ಪತ್ನಿಯನ್ನು ಹೈವೇನಲ್ಲೇ ಕೊಚ್ಚಿ, ಆಕೆ ಶವದ ಮೇಲೆ ಕಾರು ಹರಿಸಿದ!

Published : Mar 27, 2026, 09:01 AM IST
CRIME NEWS

ಸಾರಾಂಶ

ಹಾಡಹಗಲೇ ಸಾರ್ವಜನಿಕರ ಎದುರು ಪತಿಯೊಬ್ಬ ಪತ್ನಿಯನ್ನು ಕೊಚ್ಚಿ ಕೊಂದು ಶವದ ಮೇಲೆ ಕಾರು ಹರಿಸಿ ವಿಕೃತಿ ಮೇರೆದಿರುವ ಭೀಭತ್ಸಕರ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಅಫಜಲಪುರ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ನಡೆದಿದೆ

 ಕಲಬುರಗಿ :  ಹಾಡಹಗಲೇ ಸಾರ್ವಜನಿಕರ ಎದುರು ಪತಿಯೊಬ್ಬ ಪತ್ನಿಯನ್ನು ಕೊಚ್ಚಿ ಕೊಂದು ಶವದ ಮೇಲೆ ಕಾರು ಹರಿಸಿ ವಿಕೃತಿ ಮೇರೆದಿರುವ ಭೀಭತ್ಸಕರ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಅಫಜಲಪುರ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ನಡೆದಿದ್ದು, ಪರಾರಿಯಾಗಲು ಯತ್ನಿಸಿದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಶೈಲಾ (28) ಕೊಲೆಯಾದ ದುರ್ದೈವಿ

ಮಹಾರಾಷ್ಟ್ರ ಮೂಲದ ಶೈಲಾ (28) ಕೊಲೆಯಾದ ದುರ್ದೈವಿ. ಈಕೆಯ ಪತಿ ಅಕ್ಷಯ್‌ ಬಂಧಿತ ಆರೋಪಿ.

ಶೈಲಾ ಜೊತೆ ಅಕ್ಷಯ್‌ ಕಾರಿನಲ್ಲಿ ಮಹಾರಾಷ್ಟ್ರದತ್ತ ಹೋಗುತ್ತಿದ್ದರು. ಬಳೂರಗಿ ಬಳಿ ಕಾರು ನಿಲ್ಲಿಸಿದ ಪತಿ ಮಟಮಟ ಮಧ್ಯಾಹ್ನ ರಸ್ತೆಮಧ್ಯೆ ಕಾರಿನಿಂದ ಪತ್ನಿಯನ್ನು ಬಲವಂತವಾಗಿ ಕೆಳಗೆ ತಳ್ಳಿದ್ದು, ಸಾರ್ವಜನಿಕರು ನೋಡು ನೋಡುತ್ತಿದ್ದಂತೆಯೇ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಆಕೆಯ ಕತ್ತು ಸೀಳಿದ್ದಾನೆ. ಪತಿಯಿಂದ ತಪ್ಪಿಸಿಕೊಂಡು ಹೆದ್ದಾರಿ ಪಕ್ಕದ ಜೋಳದ ಹೊಲಕ್ಕಿಳಿದ ಪತ್ನಿಯನ್ನು ಕಾರಿನಲ್ಲೇ ಬೆನ್ನಟ್ಟಿದ ಅಕ್ಷಯ್‌ ವೇಗವಾಗಿ ಆಕೆಯ ಮೇಲೆ ವಾಹನ ಹತ್ತಿಸಿದ್ದಾನೆ. ಅಷ್ಟೊತ್ತಿಗಾಗಲೇ ಶೈಲಾಳ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಕೊಲೆ ಮಾಡುತ್ತಿದ್ದ ವೇಳೆ ಸುತ್ತಲಿದ್ದ ಸಾರ್ವಜನಿಕರು, ಪತಿ-ಪತ್ನಿಯ ಜಗಳವನ್ನು ಬಿಡಿಸಿ ಆಕೆಯ ಸಹಾಯಕ್ಕೆ ಬರಲಿಲ್ಲ. ಬದಲಾಗಿ ರಕ್ಕಸತನವನ್ನು ತಮ್ಮ ಮೋಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್‌ ಮಾಡಿದ್ದಾರೆ. ಈ ಕೊಲೆಯ ಭಯಾನಕ ದೃಶ್ಯಗಳು ವೈರಲ್‌ ಆಗಿದ್ದು, ನೋಡುಗರ ಎದೆ ಝಲ್‌ ಎನ್ನಿಸುವಂತಿವೆ.

ಬೆನ್ನಟ್ಟಿ ಬಂಧಿಸಿದ ಪೊಲೀಸರು:

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಫಜಲಪುರ ಪೊಲೀಸರು, ಹಂತಕ ಅಕ್ಷಯ್‌ನನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ. ಪತ್ನಿ ಕೊಂದ ಪತಿ ಪೊಲೀಸರ ಮೇಲೆ ಕಲ್ಲು ತೂರಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಜೀವದ ಹಂಗು ತೊರೆದು ಹಂತಕನ ಬಂಧಿಸಿದ್ದಾರೆ.

PREV
Stay updated with the latest news from Kalaburagi district (ಕಲಬುರಗಿ ಸುದ್ದಿ) — covering agriculture and tur-dal production, local governance, industrial developments, district heritage & tourism, environment, education, community events and social issues across the district on Kannada Prabha.
Read more Articles on

Recommended Stories

ಕಲಬುರಗೀಲೂ ಶಿವಾಜಿ ಜಯಂತಿ ವೇಳೆ ಹಿಂದು-ಮುಸ್ಲಿಂ ಗಲಾಟೆ
ಗನ್ ಹಿಡಿದು ಡ್ಯಾನ್ಸ್ ಮಾಡಿದ ಕೈ ಮುಖಂಡ ಮತೀನ್‌ ಪಟೇಲ್‌!