ನವಲಗುಂದ: ದಾಸಶ್ರೇಷ್ಠ ಕನಕದಾಸರು ಕೇವಲ ಕವಿಯಲ್ಲ, ಸಾಮಾಜಿಕ ಕ್ರಾಂತಿಯೂ ಹೌದು. ಸರ್ವ ಜನಾಂಗಗಳ ನಡುವೆ ಸಮಾನತೆ, ಸೌಹಾರ್ದತೆ ಮತ್ತು ಪ್ರೀತಿಯ ಸಂದೇಶವನ್ನು ತಮ್ಮ ಕಾವ್ಯದ ಮೂಲಕ ಹರಡಿದವರು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಕುಲ ಕುಲವೆಂದು ಹೊಡದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎಂಬ ಕನಕದಾಸ ವಾಣಿಯಂತೆ ಉಡುಪಿಯ ಕೃಷ್ಣ ದೇವರನ್ನೇ ಕೇವಲ ದೇವಸ್ಥಾನದ ಒಳಗಡೆ ಸೀಮಿತವಲ್ಲ, ಕೃಷ್ಣದೇವರನ್ನು ತನ್ನತ್ತ ಕಿಂಡಿಯ ಮೂಲಕ ನೋಡುವಂತೆ ಮಾಡಿದ ಮಹಾಪುರುಷ ಕನಕದಾಸರು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎನ್.ಎನ್. ಹಾಲಿಗೇರಿ, ಶಿವಾನಂದ ಕಂಬಳಿ, ಶಿವಾನಂದ ಕಿಲಾರಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ವೈಷ್ಣವಿ ಹರ್ಲಿ ಹಾಗೂ ರಾಷ್ಟ್ರಮಟ್ಟದ ಕರಾಟೆ ಕ್ರೀಡಾ ಪಟು ಅನುಷಾ ಬಾವಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.ಮಾಜಿ ಸಚಿವ ಕೆ.ಎನ್. ಗಡ್ಡಿ, ತಹಸೀಲ್ದಾರ್ ಸುಧೀರ ಸಾವಕಾರ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ಪಿಎಸ್ಐ ಜನಾರ್ಧನ ಭಟ್ರಳ್ಳಿ, ಕನಕ ಕಲ್ಯಾಣ ಮಂಟಪದ ಅಧ್ಯಕ್ಷೆ ಪ್ರೇಮಾ ನಾಯ್ಕರ, ವಿಧಾನಸಭಾ ಕ್ಷೇತ್ರದ ಯುವ ಕಾಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ, ಜೀವನ ಪವಾರ, ದೇವಪ್ಪ ರೋಣದ ಸೇರಿದಂತೆ ಹಲವರಿದ್ದರು.