ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜಾಸ್ಥಾನದ ಅಜ್ಮಿರ್‌ನಲ್ಲಿ ಅಡಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಇಂದು ಎಯು ಜ್ಯೂವೆಲ್ಲರಿ ಅಂಗಡಿಗೆ ಕರೆತಂದು ಮಹಜರು ನಡೆಸಿದರು. ಒಟ್ಟು ಮೂರು ಜನ ಕಳ್ಳರ ಪೈಕಿ ಇಬ್ಬರನ್ನು ಬಂಧಿಸಿರುವ ಪೊಲೀಸರು ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ
ಕಳೆದ ಡಿ. 23 ರಂದು ಮುಂಜಾನೆ 12ರಿಂದ 3 ಗಂಟೆಯ ನಡುವೆ ನಗರದ ಬಿಬಿ ರಸ್ತೆಯ ಎಯು ಜ್ಯೂವೆಲ್ಲರಿಯಲ್ಲಿ ದರೋಡೆ ನಡೆದು ಮೂರು ಕೋಟಿ ಬೆಲೆಯ 140 ಕೆಜಿ ಬೆಳ್ಳಿ ಒಡವೆಗಳನ್ನು ಕದ್ದು ಪರಾರಿಯಾಗಿದ್ದರು. ಕಳ್ಳರು ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೃಶ್ಯಗಳು ಆಧಾರದಲ್ಲಿ ಹುಡುಕಾಟ ನಡೆಸಿದ್ದರು. ಬಂಧಿತರನ್ನು ಪ್ರಮುಖ ಆರೋಪಿ ಹನುಮಂತ ಸಿಂಗ್, ರಾಜು ಎಂದು ಗುರ್ತಿಸಲಾಗಿದೆ. ಬಂಧಿತರಿಂದ 21 ಕೆಜಿ ಬೆಳ್ಳಿ ಜಪ್ತಿ ಮಾಡಿದ್ದಾರೆ.ಬಂಧಿತ ಇಬ್ಬರೂ ಮತ್ತು ತಲೆ ಮೆರೆಸಿಕೊಂಡಿರುವ ಮತ್ತೋಬ್ಬ ಸೇರಿ ಮೂವರು ದಾವಣಗೆರೆಯ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಬಂಗಾರದ ಅಂಗಡಿ ಕಳ್ಳತನ ಮಾಡಿದ್ದರು ಎನ್ನಲಾಗಿದ್ದು, ಬಂಧಿತ ಕಳ್ಳರನ್ನು ಮಂಗಳವಾರ ಪೊಲೀಸರು ಎಯು ಜ್ಯೂವೆಲ್ಲರಿ ಅಂಗಡಿಗೆ ಮಹಜರಿಗಾಗಿ ಕರೆತರಲಾಗಿತ್ತು.
ಸಿಕೆಬಿ-6 ಎ ಯು ಜೂವೆಲರಿ ಅಂಗಡಿಗೆ ಕನ್ನ ಹಾಕಿದ್ದ ಕಳ್ಳರನ್ನು ಮಹಜರ್ ಗಾಗಿ ಪೋಲಿಸರು ಕರೆತರುತ್ತಿರುವುದು