ನ. 1ರಂದು ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಹುಟ್ಟು ಹಬ್ಬ ಜತೆಗೆ ನ.22ರಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರ ಜನ್ಮದಿನ. ಹೀಗಾಗಿ ನವೆಂಬರ್ ತಿಂಗಳು ಕಲ್ಯಾಣ ಕರ್ನಾಟಕದ ಭಕ್ತ ಸಮೂಹಕ್ಕೆ ಇದೊಂದು ಸುದಿನ. ಪೂಜ್ಯರೀರ್ವರ ಜನ್ಮದಿನಾಚರಣೆ ನ.1ರಂದು ಭಕ್ತರಿಂದ ಅದ್ಧೂರಿಯಾಗಿ ಆಚರಿಸಲ್ಪಡುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿನ. 1ರಂದು ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಹುಟ್ಟು ಹಬ್ಬ ಜತೆಗೆ ನ.22ರಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರ ಜನ್ಮದಿನ. ಹೀಗಾಗಿ ನವೆಂಬರ್ ತಿಂಗಳು ಕಲ್ಯಾಣ ಕರ್ನಾಟಕದ ಭಕ್ತ ಸಮೂಹಕ್ಕೆ ಇದೊಂದು ಸುದಿನ. ಪೂಜ್ಯರೀರ್ವರ ಜನ್ಮದಿನಾಚರಣೆ ನ.1ರಂದು ಭಕ್ತರಿಂದ ಅದ್ಧೂರಿಯಾಗಿ ಆಚರಿಸಲ್ಪಡುತ್ತಿದೆ.

ಕಲಬುರಗಿಯ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ ಆಶೀರ್ವಾದದಿಂದ, ಶರಣ ಸಂಸ್ಥಾನದ ಒಂದು ಧರ್ಮನಿಷ್ಠ ಕುಟುಂಬದಲ್ಲಿ ನ. 1 ರಂದು ಜನಿಸಿದ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದು, ದಿನನಿತ್ಯ ಪೂಜೆ, ಪುನಸ್ಕಾರ, ಮಂತ್ರ ಘೋಷಣೆ, ಆಧ್ಯಾತ್ಮಿಕತೆ, ತ್ರಿಕಾಲ ಪೂಜೆ ಹೀಗೆ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಾರೆ. ತಮ್ಮ ಕಿರು ವಯಸ್ಸಿನಲ್ಲಿಯೇ ಅಗಾಧ ಧಾರ್ಮಿಕ ಕಾರ್ಯಗಳು ಮತ್ತು ಆಚರಣೆಗಳೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಎಂದು ಪೀಠ ಅಲಂಕರಿಸಿರುವ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಬೆಳೆದಂತೆ, ಶಾಂತಿ, ಪ್ರೀತಿ ಮತ್ತು ಭಕ್ತಿ ಹರಡಲು ಪ್ರಯತ್ನಿಸುತ್ತಿರುವರು. ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರಿಗೆ ಗೋವುಗಳೆಂದರೆ ಬಹಳ ಪ್ರೀತಿ. ಸಂಸ್ಥಾನದ ಮಹಾಮನೆಯಲ್ಲಿ ಗೋವುಗಳಿಗೆ ಆಹಾರ ಕೊಡುವುದು ಅವರ ಪ್ರತಿ ನಿತ್ಯದ ಕೆಲಸ. ಭಕ್ತರು ಯಾರೇ ಬಂದರೂ ಅವರಿಗೆ ವಿನಮೃತೆಯಿಂದ ಕೈ ಮುಗಿದು ದಾಸೋಹ ಮಹಾಮನೆಯಲ್ಲಿ ಉಣಬಡಿಸುವರು. ದಿನಾಲೂ ಬೆಳಗ್ಗೆ ಲಿಂಗ ಪೂಜೆ ಮಾಡಿಕೊಂಡು, ಶರಣಬಸವೇಶ್ವರರ ಸನ್ನಿಧಿಗೆ ಭಕ್ತಿಯಿಂದ ನಮಸ್ಕರಿಸಿ ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗುವರು. ಅದೇ ರೀತಿ ತಮ್ಮ ಅಭ್ಯಾಸದ ಕಡೆಗೂ ಗಮನ ಹರಿಸುವರು. ಮನೆಗುರುಗಳಿಗೆ ಹಾಗೂ ಇತರ ಧರ್ಮ ಗುರುಗಳಿಗೆ ಬಹಳ ಭಕ್ತಿಯಿಂದ ಪಾದ ಪೂಜೆ ನೆರವೇರಿಸುವರು.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಅನೇಕ ಭಕ್ತರಿಗೆ ಆದರ್ಶವಾಗಿದ್ದಾರೆ. ಅವರು ಸಂಸ್ಥಾನದ ಆಚರಣೆಗಳು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಆಧ್ಯಾತ್ಮಿಕವಾಗಿ ಮತ್ತು ಭೌತಿಕವಾಗಿ ಅಭಿವೃದ್ಧಿ ಹೊಂದುವಂತೆ ಗಮನ ಹರಿಸುತ್ತಿದ್ದಾರೆ.ಧಾರ್ಮಿಕ ಆಚರಣೆ, ತತ್ವಶಾಸ್ತ್ರ ಮತ್ತು ಸಾಮಾಜಿಕ ಸೇವೆಯ ವಿವಿಧ ಅಂಶಗಳನ್ನು ಬಾಲ್ಯದಲ್ಲಿಯೇ ಕಲಿಯುತ್ತಿದ್ದಾರೆ. ಸೇವೆಗಿಂತ ಯಾವುದೇ ಧರ್ಮ ದೊಡ್ಡದಲ್ಲ ಎಂಬ ತತ್ವ ಸಾಕಾರಗೊಳಿಸುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ಶರಣ ಸಂಸ್ಥಾನವನ್ನು ಜ್ಞಾನೋದಯ ಮತ್ತು ಸಾಮಾಜಿಕ ಸೇವೆಯ ಕೇಂದ್ರವನ್ನಾಗಿ ಮಾಡುವ ಧ್ಯೇಯವನ್ನು ಹೊಂದಿದ್ದಾರೆ.

*ದಾಸೋಹ ಸಂಸ್ಕೃತಿಯ ಮಾತೋಶ್ರೀ: ನ. 22 ಶರಣರ ಭಕ್ತರೆಲ್ಲರಿಗೂ ಸಂತಸದ ದಿನ. ದಾಸೋಹ ಮನೆಯಲ್ಲಿ ಅನ್ನಪೂರ್ಣೆಶ್ವರಿ, ಶರಣ ಸಂಸ್ಥಾನದಲ್ಲಿ ಮಹಾಮಾತೆ, ಜ್ಞಾನ ದಾಸೋಹದಲ್ಲಿ ಸರಸ್ವತಿ ಹಾಗೂ ಎಲ್ಲಾ ಸದ್ಭಕ್ತರಿಗೂ ಅವ್ವಾಜಿಯೆಂದೇ ಖ್ಯಾತರಾದ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿವಿ ಕುಲಾಧಿಪತಿಗಳಾದ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರ ಜನ್ಮದಿನೋತ್ಸವ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡ ಏಕೈಕ ಸಂಸ್ಥಾನವಾಗಿ ಶರಣರ ದಾಸೋಹ ಪೀಠ ಕಂಗೊಳಿಸಲು ಡಾ. ಶರಣಬಸವಪ್ಪ ಅಪ್ಪಾಜಿಯವರ ದಾರಿಯಲ್ಲಿ ಸಾಗುತ್ತಿರುವ ಡಾ. ದಾಕ್ಷಾಯಿಣಿ ಅವ್ವಾಜಿಯವರ ಛಲ, ಬಲ ಎನ್ನಬಹುದು.

‘ದಾಸೋಹ’ ಸಂಸ್ಕೃತಿಯನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಂಡ ಅವ್ವಾಜಿಯವರು ಸಂಸ್ಥಾನದಲ್ಲಿ ಲಕ್ಷಾಂತರ ಹಸಿದ ಹೊಟ್ಟೆಗಳಿಗೆ ಅನ್ನದಾಸೋಹ ಮಾಡಿ, ಅನ್ನ ದಾಸೋಹದ ಜತೆಗೆ ಜ್ಞಾನ ದಾಸೋಹ ತಣಿಸುವತ್ತ ಅವ್ವಾಜಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೆಳಮಟ್ಟದ ಸಾಮಾಜಿಕ ಆರ್ಥಿಕ ಹಿನ್ನೆಲೆಯಿಂದ ಬಂದವರು, ಹೆಣ್ಣು ಮಕ್ಕಳು ಮತ್ತು ವಿಕಲಾಂಗ ಮಕ್ಕಳು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದಾಗಿದೆ. ಪ್ರಪಂಚವು ವೇಗವಾಗಿ ಬದಲಾಗುತ್ತಿದ್ದು, ಶಿಕ್ಷಣ ನೀಡುವ ವಿಧಾನವೂ ಸಹ ಬದಲಾಗುತ್ತಿದೆ ಎಂದು ಪೂಜ್ಯ ಡಾ. ಅವ್ವಾಜಿಯವರು ಗುರುತಿಸಿ, ಕಲಿಕೆಯನ್ನು ಹೆಚ್ಚು ಆಕರ್ಷಕವಾಗಿ, ಪ್ರಸ್ತುತವಾಗಿ ಮತ್ತು ಪ್ರಭಾವಶಾಲಿಯಾಗಿ ಮಾಡಲು ತಮ್ಮ ಸಂಸ್ಥೆಗಳಲ್ಲಿ ಹಲವಾರು ನವೀನ ವಿಧಾನಗಳನ್ನು ಪರಿಚಯಿಸಿದ್ದಾರೆ.ಶಿಕ್ಷಣಕ್ಕೆ ಹಾಗೂ ಸಮಾಜಕ್ಕೆ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ಅವ್ವಾಜಿಯವರಿಗೆ ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಹೀಗೆ ಅವ್ವಾಜಿಯವರು ಹತ್ತು ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ.