ಕನ್ನಡಪ್ರಭ ವಾರ್ತೆ ಔರಾದ್
ಪಟ್ಟಣದ ತಹಸೀಲ್ ಕಛೇರಿಯಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ ಕನಕ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ಕನಕದಾಸರ ಕಿರ್ತನೆಗಳಲ್ಲಿ ಮಾನವೀಯತೆ, ಸರ್ವ ಧರ್ಮ ಸಮಾನತೆಯ ವಿಚಾರಗಳಿವೆ. ಕನಕದಾಸರು ಕನ್ನಡ ನಾಡು ಕಂಡ ಶ್ರೇಷ್ಠ ಚಿಂತಕ ಎಂದ ಅವರು, ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆಯ ವಿರುದ್ಧ ಬಂಡಾಯವೆದ್ಧ ಕನಕದಾಸ ಅನಿಷ್ಠ ಪದ್ದತಿ, ಆಚರಣೆಗಳಿಂದ ಕೂಡಿದ ಭಕ್ತಿ ಮನುಕುಲಕ್ಕೆ ಮಾರಕ ಎಂಬುದನ್ನು ಎಚ್ಚರಿಸಿದರು.
ತಹಸೀಲ್ದಾರ್ ಮಹೇಶ ಪಾಟೀಲ್ ಮಾತನಾಡಿ, ಕನ್ನಡ ಸಾಹಿತ್ಯದ ತೂಕ ಹೆಚ್ಚಿಸಿದ ಕನಕದಾಸರು ಬರೆದ ರಾಮಧಾನ್ಯ ಚರಿತೆ ಕೃತಿ ಮೇಲು ಕೀಳು ಎಂಬ ಮನಸ್ಥಿತಿಗೆ ಉತ್ತರಿಸಿದಂತಿದೆ. ಶ್ರಮಿಕವರ್ಗದವರೇ ದೇವರಿಗೆ ಪ್ರಿಯವಾಗಿರುತ್ತಾರೆ, ಬದುಕಿನಲ್ಲಿ ಗಟ್ಟಿಯಾಗಿರುತ್ತಾರೆ ಎಂದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಸರುಬಾಯಿ ಘುಳೆ, ಖಜಾನೆ ಅಧಿಕಾರಿ ಮಾಣಿಕ ನೇಳಗಿ, ಬಿಇಒ ರಂಗೇಶ, ಶಿವಕುಮಾರ ಘಾಟೆ, ಪಪಂ ಸದಸ್ಯ ಗುಂಡಪ್ಪ ಮುದಾಳೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ರಾಮಣ್ಣ ವಡೆಯರ್, ಡಾ. ವೈಜಿನಾಥ ಬುಟ್ಟೆ, ಶಿವಕುಮಾರ್ ಮೇತ್ರೆ, ಶಿವರಾಜ ಅಲಮಾಜೆ, ಶಿವಾಜಿರಾವ ಪಾಮುದಾಳೆ, ಶ್ರಾವಣಕುಮಾರ ಭಂಡೆ, ರಾಜಕುಮಾರ ಮುದಾಳೆ, ಅರ್ಜುನ ಭಂಗೆ, ಸಂತೋಷ ಮುದಾಳೆ, ಕೃಷ್ಣ ಸಾಗಾವೆ, ಬೀರಪ್ಪ ರಕ್ಷಾಳೆ, ಧನರಾಜ ಮಾನೆ ಸೇರಿದಂತೆ ಇನ್ನಿತರರಿದ್ದರು.
ಮೆರವಣಿಗೆಯು ಕನಕದಾಸ ವೃತ್ತದಿಂದ ಬಸವೇಶ್ವರ ವೃತ್ತ, ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ, ನ್ಯಾಯಾಲಯ ರಸ್ತೆಯಿಂದ ತಹಸೀಲ್ ಆವರಣಕ್ಕೆ ತೆರಳಿತು. ಮೆರವಣಿಗೆಯಲ್ಲಿ ಮಕ್ಕಳು, ಕಳಸ ಹೊತ್ತ ಮಹಿಳೆಯರು, ತಾಲೂಕು ಅಧಿಕಾರಿಗಳು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.