ಕಮಲಾಪುರ ಪಪಂ ನಿರ್ಲಕ್ಷ್ಯ: ದುರ್ವಾಸನೆ ಬೀರುತ್ತಿರುವ ಕಸದ ರಾಶಿ ಸಾರ್ವಜನಿಕರ ಪರದಾಟ

KannadaprabhaNewsNetwork |  
Published : Aug 20, 2026, 03:45 AM IST
ದಿನಸ,ಕಮಮೂಡ್, ಚೌಹಾಣ್ ತಾಂಡ ಸೇರಿದಂತೆ ಮೂರ್ನಾಲ್ಕು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು. | Kannada Prabha

ಸಾರಾಂಶ

Kamalapur PAPAM negligence: Public outrage over smelly garbage heap

-ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ । ಕಸದ ರಾಶಿಗಳಿಂದ ದಿನಸಿ ಗ್ರಾಮದ ಸಾರ್ವಜನಿಕರ ತೀವ್ರ ಪರದಾಟ

---

ಕನ್ನಡ ಪ್ರಭ ವಾರ್ತೆ ಕಮಲಾಪುರ

ಕಮಲಾಪುರ ಪ.ಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನವಸತಿ ಪ್ರದೇಶಗಳಲ್ಲಿ ಕೊಳೆತು ಗಬ್ಬು ನಾರುತ್ತಿರುವ ಕಸದ ರಾಶಿಗಳಿಂದ ದಿನಸಿ ಗ್ರಾಮದ ಸಾರ್ವಜನಿಕರು ತೀವ್ರ ಪರದಾಡುತ್ತಿದ್ದಾರೆ. ಕಸದ ಲಾಬಿಯಿಂದಾಗಿ ನೊಣ, ಸೊಳ್ಳೆಗಳ ತಾಣವಾಗುತ್ತಿದ್ದು. ಡೇಂಘೀ ಮತ್ತು ಚಿಕನ್ ಗುನ್ಯಾ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ ಆಗುತ್ತಿದೆ. ಕಮಲಾಪುರ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಕಸ ತಂದು ದಿನಸಿ ಗ್ರಾಮದ ಪಕ್ಕದಲ್ಲಿ, ದಿನಸಿ ತಾಂಡ, ಚೌಹಾಣ ತಾಂಡ, ಕಲಮೂಡ್, ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆ ಬದಿಗೆ ಕಸ ಸಂಗ್ರಹವಾಗುತ್ತಿರುವುದು ಜನರಿಗೆ ನಿತ್ಯ ದುರ್ವಾಸನೆಗೆ ರೋಸಿ ಹೋಗಿದ್ದಾರೆ. ಬಹು ದಿನಗಳಿಂದ ಕಸ ತೆರವುಗೊಳಿಸಿಲ್ಲವಾದ್ದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಸೊಳ್ಳೆಗಳ ಹಾವಳಿ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಯಿಂದ ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ. ರೋಗಗಳ ಭೀತಿ: ಮಳೆಗಾಲದಲ್ಲಿ ಕಸ ಕೊಳೆತು ಚರಂಡಿ ಆಗುವುದರಿಂದ ಡೆಂಘೀ, ಮಲೇರಿಯಾದಂತಹ ರೋಗಗಳು ಹಬ್ಬುವ ಆತಂಕ ಮನೆಮಾಡಿದೆ. ಜಾನುವಾರುಗಳಿಗೆ ಅಪಾಯ: ಪ್ಲಾಸ್ಟಿಕ್ ತ್ಯಾಜ್ಯವನ್ನು ತಿನ್ನುತ್ತಿರುವ ಮೂಕ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯ: ಸಾರ್ವಜನಿಕರು ನಿರಂತರ ದೂರು ನೀಡಿದರೂ ಕಸ ವಿಲೇವಾರಿ ಮಾಡುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ.ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಸದ ವಿಲೇವಾರಿ ಘಟಕ ನಿರ್ಮಿಸಿ ಅಪಾಯದಿಂದ ಸಾರ್ವಜನಿಕರಿಗೆ ರಕ್ಷಿಸಬೇಕು ಎಂದು ಒತ್ತಾಯಿಸಿದರು....ಕೋಟ್‌..ಕಸ ಸಂಗ್ರಹಿಸುತ್ತಿರುವ ಜಾಗ ಸರ್ಕಾರಿ ಜಾಗ ಇರುವುದರಿಂದ ಆ ಸ್ಥಳದಲ್ಲಿ ತಾತ್ಕಾಲಿಕವಾಗಿ ಸಂಗ್ರಹಿಸಲಾಗಿದ್ದು, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಈಗಾಗಲೇ 5.ಎಕರೆ ಜಮೀನು ಖರೀದಿಸಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ. ಜನರಿಗೆ ತೊಂದರೆ ಆಗದಂತೆ ಜೆಸಿಬಿ ಯಂತ್ರದಿಂದ ತೆರವುಗೊಳಿಸಲಾಗುವುದು.-ಲೊಕೇಶ ಪಪಂ ಇಂಜಿನಿಯರ್ ಕಮಲಾಪುರ....ಕೋಟ್‌..ನಿತ್ಯ ಕಸದ ರಾಶಿ ರಸ್ತೆಯ ಕಮಲಾಪುರ ಪಟ್ಟಣಕ್ಕೆ ವ್ಯಾಪಾರ ಕೇಂದ್ರಕ್ಕೆ ಮುಖ್ಯ ರಸ್ತೆಯಾಗಿದ್ದು, ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರು ಪ್ಲಾಸ್ಟಿಕ್ ಸೇವಿಸಿ ಆರೋಗ್ಯ ಹರಡುವ ಭೀತಿ ಎದುರಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಸವನ್ನು ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಗಾರಿಕೆ ಯಾಗಬೇಕಾಗುತ್ತದೆ. -ಹನುಮಂತ ರೆಡ್ಡಿ, ದಿನಸಿ ಗ್ರಾಮದ ನಿವಾಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಯಮ ಉಲ್ಲಂಘಿಸಿದ3 ಖಾಸಗಿ ವೈದ್ಯಕೀಯ ಸಂಸ್ಥೆ ಲೈಸೆನ್ಸ್‌ ರದ್ದು
ಸರ್ವರಿಗೂ ಸಮಾನ ಬಾಳುಸಿಗಲಿ: ಮುಖ್ಯಮಂತ್ರಿ ಚಂದ್ರು