ಪ್ರತಿಭೆ ಅನಾವರಣಕ್ಕೆ ಕಾರಂಜಿ ಉತ್ತಮ ವೇದಿಕೆ

KannadaprabhaNewsNetwork |  
Published : Dec 02, 2025, 01:15 AM IST
1ಎಚ್ಎಸ್ಎನ್8 :  | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರತಿಭಾ ಕಾರಂಜಿಯು ಒಂದು ಉತ್ತಮ ವೇದಿಕೆಯಗಿದೆ ಎಂದು ಕಾಳೇನಹಳ್ಳಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಿ.ಎನ್ ದಿನೇಶ್ ತಿಳಿಸಿದರು. ಇದೇ ವೇಳೆ ಕಾಳೇನಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷರಾದ ಮಧುಕರ್‌ ಮಾತನಾಡಿ, ಪೋಷಕರ ಸಹಾಕರ, ಗ್ರಾಮಸ್ಥರ, ಶಿಕ್ಷಣ ಪ್ರೇಮಿಗಳ ಸಹಕಾರದಿಂದ ರಾಮನಾಥಪುರ ಕ್ಲಸ್ಟರ್‌ನ ಪ್ರತಿಭಾಕಾರಂಜಿ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬಸವಾಪಟ್ಟಣ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರತಿಭಾ ಕಾರಂಜಿಯು ಒಂದು ಉತ್ತಮ ವೇದಿಕೆಯಗಿದೆ ಎಂದು ಕಾಳೇನಹಳ್ಳಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಿ.ಎನ್ ದಿನೇಶ್ ತಿಳಿಸಿದರು.

ಅವರು ರಾಮನಾಥಪುರ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ೨೦೨೫ನೇ ಸಾಲಿನ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರತಿಭಾ ಕಾರಂಜಿಯಿಂದಾಗಿ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆ ಹೊರತರಲು ಸಹಾಯಕವಾಗಿದ್ದು, ಗ್ರಾಮೀಣ ಮಕ್ಕಳಲ್ಲಿ ಎಷ್ಟೋ ಮಕ್ಕಳಲ್ಲಿ ಪ್ರತಿಭೆ ಇದ್ದರೂ ಸರಿಯಾದ ವೇದಿಕೆ ಸಿಗದೆ ಪ್ರತಿಭೆಗೆ ಹೊರಹೊಮ್ಮಲು ಅವಕಾಶವಿಲ್ಲದಂತಾಗಿತ್ತು. ಆದರೆ ಪ್ರತಿಭಾ ಕಾರಂಜಿ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವೇದಿಕೆಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕಾಳೇನಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷರಾದ ಮಧುಕರ್‌ ಮಾತನಾಡಿ, ಪೋಷಕರ ಸಹಾಕರ, ಗ್ರಾಮಸ್ಥರ, ಶಿಕ್ಷಣ ಪ್ರೇಮಿಗಳ ಸಹಕಾರದಿಂದ ರಾಮನಾಥಪುರ ಕ್ಲಸ್ಟರ್‌ನ ಪ್ರತಿಭಾಕಾರಂಜಿ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಬಸವಾಪಟ್ಟಣ ಕೆಪಿಎಸ್ ಶಾಲೆಯ ಮುಖ್ಯಶಿಕ್ಷಕರಾದ ಚಂದ್ರಪ್ಪ ಕರಿಬೀಮಣ್ಣನವರು, ಕೇರಳಾಪುರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಟಿ ಯೋಗಣ್ಣ, ಕಾಳೇನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲೋಕೆಶ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ರಾಮನಾಥಪುರ ಕ್ಲಸ್ಟರ್ ವಿವಿಧ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಗೆ ಸ್ಪರ್ಧಿಗಳಾಗಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ