ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕನಕದಾಸರ ೫೩೮ನೇ ಜಯಂತಿ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಇಂತಹ ಮಹಾನೀಯರ ವಚನಗಳ ಸಾರವನ್ನು ಸಮಾಜಕ್ಕೆ ತಿಳಿಸುವ ಅವಕಾಶವನ್ನು ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ರಾಮಚಂದ್ರಪ್ಪ, ಸಮಾಜದ ಎಲ್ಲಾ ಜಾತಿಗಳನ್ನು ಒಗ್ಗೂಡಿವ ಎಲ್ಲಾ ಅಂಶಗಳು ಕನಕದಾಸರ ಕೀರ್ತನೆಯಲ್ಲಿವೆ. ಜಾತಿ, ಜಾತಿಎಂದು ವಿಷಬೀಜ ಬಿತ್ತುವ ಸಮಾಜಕ್ಕೆ ಎಚ್ಚರಿಕೆ ಗಂಟೆಯನ್ನು ತಮ್ಮ ವಚನಗಳ ಮೂಲಕವೇ ನೀಡಿದ ಕನಕದಾಸರು ಸಮಾಜಕ್ಕೆ ಮಾದರಿ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಎಂ.ಕುಮಾರಸ್ವಾಮಿ, ಅಂಗಡಿರಮೇಶ್, ಗ್ರೇಡ್-೧ ಕಾರ್ಯದರ್ಶಿ ಡಿ.ತಿಪ್ಪೇಸ್ವಾಮಿ, ಲೆಕ್ಕಸಹಾಯಕಿ ವಿ.ಮಂಜುಳಾ, ಮುಖಂಡರಾದ ರಂಗಸ್ವಾಮಿ, ರವಿಕುಮಾರ್, ತಿಪ್ಪೇಸ್ವಾಮಿ, ಗ್ರಂಥಪಾಲಕ ನಿರಂಜನಮೂರ್ತಿ ಮುಂತಾದವರು ಭಾಗವಹಿಸಿದ್ದರು.