ಕನ್ನಡ ಸುಂದರ- ಸುಲಲಿತ ಭಾಷೆ : ರವೀಂದ್ರ ನಾಯಕ್

KannadaprabhaNewsNetwork |  
Published : Nov 13, 2024, 12:52 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು: ಕಲಿಯೋಕೆ ಕೋಟಿ ಭಾಷೆ ಇದ್ದರೂ ಸಹ ಆಡೋಕೆ ಒಂದೇ ಭಾಷೆಯಾಗಿರುವ ನಮ್ಮ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ರವೀಂದ್ರ ನಾಯಕ್ ಹೇಳಿದರು.

ಹಿರಿಯೂರು: ಕಲಿಯೋಕೆ ಕೋಟಿ ಭಾಷೆ ಇದ್ದರೂ ಸಹ ಆಡೋಕೆ ಒಂದೇ ಭಾಷೆಯಾಗಿರುವ ನಮ್ಮ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ರವೀಂದ್ರ ನಾಯಕ್ ಹೇಳಿದರು.

ತಾಲೂಕಿನ ಯಲ್ಲದಕೆರೆಯ ಶ್ರೀ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಪ್ರಜ್ಞೆ - ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಸುಲಲಿತವಾದ ಮತ್ತು ಸುಂದರವಾದ ಭಾಷೆಯಾಗಿದೆ. ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಭಾಷೆಯ ಮೇಲೆ ಅಭಿಮಾನ ಗೌರವ ಇರಬೇಕು. ನಾಡು ನುಡಿಯ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು ಎಂದರು.

ಸಂಸ್ಥೆಯ ಮುಖ್ಯಸ್ಥ ಬಿ.ಜಿ.ಮನೋಹರ್ ಮಾತನಾಡಿ, ಕನ್ನಡದ ಏಕೀಕರಣ ಹಾಗೂ ಸ್ವತಂತ್ರ ಹೋರಾಟದಲ್ಲಿ ಕನ್ನಡಿಗರ ತ್ಯಾಗ ಬಲಿದಾನವನ್ನು ನಾವ್ಯಾರು ಮರೆಯಬಾರದು ಎಂದರು.

ಶಾಲೆಯ ಮುಖ್ಯ ಶಿಕ್ಷಕ ಆರ್‌.ಬಿ.ಸುರೇಶ್ ಮಾತನಾಡಿ, ಕನ್ನಡದ ಇತಿಹಾಸ, ಕನ್ನಡ ನಾಡು ನುಡಿ, ಭಾಷೆ, ಕಲೆಗಾಗಿ ದುಡಿದ ಮಹನೀಯರ ಸಾಧನೆ ತುಂಬಾ ಹಿರಿದಾದದ್ದು ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಮಂಜುನಾಥ್, ಶಿಕ್ಷಕ ಹರೀಶ್, ಶಿಕ್ಷಕಿ ನಾಗವೇಣಿ, ಶಿಕ್ಷಕರಾದ ಟಿ.ರಂಗಸ್ವಾಮಿ, ವಿ.ರಂಗಸ್ವಾಮಿ, ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌