ಮುಂಡರಗಿ: ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರೂ ಒಬ್ಬರಾಗಿದ್ದರು. ಅವರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾಗಿದ್ದರು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಸೋಮವಾರ ಮುಂಡರಗಿ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಜರುಗಿದ ಭಕ್ತ ಕನಕದಾಸ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನಕದಾಸರು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಅವರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾರ ಸೇರಿದಂತೆ ಐದು ಮುಖ್ಯ ಕಾವ್ಯ ಕೃತಿಗಳನ್ನು ರಚಿಸಿದ್ದಾರೆ. ಸರ್ಕಾರ ಬಾಡದಲ್ಲಿ ಕನಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದೆ. ಉಡುಪಿ ಮತ್ತು ಧಾರವಾಡದಲ್ಲಿ ಅವರ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅವರ ಬಗ್ಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಅವರ ತತ್ವಾದರ್ಶಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದರು.
ಸುರೇಶ ಹಲವಾಗಲಿ, ಮಂಜುನಾಥ ಮುಂಡವಾಡ, ಎನ್.ಎಚ್. ಮುಂಡರಗಿ, ಶರಣಪ್ಪ ಮುದಿಯಜ್ಜನವರ, ಅಶ್ವಿನಿ ಬೀಡನಾಳ, ವೆಂಕಣ್ಣ ಯಕ್ಲಾಸಪುರ ಮಾತನಾಡಿ, ಭಕ್ತಿಯು ಬದುಕಿನ ಸಾಧನ ಸಾಧನವಾಗಲಿ, ಭಕ್ತಿಯಲ್ಲಿ ಮೌಢ್ಯತೆಗೆ ಅವಕಾಶವಿಲ್ಲದಿರಲಿ ಎಂಬ ಮಾತುಗಳ ಮೂಲಕ ಸಮಾಜವನ್ನು ತಿದ್ದಿ ತೀಡುವ ಕೆಲಸದಲ್ಲಿ ನಿರತರಾದ ದಾಸ ಶ್ರೇಷ್ಠರು ಮತ್ತು ದಾಸವರೇಣ್ಯರಲ್ಲಿ ಅಗ್ರಮಾನ್ಯರಾದವರೆಂದರೆ ಭಕ್ತಕನಕದಾಸರು ಎಂದರು.ಕಾರ್ಯಕ್ರಮದಲ್ಲಿ ವೀರಣ್ಣ ಮದ್ದಿನ, ಶಿವನಗೌಡ ಗೌಡರ, ಚಿನ್ನಪ್ಪ ವಡ್ಡಟ್ಟಿ, ಶ್ರೀನಿವಾಸ ಅಬ್ಬಿಗೇರಿ, ಮೈಲಾರಪ್ಪ ಕಲಕೇರಿ, ಲಕ್ಷ್ಮಣ ತಗಡಿನಮನಿ, ಜ್ಯೋತಿ ಕುರಿಯವರ, ಭುವನೇಶ್ವರಿ ಕಲ್ಲುಕುಟಗರ್, ಗಣೇಶ ಹಾತಲಗೇರಿ, ಶಂಕರ ಉಳ್ಳಾಗಡ್ಡಿ, ಮುತ್ತು ಬಳ್ಳಾರಿ, ರಮೇಶ ಹುಳಕಣ್ಣವರ, ಎಚ್.ಎಂ. ಪಡ್ನೇಶಿ, ಕಲ್ಮಠ, ಅರುಣಾ ಸೋರಗಾವಿ, ಎಂ.ಎಚ್. ಯರಗುಡಿ, ಪಿ.ಎಸ್.ಐ. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಸ್. ಬಿಚ್ಚಾಲಿ ನಿರೂಪಿಸಿದರು.