ಹಗರಿಬೊಮ್ಮನಹಳ್ಳಿ: ನಾಡಿನ ಎಲ್ಲೆಡೆ ಕಾರ್ತಿಕೋತ್ಸವಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ಆಚರಣೆ ಏಕಾಗ್ರತೆ ಹೆಚ್ಚಿಸುತ್ತವೆ ಜತೆಗೆ ಉತ್ತಮ ಸಂಸ್ಕಾರದ ತಳಹದಿಯಾಗಿವೆ ಎಂದು ಗದ್ದಿಕೇರಿ ವಿರಕ್ತಮಠದ ಇಮ್ಮಡಿ ಮಹಾಂತಸ್ವಾಮೀಜಿ ತಿಳಿಸಿದರು.
ಮನೆಮನದ ಜ್ಞಾನ ಜ್ಯೋತಿ ಬೆಳಗುವ ಸಮೃದ್ಧಿಯ ಭರವಸೆ ಹೊಂದುವುದೇ ಕಾರ್ತಿಕದ ಹಿನ್ನೆಲೆಯಲ್ಲಿಯಾಗಿದೆ. ಪ್ರತಿಯೊಬ್ಬರು ತಾವು ಮಾಡುವ ಕಾಯಕವನ್ನು ಪ್ರೀತಿಸಬೇಕು, ಅದರಲ್ಲಿಯೇ ಆತ್ಮತೃಪ್ತಿ ಹೊಂದಬೇಕು ಎಂದರು.
ಶಾಸಕ ಕೆ.ನೇಮರಾಜ ನಾಯ್ಕ ಮಾತನಾಡಿ, ಪಟ್ಟಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ನಿರ್ಮಾಣಕ್ಕೆ ಈಗಾಗಲೇ ಅಗತ್ಯ ಅನುದಾನ ಒದಗಿಸಲಾಗಿದೆ. ಶೀಘ್ರದಲ್ಲೆ ಚೆನ್ನಮ್ಮಾಜಿ ವೃತ್ತ ಮತ್ತು ಪುತ್ಥಳಿ ಸ್ಥಾಪಿಸಲಾಗುವುದು ಎಂದರು.ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿಬೆಟ್ಟಪ್ಪ ಮಾತನಾಡಿದರು. ರಾಜ್ಯ ಮಹಿಳಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಗಳಾ ಬಸವರಾಜ, ತಾಲೂಕು ಅಧ್ಯಕ್ಷ ಮಂಜುನಾಥಗೌಡ, ಗೌರವಾಧ್ಯಕ್ಷ ಅಕ್ಕಿ ಶಿವಕುಮಾರ್, ಉಪಾಧ್ಯಕ್ಷ ಜ್ಯೋತೆಪ್ಪ, ಪ್ರಧಾನ ಕಾರ್ಯದರ್ಶಿ ಬಾವಿ ರವೀಂದ್ರ, ಮುಖಂಡರಾದ ವೀರಣ್ಣ ಬಿ.ಮೆಣಸಿಗಿ, ವೈ.ಮಲ್ಲಿಕಾರ್ಜುನ, ಬದಾಮಿ ನಟರಾಜ ಇತರರಿದ್ದರು. ಪಂಚಮಸಾಲಿ ಟ್ರಸ್ಟ್ನ ಕಾರ್ಯದರ್ಶಿ ಶಿವಶಂಕರಗೌಡ, ಉತ್ತಂಗಿ ರವಿ, ವಿರೂಪಾಕ್ಷಪ್ಪ ನಿರ್ವಹಿಸಿದರು. ಇದೇವೇಳೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ನಿರ್ಮಲಾ ವಿ.ಮೆಣಸಿಗಿ, ನಗರ ಘಟಕದ ಅಧ್ಯಕ್ಷರಾಗಿ ಮಂಜುಳಾ ವಿರೂಪಾಕ್ಷಗೌಡ ಪದವಿ ಸ್ವೀಕರಿಸಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಹರದೇವಸ್ಥಾನದಲ್ಲಿ ನಡೆದ ಕಾರ್ತಿಕೋತ್ಸವದಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.