ಆಲೂರು ಪಟ್ಟಣದ ಮುಖ್ಯ ರಸ್ತೆಯ ದುರಸ್ತಿಗೆ ಕರವೇ ಆಗ್ರಹ

KannadaprabhaNewsNetwork |  
Published : Oct 29, 2026, 01:45 AM IST
28ಎಚ್ಎಸ್ಎನ್10 :  | Kannada Prabha

ಸಾರಾಂಶ

ಮಳೆ ಬಂದಾಗ ರಸ್ತೆಯ ಗುಂಡಿಗಳು ಸಂಪೂರ್ಣವಾಗಿ ನೀರು ತುಂಬಿಕೊಳ್ಳುವುದರಿಂದ, ಸವಾರರಿಗೆ ಗುಂಡಿಗಳ ಆಳ ಎಷ್ಟು ಎಂಬ ಅಂದಾಜೇ ಸಿಗುವುದಿಲ್ಲ. ಪರಿಣಾಮವಾಗಿ, ದ್ವಿಚಕ್ರ ವಾಹನ ಸವಾರರು ದಿಢೀರ್‌ ಬ್ರೇಕ್ ಹಾಕಿ ಇಲ್ಲವೇ ಗುಂಡಿಗೆ ಬಿದ್ದು ಕೆಳಗೆ ಉರುಳಿಬಿದ್ದು ಗಾಯಗೊಂಡಿರುವ ಹಲವಾರು ನಿದರ್ಶನಗಳಿವೆ. ಇನ್ನು ಶಾಲಾಕಾಲೇಜು ಮಕ್ಕಳು, ವೃದ್ಧರು ಹಾಗೂ ರೋಗಿಗಳನ್ನು ಹೊತ್ತೊಯ್ಯುವ ಆ್ಯಂಬುಲೆನ್ಸ್‌ಗಳ ಪರದಾಟುವಿಕೆ ಹೇಳತೀರದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಲೂರು ಪಟ್ಟಣದಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸುಮಾರು ಒಂದು ಕಿ. ಮೀ.ನಷ್ಟು ಗುಂಡಿಮಯವಾಗಿದ್ದು ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಉದ್ಭವವಾಗಿದ್ದು, ಇದಕ್ಕೆಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಾಘವೇಂದ್ರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ರಾಘವೇಂದ್ರ, ತಾಲೂಕಿಗೆ ಸ್ವಾಗತ ಕೋರುವ ಮುಖ್ಯ ದ್ವಾರದಲ್ಲಿ ಒಳ ಪ್ರವೇಶ ಆಗುತ್ತಿದ್ದಂತೆಯೇ ಮಂಡಿಯುದ್ಧದ ಗುಂಡಿಗಳು ಪ್ರಯಾಣಿಕರನ್ನು ಬಲಿ ಪಡೆಯಲು ಕೈಬೀಸಿ ಕರೆಯುತ್ತಿದ್ದರು ಕೂಡ ಸಂಬಂಧಪಟ್ಟವರು ಮಾತ್ರ ತಲೆ ಕೆಡಿಸಿಕೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ರಸ್ತೆಗಳು ಈ ಮುಖ್ಯ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಪ್ರತಿದಿನ ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ. ಪ್ರಮುಖ ರಸ್ತೆಗಳ ಸಂಪರ್ಕ ರಸ್ತೆಗಳು ಡಾಂಬರು ಕಾಣದೆ ವರ್ಷಗಳೇ ಆಗಿವೆ. ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳಲ್ಲಿ ರಸ್ತೆಯಿದೆಯೋ ಎಂದು ತಿಳಿಯದಷ್ಟು ಹದಗೆಟ್ಟಿರುವ ಸ್ಥಿತಿಯನ್ನು ಸವಾರರು ಎದುರಿಸುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳುವುದು, ವಾಹನಗಳು ಹಾಳಾಗುವುದು ನಿತ್ಯದ ಗೋಳಾಗಿದೆ. ಅಲ್ಲದೇ ವಾರದಲ್ಲಿ ಎರಡು ಮೂರು ಇಂತಹ ಅನಾಹುತಗಳು ಸಂಭವಿಸುತ್ತಲೇ ಇವೆ ಆದರೂ ಈ ಬಗ್ಗೆ ಸಂಬಂಧಪಟ್ಟವರು ಯಾರೂ ಕೂಡ ಗಮನಹರಿಸದೇ ಇರುವುದು ವಿಪರ್ಯಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಳೆ ಬಂದಾಗ ರಸ್ತೆಯ ಗುಂಡಿಗಳು ಸಂಪೂರ್ಣವಾಗಿ ನೀರು ತುಂಬಿಕೊಳ್ಳುವುದರಿಂದ, ಸವಾರರಿಗೆ ಗುಂಡಿಗಳ ಆಳ ಎಷ್ಟು ಎಂಬ ಅಂದಾಜೇ ಸಿಗುವುದಿಲ್ಲ. ಪರಿಣಾಮವಾಗಿ, ದ್ವಿಚಕ್ರ ವಾಹನ ಸವಾರರು ದಿಢೀರ್‌ ಬ್ರೇಕ್ ಹಾಕಿ ಇಲ್ಲವೇ ಗುಂಡಿಗೆ ಬಿದ್ದು ಕೆಳಗೆ ಉರುಳಿಬಿದ್ದು ಗಾಯಗೊಂಡಿರುವ ಹಲವಾರು ನಿದರ್ಶನಗಳಿವೆ. ಇನ್ನು ಶಾಲಾಕಾಲೇಜು ಮಕ್ಕಳು, ವೃದ್ಧರು ಹಾಗೂ ರೋಗಿಗಳನ್ನು ಹೊತ್ತೊಯ್ಯುವ ಆ್ಯಂಬುಲೆನ್ಸ್‌ಗಳ ಪರದಾಟುವಿಕೆ ಹೇಳತೀರದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಭರತವಳ್ಳಿ ಮಾತನಾಡಿ, ರಸ್ತೆ ಗುಂಡಿ ಮುಚ್ಚುವಂತೆ ಹಾಗೂ ಶಾಶ್ವತ ಡಾಂಬರೀಕರಣ ಕಲ್ಪಿಸುವಂತೆ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ತಾತ್ಕಾಲಿಕವಾಗಿ ಜಲ್ಲಿಕಲ್ಲು ಮಣ್ಣು ಮುಚ್ಚಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರದ ನವಾಜ್, ಪ್ರಶಾಂತ್ ಗಾಂಧಿ, ಧರ್ಮ, ಹರೀಶ್, ಗುರು, ಆಸೀಫ್, ತೌಫಿಕ್, ದೇವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್