ಕನಕದಾಸರ ಅನಂತತೆ ಎಲ್ಲರಿಗೂ ಮಾದರಿ: ಎಸ್.ಎಚ್.ತಿಮ್ಮಣ್ಣ

KannadaprabhaNewsNetwork |  
Published : Nov 09, 2025, 01:45 AM IST
8 ಬೀರೂರು 2ಬೀರೂರು ಪಟ್ಟಣದ ಕುರುಬರ ಹಾಸ್ಟೆಲ್ ನಲ್ಲಿ ಶನಿವಾರ 538ನೇ ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ಕುರುಬರ ಸಂಘದ ವತಿಯಿಂದ ಹಾಗೂ 5ಅರಿವಾಣ ಗೌಡರ ವತಿಯಿಂದ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಬೀರೂರು, ಕನಕದಾಸರು ಕುರುಬ ಜನಾಂಗದಲ್ಲಿ ಜನಿಸಿದರೂ, ಕುರುಬರಾಗಿ ಉಳಿಯಲಿಲ್ಲ. ತಾಳ, ತಂಬೂರಿ ಹಿಡಿದು ಹರಿದಾಸರಾದರು. ಜನಿವಾರ ಧರಿಸಿ ಬ್ರಾಹ್ಮಣನಾಗಲಿಲ್ಲ ಅವರೊಬ್ಬ ವಿಶ್ವಮಾನವ, ವಿಶ್ವಬಂಧು, ದಾರ್ಶನಿಕ ಸಂತರಾದರು ಎಂದು ಬೀರೂರು ಕುರುಬರ ಸಂಘದ ಅಧ್ಯಕ್ಷ ಎಸ್.ಎಚ್.ತಿಮ್ಮಣ್ಣ ಹೇಳಿದರು.

ಬೀರೂರು ಕುರುಬರ ಸಂಘದಿಂದ ಕುರುಬರ ಹಾಸ್ಟೆಲ್ ನಲ್ಲಿ ಕನಕ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ, ಬೀರೂರು

ಕನಕದಾಸರು ಕುರುಬ ಜನಾಂಗದಲ್ಲಿ ಜನಿಸಿದರೂ, ಕುರುಬರಾಗಿ ಉಳಿಯಲಿಲ್ಲ. ತಾಳ, ತಂಬೂರಿ ಹಿಡಿದು ಹರಿದಾಸರಾದರು. ಜನಿವಾರ ಧರಿಸಿ ಬ್ರಾಹ್ಮಣನಾಗಲಿಲ್ಲ ಅವರೊಬ್ಬ ವಿಶ್ವಮಾನವ, ವಿಶ್ವಬಂಧು, ದಾರ್ಶನಿಕ ಸಂತರಾದರು ಎಂದು ಬೀರೂರು ಕುರುಬರ ಸಂಘದ ಅಧ್ಯಕ್ಷ ಎಸ್.ಎಚ್.ತಿಮ್ಮಣ್ಣ ಹೇಳಿದರು.

ಪಟ್ಟಣದ ಕುರುಬರ ಹಾಸ್ಟೆಲ್ ನಲ್ಲಿ ಶನಿವಾರ 538ನೇ ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಕುರುಬರ ಸಂಘದಿಂದ ಹಾಗೂ 5 ಅರಿವಾಣ ಗೌಡರಿಂದ ಸರಳವಾಗಿ ಕನಕದಾಸರ ಜಯಂತಿ ಆಚರಿಸಿ ಮಾತನಾಡಿದರು. ಕನಕದಾಸರ ಹೆಸರಿನ ಲ್ಲಿರುವ ಕನಕ ಎಂಬುದನ್ನು ಯಾವ ಕಡೆಯಿಂದ ಓದಿದರೂ ಹೇಗೆ ಕನಕ ಎಂಬ ಅರ್ಥ ಕೊಡುತ್ತದೆಯೋ, ಹಾಗೇ ಕನಕ ದಾಸರು ತಮ್ಮ ಬದುಕಿನುದ್ದಕ್ಕೂ ನಡೆ, ನುಡಿ, ಆಚಾರ, ವಿಚಾರಗಳಲ್ಲಿ ಬದಲಾವಣೆಗೊಂಡವರಲ್ಲ. ತಮ್ಮ ಸ್ವಂತಿಕೆ ಮೆರೆದವರು. ಯಾವುದೇ ಒಂದು ಜಾತಿ, ಮತ, ಪಂಥ, ಪ್ರದೇಶಕ್ಕೆ ಸೀಮಿತರಾದವರಲ್ಲ. ಜೀವ ಪರ ನಿಲುವು ತಾಳಿ ಇಡಿ ಬ್ರಹ್ಮಾಂಡವೇ ಒಂದು ಮನೆ, ಅಲ್ಲಿನ ಸಕಲ ಜೀವರಾಶಿಗಳೆಲ್ಲ ಒಂದೇ ಮನೆ ಸದಸ್ಯರು ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಪಿ.ನಾಗರಾಜ್ ಮಾತನಾಡಿ, ಸಮಾಜದಲ್ಲಿ ನೈತಿಕ, ಮೌಲ್ಯಗಳಿಲ್ಲದಿದ್ದರೆ ಆ ಸಮಾಜ ತನ್ನ ಸ್ವಾಸ್ಥ್ಯವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಿ ಕನಕದಾಸರು ಹಗಲಿರುಳು ರೀತಿ-ನೀತಿ ಕುರಿತು ಸಮಾಜಕ್ಕೆ ಅರಿವು ಮೂಡಿಸಿದ್ದಾರೆ. ಕನಕದಾಸರು ಆಧ್ಯಾತ್ಮದ ಮೂಲಕ ಜನಸಾಮಾನ್ಯರಲ್ಲಿ ಆತ್ಮಜ್ಞಾನ, ಆತ್ಮವಿಶ್ವಾಸ ತುಂಬಲು ಹೊರಟ ವರು. ಅಲ್ಲದೇ ಬ್ರಹ್ಮಾಂಡದ ಸಕಲ ಜೀವರಾಶಿಗಳ ಒಳಿತು ಬಯಸಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದವರು. ಹೀಗೆ ಹಲವು ದೃಷ್ಟಿಕೋನಗಳಿಂದ ಗಮನಿಸಿದಾಗ ಅವರ ಅನಂತತೆ ಅಪಾರವಾದುದು. ನಾಡಿನಲ್ಲಿ ಅಷ್ಟೇ ಅಲ್ಲ, ಭಾರತದೂದ್ದಕ್ಕೂ ಅವರ ಕುರಿತು ಅನೇಕ ಐತಿಹ್ಯ, ಕುರುಹು ದೊರೆಯುತ್ತವೆ. ಅವರು ಒಂದು ಜಾತಿ, ಮತ, ಪಂಥ, ಪ್ರದೇಶಕ್ಕೆ ಎಂದೂ ಸೀಮಿತ ವಾಗಲಾರರು ಎಂದರು.ಪುರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಶಶಿಧರ್ ಮಾತನಾಡಿ, ಕನಕದಾಸರು ಕೇವಲ ಸಂತರಾಗಿ ಮಾತ್ರವಲ್ಲ, ಒಬ್ಬ ಉತ್ಕಟ ಸಮಾಜ ಸುಧಾರಕರೂ ಆಗಿದ್ದರು. ಕನಕದಾಸರು ಸಮಾಜದಲ್ಲಿ ಸಮತೋಲನದ ಪ್ರತಿಪಾದನೆ ಮಾಡಿದವರು. ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಜಾತಿ ವ್ಯವಸ್ಥೆ ವಿರುದ್ಧ ನಿರಂತರ ಹೋರಾಟ ಮಾಡಿದವರು. ಅವರ ಬೋಧನೆ ಮತ್ತು ಕೆಲಸಗಳು ಸಾಮಾಜಿಕ ಅನ್ಯಾಯ ಬಹಿರಂಗವಾಗಿ ಟೀಕಿಸಿದವು. ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳನ್ನು ಪ್ರತಿಪಾದಿಸಿದವು. ಇದು ಕರ್ನಾಟಕದಲ್ಲಿ ಭಕ್ತಿ ಚಳುವಳಿ ಮೇಲೆ ಪ್ರಭಾವ ಬೀರಿತ್ತು. ಭಕ್ತಿ ಮತ್ತು ಒಳಗೊಳ್ಳುವಿಕೆ ಉತ್ತೇಜಿಸಿತು ಎಂದರು.ಇನ್ನರ್ ವ್ಹೀಲ್ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಕನಕರು ದೇವರಿಗೆ, ತಮ್ಮ ಆದಿಕೇಶವನಿಗೆ, ಉಡುಪಿ ಶ್ರೀಕೃಷ್ಣನಿಗೆ ಎಷ್ಟು ಪ್ರಿಯರೋ ಗೊತ್ತಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೂ ಹತ್ತಿರವಾಗಿ ಜೀವಪರವಾಗುವ, ಮನುಷ್ಯ ಸಮಾಜವನ್ನು ಜಾಗೃತಿಯಲ್ಲಿರಿಸುವ ಕಾರ್ಯ ಮಾಡಿರುವರು. ಅವರು ಸಾರಿದ ಬಹುದೊಡ್ಡ ಮಾತೃವಾತ್ಸಲ್ಯದ ಸಾದೃಶ್ಯ ತತ್ವವೆಂದರೆ- ಜಲವೇ ಸಕಲ ಕುಲಕ್ಕೂ ತಾಯಿ ಎಂಬುದು. ಜಲದಲ್ಲಿ ಕುಲವನರಸಬಾರದೆಂಬುದು. ಇಂತಹ ಸಮಾನತೆ ನಡೆ, ಆಶಯಗಳೇ ಅಂಬೇಡ್ಕರ್ ನೀಡಿದ ಸಂವಿಧಾನದ ಉಸಿರ ತಂತುಗಳಂತಿವೆ. ನಮ್ಮ ನುಡಿ ಇಂತಹ ಗುಡಿಗಾರರು ಇರುವುದರಿಂದಲೇ ಸಮಾಜ ಒಂದಿಷ್ಟು ಹಸನಾಗಿದೆ ಎಂದರು.ಈ ಸಂದರ್ಭದಲ್ಲಿ ಕುರುಬರ ಸಂಘದ ಖಜಾಂಚಿ ಕೆ.ಎಚ್.ಕರಿಯಪ್ಪ, ನಿರ್ದೇಶಕರಾದ ಗವಿರಂಗಪ್ಪ, ಕೆ.ಮಲ್ಲಪ್ಪ, ಎಲೆ ಕಂಠಪ್ಪ, ಮಂಜುನಾಥ್, ಬಿ,ಕೆ.ಕುಮಾರ್, ನಂಜುಂಡಪ್ಪ, ಹರಿಪ್ರಸಾದ್, ಎನ್.ಎಂ.ನಾಗರಾಜ್, ದಮಡಿ ಕಾಂತರಾಜ್ ಸೇರಿದಂತೆ ಮತ್ತಿತರ ಕುರುಬ ಸಮಾಜದ ಮುಖಂಡರು ಉಪಸ್ಥಿತರಿದ್ದರು.8 ಬೀರೂರು 2ಬೀರೂರು ಪಟ್ಟಣದ ಕುರುಬರ ಹಾಸ್ಟೆಲ್ ನಲ್ಲಿ ಶನಿವಾರ 538ನೇ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಕುರುಬರ ಸಂಘದಿಂದ ಹಾಗೂ 5 ಅರಿವಾಣ ಗೌಡರ ವತಿಯಿಂದ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಯಿತು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ