ಕನ್ನಡ ಆಡಳಿತ ಭಾಷೆಯೊಂದಿಗೆ ಬದುಕಿನ ಭಾಷೆ

KannadaprabhaNewsNetwork |  
Published : Nov 02, 2026, 03:00 AM IST
 | Kannada Prabha

ಸಾರಾಂಶ

ಕರ್ನಾಟಕದಲ್ಲಿ ಇಲಾಖೆಗಳು ಸರಕಾರಿ ಕಚೇರಿಗಳು ಮಾತ್ರವಾಗಿರದೆ ಜನಸೇವಾ ಕಚೇರಿಗಳಾಗುವದು ಸಹ ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ

ಅಳ್ನಾವರ: ರಾಜ್ಯದ ಉದಯ ನಮ್ಮೆಲ್ಲರ ಜೀವನದ ಮರು ಸೃಷ್ಟಿ ಎಂದೆನಿಸಿಕೊಳ್ಳುತ್ತಿದ್ದು, ಕನ್ನಡವು ಆಡಳಿತ ಭಾಷೆಯ ಜೊತೆಗೆ ಎಲ್ಲರ ಬದುಕಿನ ಭಾಷೆಯಾಗಿದ್ದು, ನಾಡಿನ ನೆಲ ಜಲ ಸಂರಕ್ಷಿಸಿಕೊಳ್ಳುವುದು ಮತ್ತು ಭಾಷೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂದು ಅಳ್ನಾವರದ ಪ್ರಭಾರಿ ತಹಶೀಲದಾರ ಎಚ್.ಎ.ಕೊಚ್ಚರಗಿ ಹೇಳಿದರು.

ಅಳ್ನಾವರದಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅವರು ದ್ವಜಾರೋಹಣ ನೇರವೇರಿಸಿ ಮಾತನಾಡಿ ಶ್ರೀಮಂತ ಮತ್ತು ಸಮೃದ್ಧ ಭಾಷೆಯಾಗಿರುವ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದ್ದು, ಕರ್ನಾಟಕದಲ್ಲಿ ಇಲಾಖೆಗಳು ಸರಕಾರಿ ಕಚೇರಿಗಳು ಮಾತ್ರವಾಗಿರದೆ ಜನಸೇವಾ ಕಚೇರಿಗಳಾಗುವದು ಸಹ ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ, ಇಲ್ಲಿನ ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ನಾವೆಲ್ಲ ಶ್ರಮಿಸಿ ಮಾದರಿ ಮತ್ತು ಭವ್ಯ ಕರ್ನಾಟಕ ನಿರ್ಮಾಣದಲ್ಲಿ ಕೈ ಜೋಡಿಸೋಣವೆಂದು ಹೇಳಿದರು,

ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಸಬನೀಸ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿದ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಮಾಡಿದವರನ್ನು ಸನ್ಮಾನಿಸಲಾಯಿತು.

ಬಸ್ ನಿಲ್ದಾಣದಿಂದ ಪ್ರಾರಂಭವಾದ ಕನ್ನಡಾಂಬೆಯ ಮೆರವಣಿಗೆಯಲ್ಲಿ ಅಧಿಕಾರಿಗಳು, ಶಾಲಾ ಮಕ್ಕಳು, ಸಾರ್ವಜನಿಕರು ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ ಇಒ ಪ್ರಶಾಂತ ತುರಕಾಣಿ, ತಾ.ಪಂ ಎಡಿ ಸಂತೋಷ ತಳಕಲ್, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ವಲಯ ಅರಣ್ಯಾಧಿಕಾರಿ ಬಸವಂತಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಜ್ಜಪ್ಪ ಕುರುಬರ, ಸಮುದಾಯ ಸಂಘಟನಾಧಿಕಾರಿ ಮಾಲತೇಶ ಬೆಂತೂರ, ಪರಶುರಾಮ ಬೇಕನೆಕರ, ಅಮುಲ ಗುಂಜೀಕರ, ಛಗನ ಪಟೇಲ, ಮಧು ಬಡಸ್ಕರ, ಸಂದೀಪ ಪಾಟೀಲ, ಸುವರ್ಣಾ ಕಡಕೋಳ, ದಸ್ತಗೀರ ಹುಣಸಿಕಟ್ಟಿ, ಪ್ರವೀಣ ಪವಾರ, ಸಿಆರ್.ಪಿ ಪ್ರಭಯ್ಯ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳು ಕನ್ನಡಾಭಿಮಾನಿಗಳು ಪಾಲ್ಘೊಂಡಿದ್ದರು.

ಸ್ವಾತಿ ನಂದಗಾವಿ ಸ್ವಾಗತಿಸಿದರು, ರವಿ ಮರೆಮ್ಮನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸ: ಚಂದ್ರಶೇಖರ ಗಾಳಿ
ಧಾರವಾಡದಲ್ಲಿ ಅರ್ಥಪೂರ್ಣ 71ನೇ ರಾಜ್ಯೋತ್ಸವ