ಕಲ್ಲೋಳಿ ಬಸವೇಶ್ವರ ಸೌಹಾರ್ದ ಸಂಘಕ್ಕೆ ₹4.15 ಕೋಟಿ ಲಾಭ: ಬೆಳಕೂಡ

KannadaprabhaNewsNetwork |  
Published : Apr 03, 2025, 02:48 AM IST
ಮೂಡಲಗಿ | Kannada Prabha

ಸಾರಾಂಶ

ಮೂಡಲಗಿ ತಾಲೂಕಿನ ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರ ಸಂಘವು ಪ್ರಸಕ್ತ ಮಾರ್ಚ್‌ ಕೊನೆಯಲ್ಲಿ ₹4.15 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬಿ.ಬೆಳಕೂಡ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರ ಸಂಘವು ಪ್ರಸಕ್ತ ಮಾರ್ಚ್‌ ಕೊನೆಯಲ್ಲಿ ₹4.15 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬಿ.ಬೆಳಕೂಡ ಹೇಳಿದರು.

ಸಂಘದ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ₹98.57 ಕೋಟಿ ದುಡಿಯುವ ಬಂಡವಾಳ, ₹78.96 ಲಕ್ಷ ಶೇರು ಹಣ, ₹22.94 ಕೋಟಿ ನಿಧಿಗಳು, ₹74.85 ಕೋಟಿ ಠೇವುಗಳು ಹಾಗೂ ₹90.40 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲವನ್ನು ನೀಡಿದೆ ಎಂದರು. ಸಂಘವು ಸ್ಥಾಪನೆಯಾದಾಗಿನಿಂದ ಕಳೆದ 34 ವರ್ಷಗಳಿಂದ ನೂರಕ್ಕೆ ನೂರರಷ್ಟು ಸಾಲ ವಸೂಲಾತಿ ಮಾಡಿರುವ ಮತ್ತು ಕಳೆದ 25 ವರ್ಷಗಳಿಂದ ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ವಿತರಿಸುತ್ತಿರುವ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಗ್ರಾಹಕರಿಗೆ ಆರ್‌ಟಿಜಿಎಸ್, ನೆಪ್ಟ್, ಇ-ಸ್ಟಾಂಪ, ಎಟಿಎಂ, ಸೇಪ್ ಲಾಕರ್ ಸೌಲಭ್ಯ ಕಲ್ಪಿಸಿದ್ದು, ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ₹5 ಸಾವಿರ ಮರಣೋತ್ತರ ನಿಧಿ ಕೊಡುವುದು ಮತ್ತು ಪ್ರತಿ ವರ್ಷ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರನೀಡಲಾಗುತ್ತಿದೆ ಎಂದರು.ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶಿವರುದ್ರ ಬಿ.ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೋಶಿ, ಮಲ್ಲಪ್ಪ ಖಾನಾಪುರ, ರಾಮಪ್ಪ ದಬಾಡಿ, ಹನಮಂತ ಪರಕನಟ್ಟಿ, ಸುಭಾಸ ಖಾನಾಪುರ, ಬಸಪ್ಪ ಹೆಬ್ಬಾಳ, ದುಂಡವ್ವ ಭೀಮಪ್ಪ ಕಡಾಡಿ, ಲಕ್ಷ್ಮೀಬಾಯಿ ಮ.ಕಂಕಣವಾಡಿ, ಪ್ರಕಾಶ ಕಲಾಲ, ಮೊಮ್ಮದಶಫಿ ಮೋಕಾಶಿ, ಕಲ್ಲೋಳೆಪ್ಪ ತೆಳಗಡೆ ಹಾಗೂ ಪ್ರಧಾನ ವ್ಯವಸ್ಥಾಪಕ ಹನಮಂತಖಾನಗೌಡ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ