ಹುಬ್ಬಳ್ಳಿ: ಆರ್.ಕೆ. ರಿಕ್ರಿಯೇಶನ್ ಆ್ಯಂಡ್ ಸ್ಪೋರ್ಟ್ಸ್ ಅಸೋಶಿಯೇಶನ್ ವತಿಯಿಂದ ಮಾರ್ಚ್ 7ರಿಂದ 10ರ ವರೆಗೆ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಕರುನಾಡ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಸೋಶಿಯೇಶನ್ ನಿರ್ದೇಶಕ ಡಾ. ಲಿಂಗರಾಜ ಬಿಳೆಕಲ್ ಹೇಳಿದರು.
ಈ ಪಂದ್ಯಾವಳಿಯಲ್ಲಿ ಪ್ರ್ಯಾಂಚೈಸಿ ಆಧಾರಿತ ಒಟ್ಟು 8 ತಂಡಗಳು ಕರ್ನಾಟಕದ ನಾನಾ ಭಾಗಗಳಿಂದ ಭಾಗವಹಿಸುತ್ತಿದ್ದು, ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಟಗಾರರು ಆನಲೈನ್ ಮೂಲಕ ತಮ್ಮ ಹೆಸರನ್ನು ಫೆ. 15 ರೊಳಗಾಗಿ ನೋಂದಾಯಿಸಬಹುದಾಗಿದೆ ಎಂದರು.
ಪ್ರತಿ ತಂಡಕ್ಕೆ 7 ಲೀಗ್ ಮ್ಯಾಚ್‌ಗಳು ಇರುತ್ತವೆ. ಮತ್ತು ಪ್ರತಿ ಪಂದ್ಯ 10 ಓವರ್‌ಗಳನ್ನು ಒಳಗೊಂಡಿರುತ್ತದೆ. ವಿಜೇತ ತಂಡಕ್ಕೆ ಪ್ರಥಮ ₹4 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹3.30 ಲಕ್ಷ ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಬೆಟಸೂರ, ನಾಗೇಶ ಚವ್ಹಾಣ, ಕಿರಣ ಪವಾರ, ರಂಗನಗೌಡ ಚಿಕ್ಕನಗೌಡ, ದೇವರಾಜ ಕೋಟಿ ಸೇರಿದಂತೆ ಹಲವರಿದ್ದರು.