ಕಟೀಲು ದುರ್ಗಾಮಕ್ಕಳ ಮೇಳದ ಕಲಾಪರ್ವ ಸಂಪನ್ನ

KannadaprabhaNewsNetwork |  
Published : Dec 30, 2024, 01:02 AM IST
ಕಟೀಲು ದುರ್ಗಾಮಕ್ಕಳ ಮೇಳದ ಕಲಾಪರ್ವ ಸಂಪನ್ನ | Kannada Prabha

ಸಾರಾಂಶ

ಮಕ್ಕಳ ಮೇಳದ ಕಲಾವಿದರು ಹಾಗೂ ಮೇಳದ ಪ್ರಾಕ್ತನ ಕಲಾವಿದರು ಪುರುಷಾಮೃಗ, ಸುದರ್ಶನ ವಿಜಯ, ಪಟ್ಟಾಭಿಷೇಕ, ಪಾದುಕಾಪ್ರದಾನ, ಅಗ್ರಪೂಜೆ, ಕಿರಾತಾರ್ಜುನ ಪ್ರಸಂಗಗಳನ್ನು ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಹದಿನಾರು ವರ್ಷಗಳಿಂದ ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳನ್ನು ಮಕ್ಕಳಿಗೆ ಕಲಿಸಿಕೊಟ್ಟು ಯಕ್ಷಗಾನ ಕಲೆಯನ್ನು ಉಳಿಸುವ ಕಾರ್ಯ ಮಾಡುತ್ತಿರುವ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವ ಕಟೀಲಿನ ಸರಸ್ವತೀ ಸದನದಲ್ಲಿ ಭಾನುವಾರ ಸಂಪನ್ನಗೊಂಡಿತು.

ಯಕ್ಷಗಾನದ ಪೂರ್ವರಂಗ, ಒಡ್ಡೋಲಗಗಳು, ತಾಳ ಮದ್ದಲೆ, ಗಾನವೈಭವ ಯಕ್ಷಗಾನ ಪ್ರಸಂಗಗಳನ್ನು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದರು.ಕೋಡಂಗಿ, ಬಾಲ ಗೋಪಾಲರಾಗಿ ಮನೀಷ್ ಗಿಡಿಗೆರೆ, ತೇಜಸ್ ಸುಂಕದಕಟ್ಟೆ, ಮನೀಷ್, ಸುಶ್ವಿತ್ ಶೆಟ್ಟಿ, ತೇಜಸ್ವಿ ಆಚಾರ್ಯ, ಜೀವನ್, ಮುಖ್ಯ ಸ್ತ್ರೀವೇಷದಲ್ಲಿ ಮೈತ್ರಿ ಕುಲಾಲ್, ಸಾನ್ವಿ ಕೋಟ್ಯಾನ್, ಹೊಗಳಿಕೆ ಶಿವಾನಿ, ಷಣ್ಮುಖ ಸುಬ್ರಾಯದಲ್ಲಿ ಕ್ಷಿತಿಜ್ ಕುಲಾಲ್ ಪಾತ್ರ ವಹಿಸಿದರು.

ರಂಗರಂಗಿಯನ್ನು ಶ್ರಾವ್ಯಾ, ಶ್ರೇಯಾ, ಕೋಲಾಟವನ್ನು ಸುಶ್ಮಿತ, ಭವ್ಯ, ಶ್ರೀನಿಧಿ, ಅದ್ವಿಕ್, ಧನ್ಯಶ್ರೀ, ಸುದೀಷ್ಣ, ಧನ್ಯಶ್ರೀ ಆಚಾರ್ಯ, ಶ್ರೇಯಾ ಆಚಾರ್ಯ, ಧನ್ವಿಕಾ ಹಂಸಿಕಾ, ಪೀಠಿಕಾ ಸ್ತ್ರೀ ವೇಷವನ್ನು ತನ್ಮಯಿ, ಆಕಾಶ್ ಎಲ್ . ಕುಲಾಲ್, ಪ್ರದರ್ಶಿಸಿದರು. ಅರ್ಧನಾರೀಶ್ವರ ಅಭೀಷ್ಣಾ, ಚಪ್ಪರ ಮಂಚವನ್ನು ಪ್ರೀತಿಕಾ ಪ್ರದರ್ಶಿಸಿದರು.ಒಡ್ಡೋಲಗಗಳು: ರಾಮನ ಒಡ್ಡೋಲಗವನ್ನು ಭುವನ್ ಮತ್ತು ಡಿಂಪಲ್, ಹನುಮಂತನ ಒಡ್ಡೋಲಗವನ್ನು ಸೃಜನ್ ಮೂಲ್ಯ ಪ್ರಸ್ತುತಪಡಿಸಿದರು.ಪಾಂಡವರ ಒಡ್ಡೋಲಗದಲ್ಲಿ ಆಕಾಶ್ ಕುಲಾಲ್, ಶ್ರಾವ್ಯಾ, ದಶಮಿ, ತಪಸ್ಯಾ, ಚ್ಯವನ ಉಡುಪ, ರಕ್ಷಿತಾ ಆಚಾರ್ಯ ಭಾಗವಹಿಸಿದರು. ಕೃಷ್ಣನ ಒಡ್ಡೋಲಗದಲ್ಲಿ ಶ್ರೀಪ್ರದಾ, ಪ್ರಥಮ್, ಯುವರಾಣಿ, ಜೀವಿಕಾ, ನಿಹಾಲ್, ಕರಣ್, ಜಿಯಾ, ಶ್ರೇಯಾ, ನಿಶಾ ಕಾಣಿಸಿಕೊಂಡರು. ಬಣ್ಣದ ವೇಷದ ಒಡ್ಡೋಲಗವನ್ನು ನಿತಿನ್, ಕಿರಾತನ ಒಡ್ಡೋಲಗವನ್ನು ಅಚಿಂತ್ಯಾ ಶರ್ಮ, ರಚನ್, ಕ್ಷಿತಿಜ್, ವೇದಾಂತ್, ದಿಶಾಂತ್, ದರ್ಶಿತ್, ದಿಯಾನ್, ಕವಿನ್, ಹರ್ಷಲ್, ಆರ್ಯನ್, ಸುಭಾಷ್, ನಿತಿನ್ ಎಸ್. ತೇಜಸ್ವಿ, ಕೌಶಿಕ್ ಕೋಟ್ಯಾನ್, ಲಾಸ್ಯ, ಶಾರ್ವರಿ, ಹಂಸಿಕ, ತೃಷಾ, ಶ್ರೇಯಾ ಆಚಾರ್ಯ, ದಿಯಾ, ಸಾವನಿ, ನಿರೀಕ್ಷಾ ಭಾಗವಹಿಸಿದರು.ಹೆಣ್ಣು ಬಣ್ಣದ ಒಡ್ಡೋಲಗವನನ್ನು ಸ್ವಯಂ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಪ್ರದ್ಯುಮ್ನ ನಿತಿನ್ ಶಿವಮನ್ಯು, ಸುಮೀರ್ ಮಯ್ಯ, ಅವನೀಶ್ ರಾವ್, ಸೃಜನ್ ಚಂದ್ರಮಂಡಲ, ಶ್ರೀರಕ್ಷಾ ಭಟ್, ರುದ್ರಮನ್ಯು, ಅನಿರುದ್ದ್ ರಾವ್, ಚ್ಯವನ ಉಡುಪ ಮುಂತಾದವರು ಭಾಗವಹಿಸಿದರು.ಪಾರ್ಥಸಾರಥ್ಯ ತಾಳಮದ್ದಲೆಯಲ್ಲಿ ಅರ್ಥಧಾರಿಗಳಾಗಿ ಪ್ರದ್ಯುಮ್ನ, ಸೃಷ್ಟಿ, ತಪಸ್ಯ, ಜೀವನ್, ಪ್ರಣಮ್ಯ, ನಿತಿನ್ ಭಾಗವಹಿಸಿದರು.ಯಕ್ಷಗಾನ ಗಾಯನದಲ್ಲಿ ಶ್ರೀರಕ್ಷ, ಶಿವಮನ್ಯು, ನಿತಿನ್, ಅನಿರುದ್ಧ್, ಸೃಜನ್, ಪೂಜಾ, ವಿಶ್ವಾಸ್ ಉಡುಪ, ಅವನೀಶ ಭಾಗವಹಿಸಿದರು.ಮಕ್ಕಳ ಮೇಳದ ಕಲಾವಿದರು ಹಾಗೂ ಮೇಳದ ಪ್ರಾಕ್ತನ ಕಲಾವಿದರು ಪುರುಷಾಮೃಗ, ಸುದರ್ಶನ ವಿಜಯ, ಪಟ್ಟಾಭಿಷೇಕ, ಪಾದುಕಾಪ್ರದಾನ, ಅಗ್ರಪೂಜೆ, ಕಿರಾತಾರ್ಜುನ ಪ್ರಸಂಗಗಳನ್ನು ಪ್ರದರ್ಶಿಸಿದರು.ನಾಟ್ಯ ಗುರು ರಾಜೇಶ್ ಐ. ಕಟೀಲು, ಹಿಮ್ಮೇಳದ ಗುರು ಕೃಷ್ಣರಾಜ ನಂದಳಿಕೆ, ತಾಳಮದ್ದಲೆ ಗುರು ಸರ್ಪಂಗಳ ಈಶ್ವರ ಭಟ್ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ