ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಿಗಳಿಂದ ಶಾಸಕ ಸ್ವರೂಪ್‌ಗೆ ಮನವಿ

KannadaprabhaNewsNetwork |  
Published : Nov 23, 2024, 12:36 AM IST
ಮನವಿ | Kannada Prabha

ಸಾರಾಂಶ

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಿಗಳ ಒಕ್ಕೂಟದ ವತಿಯಿಂದ ಎಚ್.ಪಿ. ಸ್ವರೂಪ್ ಪ್ರಕಾಶ್ ಹಾಗೂ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಅವರಿಗೆ ನಗರಸಭೆ ಆವರಣದಲ್ಲೇ ಮನವಿ ಸಲ್ಲಿಸಿದರು. ನಗರಸಭೆ ವತಿಯಿಂದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳಿಗೆ ಅತಿ ಶೀಘ್ರವಾಗಿ ವರ್ತಕರ ಹೆಸರು ನೋಂದಾಯಿಸಿ ಬಾಡಿಗೆಗೆ ನೀಡಬೇಕು. ಹಾಗೂ ಮಹಾವೀರ ವೃತ್ತದಲ್ಲಿ ಅನಧಿಕೃತವಾಗಿ ರಸ್ತೆ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಕೋರಿದರು.

ಕನ್ನಡಪ್ರಭ ವಾರ್ತೆ ಹಾಸನ

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಿಗಳ ಒಕ್ಕೂಟದ ವತಿಯಿಂದ ಎಚ್.ಪಿ. ಸ್ವರೂಪ್ ಪ್ರಕಾಶ್ ಹಾಗೂ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಅವರಿಗೆ ನಗರಸಭೆ ಆವರಣದಲ್ಲೇ ಮನವಿ ಸಲ್ಲಿಸಿದರು.

ಇದೇ ವೇಳೆ ವರ್ತಕ ಸಮೀರ್ ಹಾಗೂ ರಾಜೀವ್ ಮಾತನಾಡಿ, ನಗರಸಭೆ ವತಿಯಿಂದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳಿಗೆ ಅತಿ ಶೀಘ್ರವಾಗಿ ವರ್ತಕರ ಹೆಸರು ನೋಂದಾಯಿಸಿ ಬಾಡಿಗೆಗೆ ನೀಡಬೇಕು. ಹಾಗೂ ಮಹಾವೀರ ವೃತ್ತದಲ್ಲಿ ಅನಧಿಕೃತವಾಗಿ ರಸ್ತೆ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಕೋರಿದರು.

ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸರ್ಕಾರದ ವತಿಯಿಂದ ಸಾಕಷ್ಟು ಹಣ ವ್ಯಯ ಮಾಡಿ ನೂತನವಾಗಿ ಮಳಿಗೆಗಳನ್ನು ನಿರ್ಮಿಸಲಾಗಿದೆ, ಆದರೆ ಅವುಗಳನ್ನು ವರ್ತಕರ ಹೆಸರಿಗೆ ನೋಂದಾಯಿಸಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಮಹಾವೀರ ವೃತದ ಸಮೀಪ ಸ್ಥಳೀಯ ಸಂಸ್ಥೆ ಜಿಲ್ಲಾಡಳಿತ ಹಾಗೂ ಸರ್ಕಾರದ ವತಿಯಿಂದ ಸುಂದರವಾದ ರಸ್ತೆ ಹಾಗೂ ಪಾದಚಾರಿಮಾರ್ಗ ಮತ್ತು ವಿದ್ಯುತ್ ದ್ವೀಪಗಳನ್ನು ಅಳವಡಿಸಲಾಗಿದೆ. ಆದರೆ ಕೆಲವು ವರ್ತಕರು ಪಾದಾಚಾರಿ ಮಾರ್ಗ ವತ್ತುವರಿ ಮಾಡಿ ಸಾರ್ವಜನಿಕರ ಹಾಗೂ ವಾಹನಗಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದರು.

ಹೂವಿನ ವ್ಯಾಪಾರ ತೆರಿಗೆ ತಾತ್ಕಾಲಿಕವಾಗಿ ಮಹಾವೀರ ವೃತ್ತದ ಬಳಿ ವ್ಯಾಪಾರ ಮಾಡಲು ಜಾಗ ನಿಗದಿ ಮಾಡಲಾಗಿತ್ತು. ಆದರೆ ಕೆಲವು ವರ್ತಕರು ಇದನ್ನೇ ದುರುಪಯೋಗಪಡಿಸಿಕೊಂಡು ಕುಟುಂಬ ಸದಸ್ಯರು ಮಾರುಕಟ್ಟೆ ವರ್ತಕರು ಪಾದಾಚಾರಿ ರಸ್ತೆಯನ್ನು ಉಸ್ತುವಾರಿ ಮಾಡಿ ವ್ಯಾಪಾರಿ ಮಾಡುತ್ತಿರುವುದರಿಂದ ಇತರರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.

ಮಾರುಕಟ್ಟೆ ವರ್ತಕರಿಗೆ ತನ್ನ ಜಾಗ ಸೂಚಿಸಿರುವ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸೂಚನೆ ನೀಡಬೇಕು. ಹೂವಿನ ವ್ಯಾಪಾರಸ್ಥರಿಗೆ ಮಾರುಕಟ್ಟೆಯ ಒಳಭಾಗದಲ್ಲಿ ಜಾಗ ನಿಗದಿಪಡಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಪ್ರತಿಕ್ರಿಯಿಸಿ, ಅತಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಇದೇ ವೇಳೆ ವ್ಯಾಪಾರಸ್ಥರಾದ ರಘು, ಯೋಗೀಶ್, ರಫಿಕ್‌, ಅತೀಖ್, ಬಾಬು, ರವಿ, ಪೂರ್ಣೇಶ್, ಜಾವಿದ್, ಮಹೇಶ್, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ