ವಾಜಪೇಯಿಯವರ ದಿಟ್ಟ ನಿರ್ಧಾರದಿಂದ ಕಾರ್ಗಿಲ್‌ ವಿಜಯ

KannadaprabhaNewsNetwork | Published : Jul 27, 2024 12:49 AM

ಸಾರಾಂಶ

ಹಾವೇರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ವಿಜಯ ದೀಪ ಬೆಳಗಿಸಿ, ಮಾಜಿ ಸೈನಿಕರಾದ ನಾಗರಾಜ ಇಚ್ಚಂಗಿ, ರುದ್ರಪ್ಪ ದೇವಗಿರಿ ಅವರನ್ನು ಸನ್ಮಾನಿಸುವ ಮೂಲಕ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.

ಹಾವೇರಿ:ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ವಿಜಯ ದೀಪ ಬೆಳಗಿಸಿ, ಮಾಜಿ ಸೈನಿಕರಾದ ನಾಗರಾಜ ಇಚ್ಚಂಗಿ, ರುದ್ರಪ್ಪ ದೇವಗಿರಿ ಅವರನ್ನು ಸನ್ಮಾನಿಸುವ ಮೂಲಕ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಈ ವೇಳೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಷೇಕ ಗುಡಗೂರ ಮಾತನಾಡಿ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಡೀ ದೇಶವು ಶಾಂತಿಯಿಂದ ಮಲಗಲು ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಶೌರ್ಯ, ಧೈರ್ಯ ಮತ್ತು ಉತ್ಸಾಹದ ಕಥೆಗಳು ಜೀವನಕ್ಕಿಂತ ದೊಡ್ಡದಾಗಿದೆ. ಕಾರ್ಗಿಲ್ ಯುದ್ಧದಲ್ಲಿ ನಮಗಾಗಿ ಹೋರಾಡಿದ ಪ್ರತಿಯೊಬ್ಬರೂ ವೀರರು. ಬಿಜೆಪಿಯು ಸೈನ್ಯಕ್ಕೆ ಹಿಂದಿನಿಂದಲೂ ಗೌರವವನ್ನು ಸಲ್ಲಿಸುತ್ತಾ ಬಂದಿದೆ ಮತ್ತು ದೇಶದ ರಕ್ಷಣೆಯೇ ನಮ್ಮ ಆದ್ಯತೆಯಾಗಿದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ದಿಟ್ಟ ನಿರ್ಧಾರದಿಂದ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧ್ಯವಾಯಿತು ಎಂದರು. ಮಾಜಿ ಸೈನಿಕ ನಾಗರಾಜ ಇಚ್ಚಂಗಿ ಮಾತನಾಡಿ, ತಾವು ಸೇವೆ ಸಲ್ಲಿಸುವಾಗ ಭಾರತೀಯ ಸೈನ್ಯಯಲ್ಲಿ ಆಗಿರುವ ಅನುಭವಗಳನ್ನು ಹಂಚಿಕೊಂಡರು ಮತ್ತು ೨೦೧೪ರ ನಂತರ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತೀಯ ಸೈನ್ಯದ ಬಲ ಹೆಚ್ಚುಸುವುದರ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರ ಮೇಲೆ ಹಲ್ಲೆ ನಡೆಯುತ್ತಿದ್ದನ್ನು ನಿಲ್ಲಿಸಿ ಸೈನಿಕರಿಗೆ ದಿಟ್ಟತನದಿಂದ ಹೋರಾಡಲು ಪೂರ್ಣ ಪ್ರಮಾಣದ ಅನುಮತಿ ನೀಡಿದರು ಎಂದು ಹೇಳಿದರು.ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ ಮಾತನಾಡಿದರು. ನಂತರ ನಗರದ ಗಾಂಧಿ ಸರ್ಕಲ್‌ನಲ್ಲಿ ಪಂಜಿನ ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಡಾ.ಸಂತೋಷ ಆಲದಕಟ್ಟಿ, ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಗುಡ್ಡಪ್ಪ ಭರಡಿ, ಅಲ್ಲಾಭಕ್ಷ ತಿಮ್ಮಾಪೂರ, ಪ್ರಭು ಹಿಟ್ನಳ್ಳಿ, ನಿರಂಜನ ಹೇರೂರ, ನೀಲಪ್ಪ ಚಾವಡಿ, ಮಂಜುನಾಥ ಮಲಗೋಡ, ಅಭಿಷೇಕ ಬ್ಯಾಡಗಿ, ಸಚಿನ ಸಪ್ತಸಾಗರ, ರಾಹುಲ್ ನವಲೆ, ಸಾಂಕೇತ ಪಾಟೀಲ, ಪವನ ಕಜುರಕರ, ಹೊನ್ನಪ್ಪ ಅಗಿಸಿಬಾಗಿಲು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.

Share this article