ಮಂಗಳೂರು: ಡಿ.20ರಿಂದ ಆರಂಭವಾದ ಕರಾವಳಿ ಉತ್ಸವ ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದು, ಉದ್ಘಾಟನೆ ಮರುದಿನ ಭಾನುವಾರ 4 ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ.
ಕರಾವಳಿ ಉತ್ಸವದಲ್ಲಿ ವಿವಿಧ ಮಳಿಗೆಗಳು, ಕರಕುಶಲ ವಸ್ತುಗಳು, ಆಯುರ್ವೇದ ತಿಂಡಿಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ವಿವಿಧ ಮಾರಾಟ ಕೇಂದ್ರಗಳು, ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ನಯಾಗರ ಜಲಪಾತದ ಮಾದರಿಯ ಕೃತಕ ಜಲಪಾತವು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ. ವಿವಿಧ ಸ್ವಸಹಾಯ ಸಂಘಗಳು, ಸ್ವ ಉದ್ಯೋಗ ಸಂಘ ಸಂಸ್ಥೆಗಳ ತಿಂಡಿ-ತಿನಿಸುಗಳ ಮಾರಾಟ ಮಳಿಗೆಗಳು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಹಿರಿಯ- ಕಿರಿಯ ವಯಸ್ಕರ ಮನಸ್ಸಿನ ಆನಂದವನ್ನು ಹೆಚ್ಚಿಸುತ್ತಿದೆ.
ಔಷಧೀಯ ಅಂಶಗಳನ್ನೊಳಗೊಂಡ ಗಿಡಮೂಲಿಕೆಗಳು, ಆಹಾರ ಪದಾರ್ಥಗಳಿಗೆ ರುಚಿ ಕೊಡುವ ಸಾಂಬಾರ ಪದಾರ್ಥಗಳು, ವಿವಿಧ ರೀತಿಯ ಎಣ್ಣೆ ಮಳಿಗೆ, ಗ್ರಾಮೀಣ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳು, ಮಣ್ಣಿನಿಂದ ತಯಾರಿಸಲ್ಪಟ್ಟ ವಸ್ತುಗಳು, ಬುಟ್ಟಿ, ಜೇನು ಉತ್ಪನ್ನ, ವಿವಿಧ ಮಸಾಲ ಉತ್ಪನ್ನ, ಶುಚಿ ರುಚಿಯಾದ ಮೀನು ಮತ್ತು ಸ್ಥಳೀಯ ಖಾದ್ಯಗಳ ಮಳಿಗೆ ಹಾಗೂ ಮಕ್ಕಳನ್ನೂ ಆಕರ್ಷಿಸಿಸುವ ಮಕ್ಕಳ ಆಟಿಕೆಗಳ ಮಾರಾಟ ಮಳಿಗೆಗಳು ಇದರಲ್ಲಿವೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಈ ಎಲ್ಲ ಮಳಿಗೆಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಿದೆ.ಕರಾವಳಿ ಉತ್ಸವದಲ್ಲಿ ಇಂದುಮಂಗಳೂರು: ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಿಸೆಂಬರ್ 23ರಂದು ಸಂಜೆ 6ರಿಂದ 9 ಗಂಟೆವರೆಗೆ ಸಂಗೀತ ಗಾನ ಸಂಭ್ರಮ- ಭಾವಗೀತೆ, ಜನಪದ ಗೀತೆ ಕಾರ್ಯಕ್ರಮ ನಡೆಯಲಿದೆ.