ನ.೯ ರಂದು ಕನ್ನಿಕಶಿಲ್ಪ ನವೋದಯ ಟ್ರಸ್ಟ್‌ಗೆ ಮೂವತ್ತರ ಸಂಭ್ರಮ..!

KannadaprabhaNewsNetwork |  
Published : Nov 07, 2025, 01:30 AM IST
ಕೃತಿ ಲೋಕಾರ್ಪಣೆ | Kannada Prabha

ಸಾರಾಂಶ

ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನ ೩೦ರ ಸಂಭ್ರಮದ ಅಂಗವಾಗಿ ನ.೦೯ ರಂದು ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕೃತಿ ಲೋಕಾರ್ಪಣೆ- ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನ ೩೦ರ ಸಂಭ್ರಮದ ಅಂಗವಾಗಿ ನ.೦೯ ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕೃತಿ ಲೋಕಾರ್ಪಣೆ- ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ರಾಮಕೃಷ್ಣ ಹಾಗೂ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ತಿಳಿಸಿದರು.

ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗ ಮಹಾಸ್ವಾಮಿ ಹಾಗೂ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಟಿ.ತಿಮ್ಮೇಗೌಡ ಆಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉದ್ಘಾಟಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪ್ರಶಸ್ತಿ ಪುರಸ್ಕೃತರಿಗೆ ಕರ್ನಾಟಲ ರಾಜ್ಯ ಒಕ್ಕಲಿಗರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಶಿಕ್ಷಕರ ಪ್ರಬಂಧ ಸ್ಪರ್ಧೆ ವಿಜೇತರಿಗೆ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ವಿಜಯಲಕ್ಷ್ಮೀ ರಘುನಂದನ್ ಬಹುಮಾನ ವಿತರಿಸುವವರು ಎಂದು ತಿಳಿಸಿದರು.

ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶ್ರೀ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಪ್ರಶಸ್ತಿ ಪತ್ರ ವಿತರಣೆ ಮಾಡುವರು. ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಹೆಚ್.ಆರ್.ಕನ್ನಿಕಾರವರ "ಪರಮಪುರುಷ ಪರಮಹಂಸ " ಕೃತಿ ಲೋಕಾರ್ಪಣೆ ಮತ್ತು ಪರಿಚಯವನ್ನು ಸಾಹಿತಿ ಡಾ.ಪ್ರದೀಪ ಕುಮಾರ ಹೆಬ್ರಿ ಮಾಡಿಕೊಡುವರು ಎಂದು ತಿಳಿಸಿದರು.

ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಕುವೆಂಪು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪುರಸ್ಕೃತರಿಗೆ ತಲಾ ೫ ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು ಎಂದರು.

ಪ್ರಶಸ್ತಿ ಪುರಸ್ಕೃತರ ವಿವರ:

ಎಸ್.ರಾಜರತ್ನಂ (ಸಮಾಜಸೇವೆ), ಡಾ.ಕೆ.ಎಂ. ವಸುಂಧರಾ (ಆಡಳಿತ), ಎಚ್.ಜಿ.ಶಿವಕುಮಾರ್ (ಕೃಷಿ), ಬೇಲೂರು ಸೋಮಶೇಖರ್ (ಸಹಕಾರ), ಕೆ.ಎನ್.ಮಂಜುನಾಥ (ಮಾಧ್ಯಮ ಕ್ಷೇತ್ರ), ಟಿ.ಸತೀಶ್ ಜವರೇಗೌಡ (ಸಾಹಿತ್ಯ), ಚಂದ್ರಶೇಖರ ದಡದಪುರ (ಶಿಕ್ಷಣ), ಡಾ.ಎಸ್.ಎಚ್.ದರ್ಶನ್ ಗೌಡ (ವೈದ್ಯ), ಎಸ್.ಎಂ. ಶಿವಕುಮಾರ್ (ಸಾಹಿತ್ಯ), ಆರ್.ಪ್ರಭುಸ್ವಾಮಿ (ಪರಿಸರ) ಇವರಿಗೆ ಕುವೆಂಪು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ:

ನಾಗಮಂಗಲದ ಜಿ.ಪ್ರಶಾಂತ (ಪ್ರಥಮ), ಮಂಡ್ಯದ ಜೆ.ಎನ್.ಪದ್ಮಲತಾ, ಜಿ.ಸೀಮಾಬಾನು (ದ್ವಿತೀಯ), ಕೆ.ಆರ್.ಪೇಟೆ ಎಂ.ವೇದಾವತಿ, ಮಂಡ್ಯದ ಹೆಚ್.ಡಿ.ಶ್ರೀಕಂಠ ಹಾಗೂ ಕೆ.ಎಂ.ಮಂಜುಳಾ (ತೃತೀಯ ಬಹುಮಾನ), ಮಂಡ್ಯದ ವಿಕ್ಟೋರಿಯಾ ಮೇರಿ, ವೈ.ಸಿ. ಶ್ರೀಧರ್ ಮೂರ್ತಿ, ಮದ್ದೂರಿನ ಕೆ.ಶಿವಲಿಂಗಯ್ಯ, ಪಾಂಡವಪುರದ ಸಿ.ಡಿ.ಶಂಕರ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ತಿಳಿಸಿದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ