ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು, 1 ಕೋಟಿ 75 ಲಕ್ಷ ವೆಚ್ಚದ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು. ಪಂಚಾಯಿತಿ ಅಧ್ಯಕ್ಷೆ ಅಮಿತ ನಾಯ್ಕ, ಮಾಜಿ ಅಧ್ಯಕ್ಷ ದಿನೇಶ್ ಪೂಜಾರಿ, ಸದಸ್ಯರಾದ ಸುಕೇಶ್ ಶೆಟ್ಟಿ ಕೇಮಾರ್, ರಂಜಿತ್ ಭಂಡಾರಿ, ರೇಖಾ, ಯಶೋಧ, ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಹಿಂದುಳಿದ ಯುವ ಮೋರ್ಚಾ ಕಾರ್ಯದರ್ಶಿ ಸಂತೋಷ್ ಭಂಡಾರಿ, ಲಯನ್ ಸತೀಶ್ ಪ್ರಭು ಮಿತ್ತಬೈಲು ಹಾಗೂ ಸ್ಥಳೀಯರು ಇದ್ದರು.ಪಂಚಾಯಿತಿ ಸದಸ್ಯ ಸುಕೇಶ್ ಪೂಜಾರಿ ಸ್ವಾಗತಿಸಿದರು.
ಅಂಬೇಡ್ಕರ್ ಜಯಂತಿ:ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವ ಸಂಘ ಮೂಡುಬಿದಿರೆ ತಾಲೂಕು ಘಟಕ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 134 ನೇ ಜನ್ಮ ದಿನಾಚರಣೆ ಸಮಾಜ ಮಂದಿರ ಮಿನಿ ಹಾಲ್‌ನಲ್ಲಿ ನಡೆಯಿತು.
ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ್ ಮುಂದಲಮನಿ ದೀಪ ಪ್ರಜ್ವಲಿಸಿದರು. ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಮಾಜಿ ಗೌರವಾಧ್ಯಕ್ಷ ಶೀನಾ ಮಾಸ್ತಿಕಟ್ಟೆ ಡಾ. ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.ಆದಿದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಪಾಳ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಆದಿ ದ್ರಾವಿಡ ಸೇವಾ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ. ಆನಂದ್ ಕಾರ್ಲ, ಮೂಡುಬಿದಿರೆ ತಾಲೂಕಿನ ಉಪ ತಹಸೀಲ್ದಾರ್ ರಾಮು, ಮೂಡುಬಿದಿರೆಯ ಪೊಲೀಸ್ ಉಪ ನಿರೀಕ್ಷಕ ಕೃಷ್ಣಪ್ಪ ಮತ್ತಿತರರು ಇದ್ದರು.