ರಾಜ್ಯದ ಪ್ರತಿಷ್ಠಿತ ಕನ್ನಡಪ್ರಭ ದಿನಪತ್ರಿಕೆಯ 2026ರ ದೀಪಾವಳಿ ವಿಶೇಷಾಂಕವು ಉತ್ತಮ ಬರಹ, ಚಿತ್ರಗಳಿಂದ ಸಮೃದ್ಧ, ಪರಿಪೂರ್ಣವಾಗಿ ಮೂಡಿ ಬಂದಿದೆ. ಇದು ಕನ್ನಡಪ್ರಭದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ವಿಶೇಷಾಂಕವನ್ನು ಓದಿ ಕನ್ನಡಪ್ರಭದ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
- ಚನ್ನಗಿರಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ ಮೆಚ್ಚುಗೆ
- - -
ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದ ಪ್ರತಿಷ್ಠಿತ ಕನ್ನಡಪ್ರಭ ದಿನಪತ್ರಿಕೆಯ 2026ರ ದೀಪಾವಳಿ ವಿಶೇಷಾಂಕವು ಉತ್ತಮ ಬರಹ, ಚಿತ್ರಗಳಿಂದ ಸಮೃದ್ಧ, ಪರಿಪೂರ್ಣವಾಗಿ ಮೂಡಿ ಬಂದಿದೆ. ಇದು ಕನ್ನಡಪ್ರಭದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ವಿಶೇಷಾಂಕವನ್ನು ಓದಿ ಕನ್ನಡಪ್ರಭದ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ವಿಶೇಷಾಂಕವು ವರ್ಷದಿಂದ ವರ್ಷಕ್ಕೆ ತನ್ನ ವಿಚಾರವನ್ನು ಓದುಗರಿಗೆ ಆಕರ್ಷಕ ಹಾಗೂ ಪರಿಣಾಮಕಾರಿಯಾಗಿ ತಿಳಿಸುವಲ್ಲಿ ಯಶಸ್ವಿಯಾಗಿದೆ. ಕಾಲಮಾನಕ್ಕೆ ತಕ್ಕಂತಹ ಬರಹಗಳಿಂದ ನಾಡಿನ ಕನ್ನಡಿಗರ ಮನಗೆಲ್ಲುತ್ತಿದೆ ಎಂದು ಹೇಳಿದ್ದಾರೆ.
ಈ ಬಾರಿಯ ವಿಶೇಷಾಂಕದಲ್ಲಿ ಓದುಗರ ಮನ ಸೆಳೆಯುವಂತಹ ಬಾಲಕರಿಂದ ಹಿಡಿದು ವೃದ್ಧರವರೆಗೂ ಬೇಕಾದಂತಹ ವಿಚಾರಗಳು ಪ್ರಕಟಗೊಂಡಿವೆ. ಕವಿತೆಗಳು, ಕಥೆಗಳು, ಪ್ರಭಂದ ಮುಂತಾದ ಬರಹಗಳಿವೆ. ಇವುಗಳ ಜೊತೆಗೆ ದೀಪಾವಳಿಯ ಗೋಚಾರದ ಫಲಗಳ ಬಗ್ಗೆ ಪ್ರಕಟಗೊಂಡಿರುವ ರಾಶಿ ಭವಿಷ್ಯವು ಆಯಾ ರಾಶಿಗಳಿಗೆ ಅನುಗುಣವಾಗಿ ಶೇ.90ರಷ್ಟು ಸರಿಯಾಗಿ ತಿಳಿಸಲಾಗಿದೆ. ಈ ರಾಶಿಫಲಗಳು ಫಲಪ್ರದವಾಗಿದ್ದು ಇದೊಂದು ಸಂಗ್ರಹಕ್ಕೆ ಯೋಗ್ಯವಾದ ವಿಶೇಷಾಂಕವಾಗಿದೆ. ಇಂತಹ ಅರ್ಥಪೂರ್ಣ ವಿಶೇಷಾಂಕವನ್ನು ಪ್ರತಿ ವರ್ಷವೂ ಅಂದವಾಗಿ ಹೊರತರುತ್ತಿರುವ ಕನ್ನಡಪ್ರಭ ಬಳಗದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- - -
-9ಕೆಸಿಎನ್ಜಿ1: ಕನ್ನಡಪ್ರಭ ದೀಪಾವಳಿ ವಿಶೇಷಾಂಕವನ್ನು ಓದುತ್ತಿರುವ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.