ನಾಳೆಯಿಂದ ಕಟೀಲು ದೇವಸ್ಥಾನ ವರ್ಷಾವಧಿ ಜಾತ್ರೆ

KannadaprabhaNewsNetwork |  
Published : Apr 12, 2024, 01:04 AM IST
11 | Kannada Prabha

ಸಾರಾಂಶ

19ಕ್ಕೆ ಹಗಲು ಬ್ರಹ್ಮರಥೋತ್ಸವ ನಡೆಯಲಿದ್ದು ಅಂದು ಬೆಳಗ್ಗೆ ೮ಕ್ಕೆ ಬಲಿ ಹೊರಟು, ೯ಗಂಟೆಗೆ ರಥಾರೋಹಣ, ರಥೋತ್ಸವ, ರಾತ್ರಿ ಉತ್ಸವಬಲಿ, ಶಯನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ವರ್ಷಾವಧಿ ಉತ್ಸವವು ಏಪ್ರಿಲ್‌ 12ರಿಂದ 20ರ ವರೆಗೆ ನಡೆಯಲಿದೆ. ಏ.12ಕ್ಕೆ ದೊಡ್ಡರಂಗಪೂಜೆ, ಅಂಕುರಾರೋಹಣ ನಡೆಯಲಿದೆ. 13ರಂದು ಧ್ವಜಾರೋಹಣ, ರಾತ್ರಿ ಉತ್ಸವ ಬಲಿ ಸಂಜೆ ೫ ರಿಂದ ಯಕ್ಷಲಹರಿ ಕಿನ್ನಿಗೋಳಿ ಇವರಿಂದ ತಾಳಮದ್ದಲೆ ಮೇಘನಾದ ಕಾಳಗ, 14ರಂದು ಭಾನುವಾರ ಪ್ರಾತಃ ಯುಗಾದಿ ದೀಪದ ಬಲಿ ರಾತ್ರಿ ಉತ್ಸವ ಬಲಿ ನಡೆಯಲಿದೆ.

ಸಂಜೆ ೫ರಿಂದ ಮಹಿಳಾ ಯಕ್ಷಕೂಟ ಕದ್ರಿ ತಾಳಮದ್ದಲೆ ನಡೆಯಲಿದ್ದು, 15ರಂದು ಭ್ರಾಮರೀವನದಲ್ಲಿ ಪ್ರತಿಷ್ಠಾವರ್ಧಂತಿ, ರಾತ್ರಿ ಉತ್ಸವ ಬಲಿ, ಮೂಡು ಸವಾರಿ, ಸಂಜೆ ೫ರಿಂದ ಸಾತ್ವಿಕ ತೇಜ ಕಲಾ ಕೇಂದ್ರ, ಒಡಿಯೂರು ಇವರಿಂದ ಯಕ್ಷಗಾನ ಸುದರ್ಶನ ವಿಜಯ , 16ರಂದು ಪ್ರಾತಃ ದೀಪದ ಬಲಿ ರಾತ್ರಿ ಉತ್ಸವ ಬಲಿ, ಸಂಜೆ ೫ರಿಂದ ಕು. ಅನನ್ಯ ಎನ್.ಜಿ. ಬೆಂಗಳೂರು ಇವರಿಂದ ಭರತನಾಟ್ಯ, ರಾತ್ರಿ ೭.೦೦ ಕಲಾಶ್ರೀ ನೃತ್ಯ ಬಳಗ, ಕದ್ರಿ, ಮಂಗಳೂರು ಇವರಿಂದ ಭರತನಾಟ್ಯ, 17ರಂದು ರಾತ್ರಿ ಉತ್ಸವ ಬಲಿ, ಬೆಳ್ಳಿ ರಥೋತ್ಸವ, ಸಂಜೆ ೫ರಿಂದ ಶಾಸ್ತ್ರೀಯ ಸಂಗೀತ - ಸರ್ವೇಶ್ ದೇವಸ್ಥಳಿ, ಉಜಿರೆ ಇವರಿಂದ ರಾತ್ರಿ ೭ ರಿಂದ ಮಿಥುನ್‌ ಶ್ಯಾಮ್, ವೈಷ್ಣವಿ ನಾಟ್ಯಶಾಲಾ ಟ್ರಸ್ಟ್, ಬೆಂಗಳೂರು ಇವರಿಂದ ನೃತ್ಯ ನಡೆಯಲಿದೆ. 18ರಂದು ೮ ಗಂಟೆಗೆ ಹಗಲು ಬ್ರಹ್ಮಸನ್ನಿಧಿಯಲ್ಲಿ ಪರ್ವ ರಾತ್ರಿ ಉತ್ಸವಬಲಿ, ಪಡು ಸವಾರಿ, ಸಂಜೆ ೫ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಕುಮಾರಿ ಶೋಭಿತಾ ಭಟ್ ಹಾಗೂ ಕುಮಾರಿ ಆಶ್ವೀಜಾ ಉಡುಪ ಇವರಿಂದ ರಾತ್ರಿ ೭ಕ್ಕೆ ನೃತ್ಯರೂಪಕ - ಗಣೇಶ ಜನನ , ಕದ್ರಿ ನೃತ್ಯ ವಿದ್ಯಾನಿಲಯ, ಕದ್ರಿ, ಮಂಗಳೂರು ಇವರಿಂದ ನಡೆಯಲಿದೆ.

19ಕ್ಕೆ ಹಗಲು ಬ್ರಹ್ಮರಥೋತ್ಸವ ನಡೆಯಲಿದ್ದು ಅಂದು ಬೆಳಗ್ಗೆ ೮ಕ್ಕೆ ಬಲಿ ಹೊರಟು, ೯ಗಂಟೆಗೆ ರಥಾರೋಹಣ, ರಥೋತ್ಸವ, ರಾತ್ರಿ ಉತ್ಸವಬಲಿ, ಶಯನ, ದುರ್ಗಾಮಕ್ಕಳ ಮೇಳ ಕಟೀಲು ಇವರಿಂದ ಯಕ್ಷಗಾನ - ವೀರ ಭಾರ್ಗವ ಪ್ರದರ್ಶನ ನಡೆಯಲಿದೆ. 20ರಂದು ಬೆಳಗ್ಗೆ ಕವಾಟೋದ್ಘಾಟನೆ, ಇಡೀರಾತ್ರಿ ಅವಭೃತೋತ್ಸವ (ಆರಾಟ) ಎಕ್ಕಾರು ಯಾತ್ರೆ, ಬ್ರಹ್ಮರಥೋತ್ಸವ, ತೂಟೆದಾರ, ಶಿಬರೂರು ಕೊಡಮಣಿತ್ತಾಯ ಭೇಟಿ, ಧ್ವಜಾವರೋಹಣ, ರಾತ್ರಿ ೮ರಿಂದ ಭರತನಾಟ್ಯ ವಿಶ್ವಭಾರತಿ ನೃತ್ಯ ಶಾಲೆ, ಬೆಂಗಳೂರು ಇವರಿಂದ ರಾತ್ರಿ ೧೦ ಕ್ಕೆ ಭರತನಾಟ್ಯ, ರಶ್ಮಿ ಚಿದಾನಂದ ಮತ್ತು ಗೀತಾ ಸರಳಾಯ, ನೃತ್ಯಭಾರತಿ ಕದ್ರಿ ಇವರಿಂದ ಪ್ರದರ್ಶನವಾಗಲಿದೆ. ಉತ್ಸವಾಂಗ ಸರಸ್ವತೀ ಸದನದಲ್ಲಿ ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ