ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗುರುಕುಲ ಆವರಣದಲ್ಲಿ ಸಂಸ್ಥೆ ಸ್ಥಾಪನೆಗೆ ಸಹಕರಿಸಿದ್ದವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳ ಹಿಂದೆ ಗುರುಕುಲ ನಿರ್ಮಾಣಕ್ಕೆ ಮುಂದಾದಾಗ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಆ ವೇಳೆ ನನ್ನ ಜೊತೆಯಲ್ಲಿ ಅಕ್ಕ ಪಕ್ಕ ಗ್ರಾಮಗಳ ಮುಖಂಡರು, ಸುತ್ತ ಮುತ್ತಲಿನ ಜಮೀನಿನ ರೈತರು ಹಾಗೂ ಹಿತೈಷಿಗಳು ಸಹಕಾರ ನೀಡಿ ಸಂಸ್ಥೆಯನ್ನು ಬೆಳೆಸಿದರು ಎಂದು ಸ್ಮರಿಸಿಕೊಂಡರು.
ಗುರುಕುಲದಲ್ಲಿ ಈವರೆವಿಗೂ 10ನೇ ತರಗತಿ ನಂತರ ಪದವಿವರೆವಿಗೂ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಜೀವನ ಮೌಲ್ಯಗಳ ಕಲಿಕೆಯ ಪಾಠ ಹೇಳಿಕೊಡಲಾಗುತ್ತಿದೆ. ಅವರ ಜೊತೆಗೆ ಸಂಸ್ಕೃತ, ವೇದೋಪನಿಷತ್, ಇಂಗ್ಲಿಷ್, ಯೋಗ, ಭರತನಾಟ್ಯ, ಕಂಪ್ಯೂಟರ್ ಶಿಕ್ಷಣಗಳನ್ನು ಕಲಿಸಲಾಗುತ್ತಿತ್ತು ಎಂದರು.ನಮ್ಮ ಸಂಸ್ಥೆಯಲ್ಲಿ ಕಲಿತ ಹಲವು ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರಗಳ ತೊಡಗಿಸಿಕೊಂಡು ತಮ್ಮ ಉತ್ತಮವಾದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಸ್ಥಳದಲ್ಲಿ ಮಹಿಳೆಯರು ಸೇರಿದಂತೆ ಪುರುಷರಿಗೂ ತರಬೇತಿ ಶಿಬಿರ ಆಯೋಜಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರು- ಹಿರಿಯರು, ಜಮೀನಿನ ರೈತರು, ಗುರುಕುಲ ಸ್ಥಾಪನೆಗೆ ಸಹಕರಿಸಿದ್ದವರಿಗೆ ಸನ್ಮಾಸಿನಿ ಅಭಿನಂಸಿದರು.
ಮದ್ದೂರು:
ಸಂಘದ ಹಾಲಿ ಅಧ್ಯಕ್ಷ ಲಿಂಗರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಟಿ.ಪುಟ್ಟಸ್ವಾಮಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕಿ ಆಶಾ ಅಂತಿಮವಾಗಿ ಘೋಷಣೆ ಮಾಡಿದರು.