ಕನ್ನಡಪ್ರಭ ವಾರ್ತೆ ಭಾರತೀನಗರ
ನ.25ರಂದು ಸಂಜೆ ಗಂಗೆ ಪೂಜೆ, ವೀರಗಾಸೆ ಸಮೇತ ಗ್ರಾಮದ ಪ್ರದಕ್ಷಿಣೆ ಮತ್ತು ಗಣಪತಿ ಹೋಮ, ಪುಣ್ಯ ಪಂಚಗಾವ್ಯ, ರಕ್ಷಾಬಂಧನ, ಅಂಕುರರ್ಪಣೆ, ವಾಸ್ತುಹೋಮ, ದಿಕ್ಷುಪಾಲಕರ ಪೂಜೆ, ಆದಿವಾಸಗಳ ಪೂಜೆ, ಪೂರ್ಣಾವತಿ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ.
ನ.26ರಂದು ಬೆಳಗ್ಗೆ ದೇವಿ ಪ್ರತಿಷ್ಠಾಪನೆ ಮತ್ತು ಪ್ರಧಾನ ಕಳ ಆರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಚಂಡಿಕಾಹೋಮ, ಪಾರ್ವತಿ ಪರಯಾಣ ಮತ್ತು ಮಹಾ ಮಂಗಳಾರತಿ, ನಂತರ 10 ರಿಂದ ಗ್ರಾಮದ ಪ್ರಮುಖ ದೇವಾಲಯಗಳಾದ ಶ್ರೀವೆಂಕಟೇಶ್ವರ (ತಿಮ್ಮಪ್ಪ), ಶ್ರೀಮಹಾಕಾಳಮ್ಮ, ಶ್ರೀಮಾರಮ್ಮ, ಶ್ರೀ ಅಮೃತೇಶ್ವರ, ಶ್ರೀಸಿದ್ದೇಶ್ವರ, ಶ್ರೀಹಟ್ಟಿಮಾರಮ್ಮ, ದೇವರುಗಳೊಡನೆ ಗಂಗಾಪೂಜಾ ಕಾರ್ಯಕ್ರಮ, ಮತ್ತು ಉತ್ಸವ ಹಮ್ಮಿಕೊಳ್ಳಲಾಗಿದೆ.ಗ್ರಾಮದ ಮಂಚಮ್ಮ ದೇವಿ ಕುಲಬಾಂಧವರಾದ ಆಲದಹಳ್ಳಿ, ಹಾರೋಕೊಪ್ಪ, ಬನ್ನಹಳ್ಳಿ, ಅರೆಕಲ್ಲುದೊಡ್ಡಿ, ಕೂಳಗೆರೆ, ಕಂಚನಹಳ್ಳಿ, ಕಾಡ ಅಂಕನಹಳ್ಳಿ, ಸೋಗಾಲ್ ಪಾಳ್ಯ, ಸೂಳ್ಳೇರಿ, ಬೇಲಿಕೊತ್ತನೂರು, ಮೆಣಸಗೆರೆ, ಆಲಭುನಹಳ್ಳಿ, ಕಾರ್ಕಹಳ್ಳಿ ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮದ್ದೂರು:ಮನೆ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಲೋಕೋಪಯೋಗಿ ಇಲಾಖೆ ನೌಕರರ ವಸತಿ ಗೃಹದಲ್ಲಿ ಶನಿವಾರ ರಾತ್ರಿ ಜರುಗಿದೆ.
ಮನೆ ಮಾಲೀಕರಾದ ಲೀಲಾವತಿ ರಾತ್ರಿ 7.45 ಸುಮಾರಿಗೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮದ್ದೂರು ಪೊಲೀಸರು ಲೀಲಾವತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಅಪರಾಧ ವಿಭಾಗದ ಪಿಎಸ್ಐ ರವಿ, ಶ್ವಾನದಳ ಮತ್ತು ಬೆಳಕು ತಜ್ಞರು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.