;Resize=(412,232))
ಕಲಬುರಗಿ : ಕಲಬುರಗಿಯ ಪ್ರತಿಷ್ಠಿತ ಶರಣಬಸವೇಶ್ವರ ರೆಸಿಡೆನ್ಸಿಯಲ್ (ಎಸ್.ಬಿ.ಆರ್.) ಪಬ್ಲಿಕ್ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು 2025–26ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದು ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಎಸ್‌ಬಿಆರ್ ಶಾಲೆಯ ಉಳಿದ ಮಕ್ಕಳು ಈ ಪರೀಕ್ಷೆಯಲ್ಲಿ ಅಸಾಧಾರಣ ಶೈಕ್ಷಣಿಕ ಮನ್ನಣೆ ಗಳಿಸುವ ಮೂಲಕ ಶೇಕಡಾವಾರು 98.24 ಉತ್ತೀರ್ಣತೆಯನ್ನು ದಾಖಲಿಸಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಶ್ರೇಷ್ಠತೆಗೆ ಕಲಬುರಗಿ ಎಸ್‌ಬಿಆರ್ ಮಕ್ಕಳ ಈ ಸಾಧನೆ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದೆ.
ಈ ಸಂಸ್ಥೆಯ ರಾಜ್ಯ ಮಟ್ಟದ ಸಾಧಕರಾಗಿ ಮೇಘನಾ ಎಂ.ಪಾಟೀಲ್-622/625 (99.52%) ಮತ್ತು ಮಾಧವಿ ಪ್ರಭಯ್ಯಾ - 622/625 (99.52%) ಅಂಕ ಪಡೆದು ರಾಜ್ಯದ 4ನೇ ಸ್ಥಾನದಲ್ಲಿ ಮಿಂಚಿದ್ದಾರೆ. ಇವರು ಜಿಲ್ಲೆಗೆ 2ನೇ ಟಾಪರ್ ಆಗಿ ಸಾಧನೆ ಮೆರೆದಿದ್ದಾರೆ. ಇದರೊಂದಿಗೆ ಎಸ್‌ಬಿಆರ್ ಜಿಲ್ಲೆಯಲ್ಲಿ ಪ್ರಥಮ ಶ್ರೇಯಾಂಕ ಪಡೆದು ಶೈಕ್ಷಣಿಕ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ.
ಎಸ್‌ಬಿಆರ್ ಶಾಲೆಯ ಶೈಕ್ಷಣಿಕ ಸಾಧನೆ ಅವಲೋಕಿಸಿದಾಗ 61 ಮಕ್ಕಳು ಶೇ.96ಕ್ಕಿಂತ ಹೆಚ್ಚು ಅಂಕ, 21 ಮಕ್ಕಳು ಶೇ.95 ಮತ್ತು ಶೇ.96 ಕ್ಕಿಂತ ಹೆಚ್ಚು ಅಂಕ, 256 ಮಕ್ಕಳು ಶೇ.85ಕ್ಕಿಂತ ಹೆಚ್ಚು ಅಂಕ ಪಡೆದು ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಇದೇ ಶಾಲೆಯ ಸಾತ್ವಿಕ್ ಡಿ.ಪಾಟೀಲ್ - 619/625 (ಶೇ.99.04), ಪ್ರಜ್ವಲ್ ಬಿ. ಪಾಟೀಲ್-618/625 (ಶೇ.98.88), ವಿನಯ್ ಆರ್.ಎಸ್. 618/625 (ಶೇ.98.88) ವಿಶೇಷ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಶಾಲೆಯ ಸಮಗ್ರ ಫಲಿತಾಂಶ ವಿಶ್ಲೇಷಣೆ ಮಾಡಲಾಗಿ 61 ಮಕ್ಕಳು 600ಕ್ಕಿಂತ ಹೆಚ್ಚು ಶೇ.96ಕ್ಕಿಂತ ಹೆಚ್ಚು ಶೇ.95.96, 21, 256 ಮಕ್ಕಳು ಶೇ.85ಕ್ಕಿಂತ ಹೆಚ್ಚು, 263 ಮಕ್ಕಳು ಮೊದಲ ದರ್ಜೆ ಶೇ.60 –ಶೇ.84ಕ್ಕಿಂತ ಹೆಚ್ಚು, 52 ಮಕ್ಕಳು ದ್ವಿತೀಯ ದರ್ಜೆ ಶೇ.50-59, 45- ಶೇ.50ಕ್ಕಿಂತ ಕಡಿಮೆ ತರಗತಿಯಲ್ಲಿ ಉತ್ತೀರ್ಣರಾಗಿದ್ದು ಸೇರಿದಂತೆ ಒಟ್ಟು 616 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಕನ್ನಡ-49 ವಿದ್ಯಾರ್ಥಿಗಳು, ಹಿಂದಿ-41 ವಿದ್ಯಾರ್ಥಿಗಳು, ವಿಜ್ಞಾನ-03 ವಿದ್ಯಾರ್ಥಿಗಳು, ಗಣಿತ-08 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ- 50 ವಿದ್ಯಾರ್ಥಿಗಳು 100/100 ಅಂಕಗಳು ಪಡೆದಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ। ದಾಕ್ಷಾಯಣಿ ಎಸ್.ಅಪ್ಪಾ, ಕಾರ್ಯದರ್ಶಿ ಬಸವರಾಜ ದೇಶಮುಖ್ ಅವರು ಎಸ್‌ಬಿಆರ್ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಶಾಲೆಯ ಪ್ರಾಚಾರ್ಯರು, ಹಿರಿಯ ಶಿಕ್ಷಣ ತಜ್ಞರಾದ ಎನ್‌ಎಸ್ ದೇವರಕಲ್ ಹಾಗೂ ಶಾಲೆಯ ಶಿಕ್ಷಕವರ್ಗ ಸಹ ಮಕ್ಕಳನ್ನು ಅಭಿನಂದಿಸಿದ್ದಾರೆ.