ಕುಕುನೂರು: ಕನ್ನಡ ನಾಡಿನ ನೆಲ,ಜಲ, ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಎಲ್ಲರೂ ಒಗ್ಗಟ್ಟಾಗಿ ರಕ್ಷಿಸಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಳಕಪ್ಪ ಕುಂಬಾರ ಹೇಳಿದರು.
ನಮ್ಮ ಮಾತೃಭಾಷೆ ಕನ್ನಡ ಉಳಿಸಿಕೊಂಡು ಹೋಗಲು ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಸಹಕಾರಿಯಾಗಿದೆ. ಅಲ್ಲದೆ ಕನ್ನಡದ ಪ್ರೇಮ ಪ್ರತಿಯೊಬ್ಬರಲ್ಲಿ ಮೂಡಬೇಕು ಮತ್ತು ದತ್ತಿ ದಾನಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಸದಾ ಅಭಿನಂದಿಸುತ್ತದೆ ಎಂದರು.
ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಬಸವಂತಪ್ಪ ದೊಡ್ಡಮನಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ದತ್ತಿ ಉಪನ್ಯಾಸಗಳ ಪಾತ್ರ ಮಹತ್ತರವಾದದ್ದು ಎಂದರು.ಶಿಕ್ಷಕಿ ಜ್ಯೋತಿ ವಿಜಯ ಕುಮಾರ್ ಮುಧೋಳ ಅವರು ಶರಣರ ಸಾಹಿತ್ಯ ಭಾರತೀಯ ಕೃಷಿ ಮತ್ತು ಸಂಸ್ಕೃತಿ,ಶಿಕ್ಷಕ ಮಹಾಂತೇಶ ಅಂಗಡಿ ಅವರು,ಏರಿ ಮಣ್ಣಿನ ಹೊಲಕ್ಕೆ ಉಸಿಕಿನ ಹೊದಿಕೆ ಮತ್ತು ಕೃಷಿ, ಶಿಕ್ಷಕ ಬಸವರಾಜ್ ಉಪ್ಪಿನ್ ಅವರು ನಾಡು ನುಡಿ ಬೆಳವಣಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಅಭಿವೃದ್ಧಿ ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಅಶೋಕ ಮಾದಿನೂರು, ಎಚ್.ಕೆ.ಕುರಿ, ಹನುಮಂತ ಹಿರೇಮನಿ, ರಮೇಶ್ ಕುಲಕರ್ಣಿ, ಯೋಗಪ್ಪ ಮಂಗಳೂರು, ಕಸಾಪ ಪದಾಧಿಕಾರಿ ಭೀಮರೆಡ್ಡಿ ಶಾಡ್ಲಿಗೇರಿ, ಪ್ರಧಾನ ಕಾರ್ಯದರ್ಶಿ ಫೀರಸಾಬ್ ದಫೇದಾರ್, ಪತ್ರಕರ್ತ ನಾಗರಾಜ್ ಬೆಣಕಲ್, ಚಂದ್ರು ಬಾನಾಪುರ, ಚೆನ್ನಯ್ಯ ಹಿರೇಮಠ ಇತರರಿದ್ದರು.