ಕನ್ನಡಪ್ರಭ ವಾರ್ತೆ ಮಡಿಕೇರಿ
ಮಂಗಳವಾರ ಕಟ್ಟೆಮಾಡು ಶ್ರೀ ಮೖತ್ಯುಂಜಯ ದೇವಾಲಯದಲ್ಲಿ ತಹಸೀಲ್ದಾರ್ ಪ್ರವೀಣ್ ಸಮ್ಮುಖದಲ್ಲಿ ಸಭೆ ನಡೆಯಿತು.
ದೇವಾಲಯದ ಐವರು ಸದಸ್ಯರು, ಗ್ರಾಪಂ. ಅಧ್ಯಕ್ಷರು, ಉಪಾಧ್ಯಕ್ಷ , ಸದಸ್ಯರು, ಪಿಡಿಓ ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.ಕೋಟ್೯ ಆದೇಶವನ್ನು ಪರಿಪಾಲಿಸಬೇಕು. ದೇವಾಲಯಕ್ಕೆ ಐದು ಮಂದಿಗಿಂತ ಹೆಚ್ಚು ಜನರು ತೆರಳದಂತೆ ಸೂಚನೆ ನೀಡಿದರು.
ತಹಸೀಲ್ದಾರ್ ಪ್ರವೀಣ್ , ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಅಧಿಕಾರಿಗಳು ಸೂಚಿಸಿದರು.
ದೇವಾಲಯದಿಂದ 200 ಮೀಟರ್ ಅಂತರದಲ್ಲಿ ಮಾರ್ಚ್ 13 ರವರೆಗೆ 163 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿದೆ. ಗ್ರಾಮ ಪ್ರಮುಖರ ಸಭೆ ಹಿನ್ನೆಲೆಯಲ್ಲಿ ಕಟ್ಟೆಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಗೆ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.