ್ವಿ ಜಡೆಯ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಿನಿಮಾ ವೀಕ್ಷಿಸುವರು.ಈ ಸಿನಿಮಾ ಬಿಡುಗಡೆಗೂ ಮುನ್ನ ಪ್ರೀಮಿಯರ್ ಪ್ರದರ್ಶನದಲ್ಲಿ ಸುಮಾರು 160 ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಏಷಿಯನ್ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಹಾಗೂ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಹುಣಸೂರು ಕೃಷ್ಣಮೂರ್ತಿ ಹೆಸರಲ್ಲಿ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪುರಸ್ಕೃತವಾಗಿದೆ. ಮೆಲುಕು ಹಾಕುವ ಗೀತೆ ಬೇರೆ, ಮನ ಕಲಕುವ ಗೀತೆಯೇ ಬೇರೆ. ಮೆಲುಕು ಹಾಕುವ ಗೀತೆ ಖುಷಿ ಕೊಟ್ಟರೆ ಮನ ಕಲಕುವ ಗೀತೆ ಆನಂದ ತರುತ್ತದೆ. ಎಷ್ಟೋ ದಿನಗಳ ನಂತರ ಮೆಲುಕು ಹಾಕಬಹುದಾದ ಹಾಗೆಯೇ ಮನಕ್ಕೂ ತಟ್ಟುವ ಗೀತೆ ನೋಡಲಾಗದೇ ದೇವಾ ಎಂದು ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಹೇಳಿದ್ದಾರೆ.

ಹಿರಿಯ ನಟ ದತ್ತಣ್ಣ ಅವರು ಇದು ಒಂದು ಬಾರಿ ನೋಡಿ ಮರೆತು ಬಿಡಬಹುದಾದ ಚಿತ್ರವಲ್ಲ. ಪದೇ ಪದೇ ನೋಡಬಹುದಾದ, ನೋಡಬೇಕಾದ, ನೋಡಿದ ಅನುಭವವನ್ನು ಮೆಲುಕು ಹಾಕುತ್ತಾ ಅದರ ವಸ್ತು ವಿಶೇಷವನ್ನು ವಿಶ್ಲೇಷಣೆಗೆ ಒಳಗಾಗಿಸಿ ಅದರ ರಸ ಸ್ವಾದನೆಯನ್ನು ಹಿಗ್ಗಿಸಿಕೊಳ್ಳಬಹುದಾದ ಚಿತ್ರ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?