ಕನ್ನಡಪ್ರಭ ವಾರ್ತೆ ಮೈಸೂರು
ಇದೇ ಸಂದರ್ಭದಲ್ಲಿ ನೃತ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ತಮಿಳುನಾಡಿನ ಚೆನ್ನೈನ ಹೆಸರಾಂತ ನೃತ್ಯ ಗುರು ಪ್ರೊ. ಸಿಕ್ಕಿಲ್ ವಸಂತಕುಮಾರಿ ಅವರಿಗೆ ಕಲೆಮನೆ ಕಲಾಶ್ರೀ ಜೀವಮಾನ ಸಾಧನೆ ಪ್ರಶಸ್ತಿ, ಕೆನಡಾದ ಸಂಜಿ ಪಿರಂತಂಪನ್ ಅವರಿಗೆ ಕಲೆಮನೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರದ ಸಂಸ್ಥಾಪಕ ಡಾ.ಕೆ. ಕುಮಾರ್ ತಿಳಿಸಿದ್ದಾರೆ.
ಅಂಶಿ ಪ್ರಸನ್ನಕುಮಾರ್, ಲಲಿತಾರಾವ್, ಡಾ. ವಿ. ರಂಗನಾಥ್, ನಂದಿನಿ, ಜಮುನಾ ರಾಣಿ ವಿ. ಮಿರ್ಲೆ, ಸೀತಾರಾಮ್, ಬಾಲಕೃಷ್ಣಯ್ಯ, ಆರ್.ಜಿ. ಸಿಂಗ್, ಎಸ್. ರಾಧಾಕೃಷ್ಣ ಅತಿಥಿಗಳಾಗಿರುವರು.ಭಾರತೀಯ ಸಂತರು ರಚಿಸಿರುವ ಸಂಯೋಜನೆಗಳಿಗೆ ನೃತ್ಯ ಪ್ರದರ್ಶನವನ್ನು ಮತ್ತು ಸಂಗೀತ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಡಾ. ಕೆ. ಕುಮಾರ್ ಅವರ ಮಾರ್ಗದರ್ಶನದಲ್ಲಿ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳಿಂದ ಸಂತ ನಮನ- ಭರತನಾಟ್ಯ, ಸಂಜಿ ಪಿರಂತಪ್ಪನ್ ಅವರಿಂದ ಭರತನಾಟ್ಯ, ಆರತಿ ಅರುಣ್ ಅವರ ಶ್ರೀ ಗಣೇಶ ಸಂಗೀತ ನೃತ್ಯಾಲಯ ಚಾರಿಟಬಲ್ ಟ್ರಸ್ಟ್ ಶಿಷ್ಯರಿಂದ ಪುರಂದರ ನಮನ- ಭರತನಾಟ್ಯ, ಸೀಮಾ ಕೃಷ್ಣನ್ ಅವರ ಶಿಷ್ಯರಿಂದ ಪಾದಮೃತ- ಕಥಕ್ ನೃತ್ಯ ಪ್ರದರ್ಶನ. ರಮ್ಯಾ ರಾಮನಾರಾಯಣ್ ಅವರ ಶಿಷ್ಯರಾದ ರಕ್ಷಿತಾ ರಘುನಾಥನ್ ಮತ್ತು ಶ್ರ ರಾಗಿಣಿ ಮತ್ತು ಇವರ ಶಿಷ್ಯರಿಂದ ತ್ಯಾಗರಾಜ ಪಂಚರತ್ನ ನೃತ್ಯ ಪ್ರದರ್ಶನ ಇರುತ್ತದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಭಾಗವಹಿಸಿ ಭಾರತೀಯ ಸಂತರ ದರ್ಶನವನ್ನು ಪಡೆದುಕೊಳ್ಳುವಂತೆ ಡಾ.ಕೆ. ಕುಮಾರ್ ಕೋರಿದ್ದಾರೆ.