ನವಲಗುಂದ:
ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ತನು ಕನ್ನಡ, ನುಡಿ ಕನ್ನಡ, ಮನ ಕನ್ನಡ, ಕನ್ನಡ ನಮ್ಮ ಉಸಿರಾಗಿರಲಿ. ಕನ್ನಡಾಭಿಮಾನವನ್ನು ಪ್ರತಿ ದಿನ, ಪ್ರತಿ ಕ್ಷಣ ಬೆಳೆಸಿಕೊಂಡಾಗ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಮತ್ತಷ್ಟು ಗೌರವ ಬರುತ್ತದೆ. ಕನ್ನಡವನ್ನು ಎಲ್ಲರೂ ಉಳಿಸಿ ಬೆಳೆಸಬೇಕು ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿಬಾಯಿ ಪೂಜಾರ, ಇಮಾಮಸಾಬ್ ವಲ್ಲೆಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು. ಸಾನ್ನಿಧ್ಯ ವಹಿಸಿದ್ದ ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಉಮೇಶ ನವಲಗುಂದ, ಶಿರಾಜ್ ಧಾರವಾಡ, ವಿಕ್ರಂ ಕುರಿ ಮಾತನಾಡಿದರು.
ತಹಸೀಲ್ದಾರ್ ಸುಧೀರ ಸಾವಕಾರ, ಶಿದ್ದಯ್ಯ ಹಿರೇಮಠ, ಶಿವಾನಂದ ಕರಿಗಾರ, ಶಂಕರಪ್ಪ ಅಂಬಲಿ, ಎಸ್.ಬಿ. ಪಾಟೀಲ, ರಘುನಾಥ ನಡುವಿನಮನಿ, ಮಹಬೂಸಾಬ್ ಯರಗುಪ್ಪಿ, ನಂದಿನಿ ಹಾದಿಮನಿ, ಶರಣು ಯಮನೂರ, ನಿಂಗಪ್ಪ ಕೆಳಗೇರಿ ಇತರರು ಇದ್ದರು.