ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬಸವಣ್ಣರ ಜಯಂತಿಯಲ್ಲಿ ಮಾತನಾಡಿ, ಬಸವಣ್ಣನವರು ತಮ್ಮ ಅನುಭವ ಮಂಟಪದ ಮೂಲಕ ಜಾತಿವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದರು. ಕಾಯಕವೇ ಕೈಲಾಸ ಎಂದು ನೀಡಿರುವ ಸಂದೇಶ ಸಾಕಷ್ಟು ಅರ್ಥ ನೀಡುತ್ತದೆ ಎಂದರು.
ಬಸವಣ್ಣ ಅವರಂತ ಮಹಾನ್ ನಾಯಕರ ಸಂದೇಶಗಳನ್ನು ಕೇವಲ ದಿನಾಚರಣೆಗೆ ಸೀಮಿತಗೊಳಿಸದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆ ಜನಾಂಗಕ್ಕೆ ಬಳುವಳಿಯಾಗಿ ನೀಡಬೇಕು ಎಂದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಬಸವಣ್ಣ ವಿಶ್ವನಾಯಕರು ಎಲ್ಲಾ ಸಮುದಾಯವರು ಸಹ ಇಂತಹ ಮಹಾನ್ ನಾಯಕರ ಜಯಂತಿಗಳಲ್ಲಿ ಭಾಗವಹಿಸಿ ಅವರ ತತ್ವ, ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ಬಸವಣ್ಣ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ: ಕುಮಾರಸ್ವಾಮಿ
ಬಸವಣ್ಣನವರ ಒಬ್ಬ ವ್ಯಕ್ತಿಯಲ್ಲ ಅವರ ಒಂದು ಶಕ್ತಿಯಾಗಿದ್ದರು ಎಂದು ಮೈಸೂರಿನ ಪ್ರಸಿದ್ಧ ವಚನಕಾರ ಕುಮಾರಸ್ವಾಮಿ ಬಣ್ಣಿಸಿದರು.
ಬಸವಣ್ಣನವರು ಮಹಾ ಮಂತ್ರಿ ಆಗಿದ್ದರೂ ಸಹ ನಾನು ದೊಡ್ಡವನು ಎಂದುಕೊಳ್ಳದೆ. ಎಂದಿಗೂ ಬಾಗಿದ ತಲೆ, ಮುಗಿದ ಕೈ ಆಗಿ ನಿಂತಿದ್ದವರಾಗಿದ್ದರು. ಬಸವಣ್ಣರನ್ನು ಪೂಜಿಸೂವ ಮೂರ್ತಿಯಾಗಿ ಇಂದು ನಾವು ಕಾಣುತ್ತಿದ್ದೇವೆ ಎಂದರು.
ಈ ವೇಳೆ ಅಖಿಲ ಭಾತರ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಶಿವಕುಮಾರ, ಕಾರ್ಯದರ್ಶಿ ನಿಜಗುಣ, ಸಹಕಾರ್ಯದರ್ಶಿ ದೀಪಕ್, ನಿರ್ದೇಶಕರಾದ ಶ್ರೀಕಂಠು, ವೀಣಾ, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಮಾಜಿ ಅಧ್ಯಕ್ಷ ಮರಿಬಸವಯ್ಯ, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಇದ್ದರು.