ಕನ್ನಡ ಜ್ಯೋತಿ ರಥಕ್ಕೆ ಮುನಿರಾಬಾದಿನಲ್ಲಿ ಅದ್ಧೂರಿ ಸ್ವಾಗತ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಕನ್ನಡದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿಯಲ್ಲಿ ಚಾಲನೆ ನೀಡಿದ ನಂತರ ಕನ್ನಡ ಜ್ಯೋತಿ ಯಾತ್ರೆ ವಿಜಯನಗರ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದಿಗೆ ಪ್ರವೇಶಿಸಿತು. ಈ ವೇಳೆ ರಥಕ್ಕೆ ಮಹಿಳೆಯರಿಂದ ಪೂರ್ಣಕುಂಬದ ಸ್ವಾಗತ ನೀಡಲಾಯಿತು. 100ಕ್ಕೂ ಅಧಿಕ ಮಹಿಳೆಯರು ರಥಕ್ಕೆ ಆರತಿ ಬೆಳಗಿದರು.

ಮುನಿರಾಬಾದ: ಕನ್ನಡದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿಯಲ್ಲಿ ಚಾಲನೆ ನೀಡಿದ ನಂತರ ಕನ್ನಡ ಜ್ಯೋತಿ ಯಾತ್ರೆ ವಿಜಯನಗರ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದಿಗೆ ಪ್ರವೇಶಿಸಿತು. ಈ ವೇಳೆ ರಥಕ್ಕೆ ಮಹಿಳೆಯರಿಂದ ಪೂರ್ಣಕುಂಬದ ಸ್ವಾಗತ ನೀಡಲಾಯಿತು. 100ಕ್ಕೂ ಅಧಿಕ ಮಹಿಳೆಯರು ರಥಕ್ಕೆ ಆರತಿ ಬೆಳಗಿದರು.

ಜಿಲ್ಲೆ ಪ್ರವೇಶಿಸಿದ ಕನ್ನಡ ಜ್ಯೋತಿ ರಥಕ್ಕೆ ಸಂಸದ ಕರಡಿ ಸಂಗಣ್ಣ, ಶಾಸಕ ಜನಾರ್ದನ ರೆಡ್ಡಿ, ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್‌ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡೆ ಜಿಲ್ಲೆಯ ಗಡಿಭಾಗದಲ್ಲಿ ರಥ ಸ್ವಾಗತಿಸಿದರು.

200ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಕೋಲಾಟದ ಪ್ರದರ್ಶನ ನೀಡಿದರು. ಸಂಸದ, ಶಾಸಕರು ಶಾಲಾ ಮಕ್ಕಳೊಂದಿಗೆ ಕೋಲಾಟ ಆಡಿದರು. ವಿವಿಧ ಕಲಾ ತಂಡಗಳು, ಡೊಳ್ಳು ಕುಣಿತ, ಮೆರವಣಿಗೆಗೆ ರಂಗು ನೀಡಿತು. ಸುಮಾರು 5ಸಾವಿರಕ್ಕೂ ಅಧಿಕ ಜನರು ಕನ್ನಡ ಜ್ಯೋತಿ ರಥಕ್ಕೆ ಪುಷ್ಪಗುಚ್ಚ ಮಾಡಿ ಸ್ವಾಗತ ನೀಡಿದರು.

ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು, ಮುನಿರಾಬಾದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share this article