ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜ್ಯೋತಿ ರಥಯಾತ್ರೆ ಸ್ವಾಗತಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥಯಾತ್ರೆಯೂ ರಾಜ್ಯಾದ್ಯಂತ ಸಂಚರಿಸುತ್ತಿದೆ ಎಂದರು.
1973ರಲ್ಲಿ ಮೈಸೂರು ಪ್ರಾಂತ್ಯಕ್ಕೆ ಹೊಸದಾಗಿ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ 50 ವರ್ಷಗಳು ಕಳೆದಿವೆ. ಅದರ ಸುವರ್ಣ ಸಂಭ್ರಮಾಚಾರಣೆ ಮಾಡಲಾಗುತ್ತಿದೆ. ಈ ಸಂಬಂಧ ಜ್ಯೋತಿ ರಥ ಯಾತ್ರೆಯು ಆಗಸ್ಟ್ 18 ರಿಂದ 25 ರ ವರೆಗೆ 7 ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದರು.ಜ್ಯೋತಿ ರಥಯಾತ್ರೆಯು ಆಗಸ್ಟ್ 18ರಂದು - ಮದ್ದೂರು, 19ರಂದು - ನಾಗಮಂಗಲ, 20ರಂದು - ಕೆ.ಆರ್.ಪೇಟೆ, 21 ರಂದು - ಪಾಂಡವಪುರ, 22ರಂದು - ಶ್ರೀರಂಗಪಟ್ಟಣ, 23 ರಂದು - ಮಂಡ್ಯ, 24 ರಂದು - ಮಳವಳ್ಳಿ ತಾಲೂಕಿನಲ್ಲಿ ಸಂಚರಿಸಲಿದೆ. ಆಗಸ್ಟ್ 25 ರಂದು ಚಾಮರಾಜನಗರ ಜಿಲ್ಲೆ ತಲುಪಲಿದೆ ಎಂದರು.
ಜ್ಯೋತಿ ರಥಯಾತ್ರೆ ಸಂಚರಿಸುವ ಮಾರ್ಗದಲ್ಲಿ ಗ್ರಾಪಂ, ತಾಲೂಕು ಕಚೇರಿಗಳು ಹಬ್ಬದ ರೀತಿ ಮಾರ್ಗವನ್ನು ಶೃಂಗರಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಬೇಕು. ಸರ್ಕಾರ ನಿಗಧಿಪಡಿಸಿರುವ ರೂಟ್ ಮ್ಯಾಪ್ ನಲ್ಲಿಯೇ ಸಂಚರಿಸಬೇಕು. ಯಾವುದೇ ಬದಲಾವಣೆಗೆ ಅವಕಾಶವಿಲ್ಲ ಎಂದರು.
ಸಭೆಯಲ್ಲಿ ಎಸಿ ಶಿವಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ ಸಿದ್ದಲಿಂಗೇಶ್, ಪಾಂಡವಪುರ ಎಸಿ ನಂದೀಶ್, ಪಿಯುಡಿಡಿ ಸಿ.ಚೆಲುವಯ್ಯ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕಿ ಡಾ.ರೋಹಿಣಿ, ತಹಸೀಲ್ದಾರ್ ಗ್ರೇಡ್ - 2 ವಸಂತಕುಮಾರ್, ಮುಖಂಡರಾದ ಸುಜಾತ ಕೃಷ್ಣ, ಬಿ.ಎಂ.ಅಪ್ಪಾಜಪ್ಪ, ಆನಂದ್, ಅರುಣ ಕುಮಾರಿ, ನಾಗರಾಜು ಉಪಸ್ಥಿತರಿದ್ದರು.