ಕಿಕ್ಕೇರಮ್ಮ ಎಳನೀರು ವರ್ತಕರ ಸಂಘ ಸಚಿವರಿಂದ ಉದ್ಘಾಟನೆ

KannadaprabhaNewsNetwork |  
Published : Nov 25, 2024, 01:00 AM IST
24ಕೆಎಂಎನ್ ಡಿ24 | Kannada Prabha

ಸಾರಾಂಶ

ಮಾರುಕಟ್ಟೆಗೆ ಎಳನೀರು ತಂದು ಮಾರಾಟ ಮಾಡುವ ವರ್ತಕರು ಸಂಘಟಿತರಾಗಿ ಸಂಘ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ವರ್ತಕರು ರೈತರಿಗೆ ಮೋಸವಾಗದಂತೆ ವೈಜ್ಞಾನಿಕ ಬೆಲೆ ನೀಡಬೇಕು. ಮಾರುಕಟ್ಟೆಯಲ್ಲಿ ಎಳನೀರು ಮಾರುಕಟ್ಟೆ ಆರಂಭಿಸಲು ಕ್ರಮವಹಿಸಿದೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದು, ರೈತರಿಗೆ ವ್ಯಾಪಾರಿಗಳಿಂದ ಮೋಸವಾಗುತ್ತಿರುವುದನ್ನು ಕಂಡಿರುವೆ. ಇನ್ನು ಮುಂದೆ ಇಂತಹ ಸಮಸ್ಯೆ ಆಗಲಾರದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನವಾಗಿ ಕಿಕ್ಕೇರಮ್ಮ ಎಳನೀರು ವರ್ತಕರ ಸಂಘವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಇತ್ತೀಚೆಗೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಾರುಕಟ್ಟೆಗೆ ಎಳನೀರು ತಂದು ಮಾರಾಟ ಮಾಡುವ ವರ್ತಕರು ಸಂಘಟಿತರಾಗಿ ಸಂಘ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ವರ್ತಕರು ರೈತರಿಗೆ ಮೋಸವಾಗದಂತೆ ವೈಜ್ಞಾನಿಕ ಬೆಲೆ ನೀಡಬೇಕು ಎಂದರು.

ತಾಲೂಕು ಕೇಂದ್ರಕ್ಕೆ ಎಳನೀರು ತೆಗೆದುಕೊಂಡು ಹೋಗಲು ಆಗುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳೊಂದಿಗೆ ತೋಡಿಕೊಂಡರು. ಮಾರುಕಟ್ಟೆಯಲ್ಲಿ ಎಳನೀರು ಮಾರುಕಟ್ಟೆ ಆರಂಭಿಸಲು ಕ್ರಮವಹಿಸಿದೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದು, ರೈತರಿಗೆ ವ್ಯಾಪಾರಿಗಳಿಂದ ಮೋಸವಾಗುತ್ತಿರುವುದನ್ನು ಕಂಡಿರುವೆ. ಇನ್ನು ಮುಂದೆ ಇಂತಹ ಸಮಸ್ಯೆ ಆಗಲಾರದು ಎಂದರು.

ಈ ವೇಳೆ ತೆಂಡೇಕೆರೆ ಬಾಳೆ ಹೊನ್ನೂರು ಶಾಖಾ ಮಠದ ತೆಂಡೇಕೆರೆ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೆಡದಹಳ್ಳಿ ಪಂಚಭೂತೇಶ್ವರ ಮಠದ ರುದ್ರಮುನಿ ಸ್ವಾಮೀಜಿ, ಕೆಪಿಸಿಸಿ ಸದಸ್ಯ ಸುರೇಶ್, ಟಿಎಪಿಪಿಎಂಎಸ್‌ ಅಧ್ಯಕ್ಷ ಬಿ.ಎಲ್. ದೇವರಾಜು, ಜಿಲ್ಲಾ ಎಪಿಎಂಸಿ ಉಪನಿರ್ದೇಶಕಿ ರೇವತಿಬಾಯಿ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಕಿಕ್ಕೇರಮ್ಮ ಎಳೆನೀರು ವರ್ತಕರ ಸಂಘದ ಗೌರವಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಅಧ್ಯಕ್ಷ ಎಚ್.ಕೆ.ಸುಂದರ್, ಸದಸ್ಯರಾದ ರಂಗಸ್ವಾಮಿ, ರಘು, ಪ್ರಕಾಶ್‌ಗೌಡ, ನಿತೀಶ್‌ಕುಮಾರ್, ಶಿವಕುಮಾರ್, ಮಂಜೇಗೌಡ, ಕುಮಾರ್, ದೇವರಾಜು, ರವಿ, ರಂಗೇಗೌಡ, ಉಮೇಶ್, ಲಕ್ಷ್ಮೀನರಸಿಂಹ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ