ಕನ್ನಡಪ್ರಭ ವಾರ್ತೆ ಇಂಡಿ
ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ಕರವೇ ತಾಲೂಕು ಅಧ್ಯಕ್ಷ ಶಿವಾನಂದ ಮಲಕಗೊಂಡ, ಫಯಾಜ್ ಬಾಗವಾನ್, ಸದ್ದಾಂ ಆಲಗೂರ, ಅಶೋಕ ಭೂಸನೂರ, ಬಸವರಾಜ ಮಾರಲಭಾವಿ, ಸುನಿಲ್ ಮಾಗಿ ಮಾತನಾಡಿ, ಇಂಡಿ ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಬೇಕು. ಈಗಾಗಲೇ ಇಂಡಿಯಲ್ಲಿ ಕಂದಾಯ ಉಪವಿಭಾಗ ಕಾರ್ಯಾಲಯವಿದ್ದು, ಬಹುತೇಕ ಜಿಲ್ಲಾಮಟ್ಟದ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಸಾರಿಗೆ ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣ ಸಹ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕು ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲೂಕಿನವರಿಗೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಹೋಗಲು ಅನುಕೂಲವಾಗಲಿದೆ ಎಂದರು.
ಕರವೇ ಪದಾಧಿಕಾರಿಗಳಾದ ಅಪ್ಪು ಪವಾರ, ಶಿವು ಬಗಲಿ, ಮಾದೇವ ರಾಮಗೊಂಡ, ಮಂಜುನಾಥ ತೇಲಿ, ಮಲ್ಲನಗೌಡ ಪಾಟೀಲ, ರಾಘು ಕೋಣಶಿರಸಗಿ, ದಯಾನಂದ ಉಮರಾಣಿ ಉಪಸ್ಥಿತರಿದ್ದರು.