ನಗರದ ಗೋರಿಗುಡ್ಡ ಕಿಟಲ್ ಮೆಮೋರಿಯಲ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಕನ್ನಡಪ್ರಭ’ ದಿನಪತ್ರಿಕೆ ವತಿಯಿಂದ ಪ್ರಕಟವಾಗುವ ಶಿಕ್ಷಣ ಮಾರ್ಗದರ್ಶಿಯ ಉಚಿತ ವಿತರಣೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನಡೆಯಿತು.
ಮಂಗಳೂರು: ನಗರದ ಗೋರಿಗುಡ್ಡ ಕಿಟಲ್ ಮೆಮೋರಿಯಲ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಕನ್ನಡಪ್ರಭ’ ದಿನಪತ್ರಿಕೆ ವತಿಯಿಂದ ಪ್ರಕಟವಾಗುವ ಶಿಕ್ಷಣ ಮಾರ್ಗದರ್ಶಿಯ ಉಚಿತ ವಿತರಣೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನಡೆಯಿತು.
ಖ್ಯಾತ ದಂತ ವೈದ್ಯ, ಸಾಮಾಜಿಕ ಚಿಂತಕ ಡಾ.ಮುರಲೀ ಮೋಹನ ಚೂಂತಾರು ಶೈಕ್ಷಣಿಕ ಮಾರ್ಗದರ್ಶಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಮಾರ್ಗದರ್ಶಿಯ ಪ್ರಯೋಜನ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಇಂದಿನಿಂದಲೇ ಪಣ ತೊಡಬೇಕು ಎಂದು ಕರೆ ನೀಡಿದರು.
‘ಕನ್ನಡಪ್ರಭ’ ಪತ್ರಿಕೆಯ ಪ್ರಸರಣಾ ವ್ಯವಸ್ಥಾಪಕ ಪ್ರಶಾಂತ್ ನಿಡ್ಲೆ ಶಿಕ್ಷಣ ಮಾರ್ಗದರ್ಶಿ ಬಗ್ಗೆ ಮಾಹಿತಿ ನೀಡಿದರು. ಪ್ರಸರಣಾಧಿಕಾರಿ ಅನಿಲ್ ಕುಮಾರ್, ವಿಠಲ್ ಮತ್ತಿತರರು ಇದ್ದರು. ಶಿಕ್ಷಕ ಫೆಲಿಕ್ಸ್ ಡಿಸೋಜಾ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.