ದಾರ್ಶನಿಕರಲ್ಲಿ ಕನಕದಾಸರು ದಾಸಶ್ರೇಷ್ಠ: ಮೋಹನ ರೆಡ್ಡಿ

KannadaprabhaNewsNetwork |  
Published : Nov 09, 2025, 01:30 AM IST
ಚಿತ್ರ 8ಬಿಡಿಆರ್61 | Kannada Prabha

ಸಾರಾಂಶ

ಸಂತರು ಶರಣರು ಕಾಲಕಾಲಕ್ಕೆ ಮನುಕುಲದ ಏಳ್ಗೆಗಾಗಿ ಶ್ರಮಿಸಿದ್ದಾರೆ. ಅಂಥಹ ದಾರ್ಶನಿಕರಲ್ಲಿ ಸಂತ ಕನಕದಾಸರು ಸರ್ವಶ್ರೇಷ್ಠರು ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಆಡಳಿತಾಧಿಕಾರಿ ಮೋಹನ ರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಸಂತರು ಶರಣರು ಕಾಲಕಾಲಕ್ಕೆ ಮನುಕುಲದ ಏಳ್ಗೆಗಾಗಿ ಶ್ರಮಿಸಿದ್ದಾರೆ. ಅಂಥಹ ದಾರ್ಶನಿಕರಲ್ಲಿ ಸಂತ ಕನಕದಾಸರು ಸರ್ವಶ್ರೇಷ್ಠರು ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಆಡಳಿತಾಧಿಕಾರಿ ಮೋಹನ ರೆಡ್ಡಿ ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಜಾತಿ ಕರ್ಮದೊಂದಿಗೆ ನಿರಂತರ ಹೋರಾಟ ಮಾಡಿ ಹಲವಾರು ಕೃತಿಗಳನ್ನು ರಚಿಸಿ ಕನಕದಾಸರು ಖ್ಯಾತರಾದರು.

ಬಡತನ ಸಿರಿತನದಲ್ಲಿ ಜ್ಞಾನ ಇರುವುದಿಲ್ಲ. ಸಮಾಜದಲ್ಲಿ ವಿವಿಧ ಜಾತಿಗಳಿಲ್ಲ. ಗಂಡು ಹೆಣ್ಣು ಎಂಬ ಎರಡೇ ಜಾತಿಗಳಿವೆ. ಕುಲಕುಲವೆಂದು ಹೊಡೆದಾಡದಿರಿ ಅದರಲ್ಲಿ ಏನೂ ಪ್ರಯೋಜನವಿಲ್ಲ. ಜಾತಿಗೆ ಎಂದೂ ಮನ್ನಣೆ ನೀಡದಂತೆ ಕನಕದಾಸರು ಸಾರಿದ್ದಾರೆ. ಅಂತಹ ಮಹಾತ್ಮರ ಆದರ್ಶ ವಿದ್ಯಾರ್ಥಿಗಳು ಅನುಸರಿಸಿ ತಮ್ಮ ಬದುಕು ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಶಿಕ್ಷಣ ಸಂಯೋಜಕ ಬಾಲಾಜಿ ವಲ್ಲೂರೆ, ಉಪನ್ಯಾಸಕರಾದ ರವಿ ಬಿರಾದಾರ್, ಲಚಮಾ ರೆಡ್ಡಿ, ಹಣಮಂತ ಜ್ಯಾಂತಿಕರ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ