ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿ, ನಾಡಿನ ಭವಿಷ್ಯದ ಬಗ್ಗೆ ಅಪಾರ ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು ಜನಪರ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ನೆಲಸಿದ್ದಾರೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಆರ್.ಶಶಿಕಲಾ, ಸದಸ್ಯರಾದ ಎಚ್.ಕೆಮೂರ್ತಿ, ವಂದ್ರಿ ಬಾಬು, ರವೀಶ್, ಆನಂದ್, ಶಶಿಕುಮಾರ್, ಶಿವಲಿಂಗೇಗೌಡ, ಈರೇಶ್, ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಎಚ್.ಬಿ.ರವಿ, ಬಿ.ಕೆ.ಲಿಂಗರಾಜು, ಶಿವಣ್ಣ, ಮಹಮದ್ ಸಲೇಹಾ, ಗಂಗಾಧರ್, ಸದಾಶಿವ, ಭಾಸ್ಕರ್ ಸೇರಿದಂತೆ ಹಲವರು ಇದ್ದರು.ಆಷಾಢ ಮಾಸದ ಶುಕ್ರವಾರ ಗ್ರಾಮ ದೇವತೆಗೆ ವಿಶೇಷ ಪೂಜೆ
ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಗ್ರಾಮದೇವತೆ ಪಟ್ಟಲದಮ್ಮನ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನಡೆಯಿತು.
ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮದೇವತೆ ಪಟ್ಟಲದಮ್ಮ ದೇವಿ ಸನ್ನಿಧಿಯಲ್ಲಿ ಪ್ರತಿವರ್ಷ ಕೊಂಡೋತ್ಸವವನ್ನು ನಡೆಸಲಾಗುತ್ತದೆ. ಹಾಗೂ ಆಷಾಢ ಮಾಸದ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ವಿಶೇಷ ಪೂಜೆಗಳು ನಡೆಯುತ್ತವೆ ಎಂದು ಅರ್ಚಕ ಕೃಷ್ಣಪ್ಪ ತಿಳಿಸಿದರು.
ಹರಕೆ ಹೊತ್ತುಕೊಂಡಿದ್ದ ಭಕ್ತರು ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಪರಸ್ಪರ ವಿನಿಮಯ ಮಾಡಿಕೊಂಡು ಹೆಸರುಬೇಳೆ ಪಾನಕ ಹಂಚಿ ದೇವರ ಕೃಪೆಗೆ ಪಾತ್ರರಾದರು.