ರಾಘವಾಪುರಕ್ಕೆ ಶೀಘ್ರದಲ್ಲೇ ಕಬಿನಿ ನೀರಿನ ಸಂಪರ್ಕ

KannadaprabhaNewsNetwork |  
Published : Jul 11, 2025, 01:47 AM IST
ರಾಘವಾಪುರಕ್ಕೆ ಶೀಘ್ರದಲ್ಲೇ ಕಬಿನಿ ನೀರು | Kannada Prabha

ಸಾರಾಂಶ

ತಾಲೂಕಿನ ರಾಘವಾಪುರ ಜನತೆಗೆ ಕುಡಿಯಲು ಕಬಿನಿ ನೀರಿಲ್ಲ ಎಂಬ ಬೇಡಿಕೆ ಬಂದಿದೆ, ಅತೀ ಶೀಘ್ರದಲ್ಲೇ ಗ್ರಾಮಕ್ಕೆ ಕಬಿನಿ ನೀರಿನ ಸಂಪರ್ಕ ಕೊಡಿಸುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ರಾಘವಾಪುರ ಜನತೆಗೆ ಕುಡಿಯಲು ಕಬಿನಿ ನೀರಿಲ್ಲ ಎಂಬ ಬೇಡಿಕೆ ಬಂದಿದೆ, ಅತೀ ಶೀಘ್ರದಲ್ಲೇ ಗ್ರಾಮಕ್ಕೆ ಕಬಿನಿ ನೀರಿನ ಸಂಪರ್ಕ ಕೊಡಿಸುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಗ್ರಾಮದಲ್ಲಿ ಅಂಬೇಡ್ಕರ್‌ ಭವನ ಉದ್ಘಾಟಿಸಿದ ಬಳಿಕ ಮಾತನಾಡಿ, ಗ್ರಾಮದ ರಸ್ತೆ ಅಭಿವೃದ್ಧಿಯಾಗಬೇಕು ಎಂದು ಗ್ರಾಮಸ್ಥರು ಕೇಳಿದ್ದೀರಾ ಎಸ್‌ಇಪಿ ಅನುದಾನದಲ್ಲಿ ರಸ್ತೆನೂ ಮಾಡಿಸಿ ಕೊಡ್ತೀನಿ ಎಂದರು.

ಅಂಬೇಡ್ಕರ್‌ ಭವನ ಉದ್ಘಾಟನೆ ಆಗಿದೆ ಆದರೆ ಸಮುದಾಯ ಭವನಗಳಾದರೂ ಗ್ರಾಮಸ್ಥರು ಉಪಯೋಗಿಸುತ್ತಿಲ್ಲ ಎಂಬ ಮಾತಿದೆ,ಭವನ ಉಪಯೋಗಿಸದಿದ್ದರೆ ಭವನದಲ್ಲಿ ಪುಸ್ತಕಗಳನ್ನಿಟ್ಟು ಗ್ರಂಥಾಲಯವಾಗಿ ಬದಲಿಸಿ ಎಂದರು.

ಅಂಬೇಡ್ಕರ್‌ ಭವನ ಉಪಯೋಗಿಸದಿದ್ದರೆ ಕಟ್ಟಿಯೂ ಪ್ರಯೋಜನವಿಲ್ಲ.ಭವನದ ನಿರ್ವಹಣೆಯನ್ನೂ ಗ್ರಾಮಸ್ಥರೇ ಮಾಡಿಕೊಳ್ಳಬೇಕು ಆಗ ಮಾತ್ರ ಭವನ ಕಟ್ಟಿದ್ದಕ್ಕೂ ಸಾರ್ಥಕವಾಗಲಿದೆ. ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ ೨೦೧೬-೧೭ ನೇ ಸಾಲಿನಲ್ಲಿ ನಿಮ್ಮೂರಿನ ಅಂಬೇಡ್ಕರ್‌ ಭವನಕ್ಕೆ ಅನುದಾನ ನೀಡಿದ್ದರು.ಗ್ರಾಮಸ್ಥರು ಹಲವು ಬೇಡಿಕೆ ಇಟ್ಟಿದ್ದಾರೆ ಮುಂದಿನ ದಿನಗಳಲ್ಲಿ ಮಾಡಿಸಿಕೊಡುವುದಾಗಿ ಹೇಳಿದರು.

ಒಗ್ಗಟ್ಟಾಗಿರಿ

ಗ್ರಾಮಸ್ಥರು ಒಗ್ಗಟ್ಟಾಗಿದ್ದರೆ,ಗ್ರಾಮದ ಅಭಿವೃದ್ಧಿಯಾಗಲಿದೆ.ರಾಘವಾಪುರ ಗ್ರಾಮಸ್ಥರು ಒಗ್ಗಟ್ಟಾಗಿ ಬನ್ನಿ ಗ್ರಾಮದ ಕೆಲಸ,ಕಾರ್ಯಗಳು ಆಗಲಿವೆ.ನಿಮ್ಮ ಒಗ್ಗಟ್ಟು ಕಾಪಾಡಿದರೆ ನನಗೆ ಶಕ್ತಿ ಬರಲಿದೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯಿಲ್ಲ, ಅನುದಾನ ಬರುವುದು ಸ್ವಲ್ಪ ವಿಳಂಭವಾಗುತ್ತಿದೆ ಅಷ್ಟೆ. ಗ್ರಾಮದ ಮುಖಂಡ ಡಿ.ಶ್ರೀನಿವಾಸ ಮೂರ್ತಿ ಒಳ್ಳೆ ಕೆಲಸಗಾರ ಹಾಗು ಸಂಘಟಕರಾಗಿದ್ದರು. ಅವರ ನಿಧನದಿಂದ ಪಕ್ಷಕ್ಕೆ ನಷ್ಟ ಉಂಟಾಗಿದೆ ಎಂದು ಶ್ರೀನಿವಾಸ್‌ ಕುರಿತು ಮೆಲಕು ಹಾಕಿದರು.

ಗ್ರಾಪಂ ಅಧ್ಯಕ್ಷ ಆರ್.ಡಿ.ಉಲ್ಲಾಸ್‌,ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌,ಮೈಮುಲ್‌ ಮಾಜಿ ಅಧ್ಯಕ್ಷ ಎನ್.ಮಹದೇವಪ್ಪ,ಹಾಪ್‌ ಕಾಮ್ಸ್‌ ಎಂ.ನಾಗೇಶ್‌,ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು,ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾಪತಿ,ಗುತ್ತಿಗೆದಾರ ಚನ್ನಮಲ್ಲೀಪುರ ಬಸವಣ್ಣ,ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಸ್.ಮಹೇಶ್‌, ಡೇರಿ ಅಧ್ಯಕ್ಷ ಶಂಭುಲಿಂಗಸ್ವಾಮಿ,ಕಾಂಗ್ರೆಸ್‌ ಮುಖಂಡರಾದ ಸೋಮಹಳ್ಳಿ ವಿಷಕಂಠಮೂರ್ತಿ,ಬನ್ನಿತಾಳಪುರ ಕುಮಾರಸ್ವಾಮಿ,ಸಿದ್ದಪ್ಪಅಗತಗೌಡನಹಳ್ಳಿ,ರಾಜಪ್ಪ,ಗ್ರಾಪಂ ಸದಸ್ಯರಾದ ಆರ್.ಆರ್.ಗೋವಿಂದರಾಜು,ಸುಧಾರಾಣಿ,ಆರ್.ಜಿ.ಗೋವಿಂದರಾಜು ಸೇರಿದಂತೆ ಹಲವರಿದ್ದರು.

PREV