ಕುಮಟಾ: ಅಂಗವಿಕಲರು, ರೋಗಿಗಳು, ವಯೋವೃದ್ಧರು, ಸ್ತ್ರೀ ಮತ್ತು ಬ್ರಾಹ್ಮಣರು ದುರ್ಬಲ ವರ್ಗವಾಗಿದ್ದು, ಇವರನ್ನೆಲ್ಲ ಒಳಗೊಂಡೇ ದೇಶ ಪ್ರಗತಿ ಸಾಧಿಸಬೇಕು ಎಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನಿರ್ದೇಶಿಸಿದೆ. ಕೌಟಿಲ್ಯನ ಅರ್ಥಶಾಸ್ತ್ರವು ಸಾರ್ವಕಾಲಿಕ ಮಹತ್ವ ಉಳ್ಳದ್ದಾಗಿದೆ ಎಂದು ಆರ್ಥಿಕ ತಜ್ಞ ಡಾ. ಜಿ.ವಿ. ಜೋಶಿ ಹೇಳಿದರು.
ಅಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ ಮಾತನಾಡಿ, ಜೀವನದಲ್ಲಿ ಎಷ್ಟೇ ಎತ್ತರದ ಸಾಧನೆ ಮಾಡಿ ಯಶಸ್ವಿಯಾಗಿದ್ದರೂ ತಂದೆ, ತಾಯಿ, ಕುಟುಂಬ ಹಾಗೂ ಸಮಾಜವನ್ನು ಎಂದಿಗೂ ಮರೆಯಬಾರದು. ಸಮಾಜದ ಋಣವನ್ನು ಪ್ರತಿಯೊಬ್ಬರೂ ತೀರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಅಧಿಕ ಅಂಕ ಗಳಿಸಿದ ತಾಲೂಕಿನ ಹವ್ಯಕ ಸಾಧಕ ವಿದ್ಯಾರ್ಥಿಗಳನ್ನು ಸಂಘದಿಂದ ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು. ಕಾರ್ಯದರ್ಶಿ ಮಧು ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಇದ್ದರು.