ಕನ್ನಡಪ್ರಭವಾರ್ತೆ ಪಾಂಡವಪುರ
ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಪಂನಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಸೋಮವಾರ ಬೆಳಗ್ಗೆ ಆಚರಿಸಲಾಯಿತು.ಗ್ರಾಪಂ ಆವರಣದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಜತೆಗೂಡಿ ನಾಡಪ್ರಭು ಕೆಂಪೇಗೌಡ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ರವಿ ಮಾತನಾಡಿ, ದೇಶ ಕಂಡ ಅಪ್ರತಿಮ ನಾಯಕ, ಉತ್ತಮ ಆಡಳಿತಗಾರರಾಗಿ, ವಿಜಯ ನಗರ ಸಾಮ್ರಾಜ್ಯದ ಸಾಮಾಂತ ರಾಜನಾಗಿದ್ದ ಕೆಂಪೇಗೌಡರು ಚಿಕ್ಕವಯಸ್ಸಿನಿಂದಲೂ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಣ್ಣಾರೆ ಕಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು ಎಂದರು.
ಇಂದು ಬೆಂಗಳೂರು ನಗರ ಎಲ್ಲದರೂ ಸಾಕಷ್ಟು ಬೆಳದಿದೆ. ಬೆಂಗಳೂರಿನಲ್ಲಿ ಎಲ್ಲಾ ಜಾತಿ, ಧರ್ಮ, ಜನಾಂಗದ ಕೋಟ್ಯಂತರ ಜನರು ಬದುಕು ನಡೆಸುತ್ತಿದ್ದಾರೆ ಎಂದರು.ಮುಖ್ಯಶಿಕ್ಷಕ ಶ್ರೀನಿವಾಸ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿ ನಾಲ್ಕು ದಿಕ್ಕುಗಳಲ್ಲೂ ಕೋಟೆಗಳನ್ನು ನಿರ್ಮಿಸಿದರು. ಇಂದು ಬೆಂಗಳೂರು ನಾಲ್ಕು ದಿಕ್ಕಿನ ಕೋಟೆಗಳನ್ನು ಮೀರಿ ದೊಡ್ಡಮಟ್ಟದಲ್ಲಿ ಬೆಳೆದಿದೆ, ಆದರೆ, ನಾಡಪ್ರಭುಗಳು ನಿರ್ಮಿಸಿದ್ದ ಪ್ರಸ್ತುತ ಕೆರೆ-ಕಟ್ಟೆಗಳು, ರಾಜಕಾಲುವೆಗಳನ್ನು ಮುಚ್ಚಿರುವುದಕ್ಕೆ ವಿಷಾದಿಸಿದರು.
ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಅಗಟಹಳ್ಳಿ ಕೆ.ರವಿರಾಜ್, ಉಪಾಧ್ಯಕ್ಷೆ ಬಿ.ಕೆ.ಶಕುಂತಲ, ಮಾಜಿ ಅಧ್ಯಕ್ಷರಾದ ಕಠಾರಿಶಂಕರ, ಮನು, ಪ್ರಸನ್ನ, ಮಹದೇವಮ್ಮ, ಸದಸ್ಯೆ ಮಂಜುಳ, ಮಾಜಿ ಉಪಾಧ್ಯಕ್ಷ ನಿಂಗೇಗೌಡ, ಸೊಸೈಟಿ ನಿರ್ದೇಶಕರಾದ ಕುಳ್ಳೇಗೌಡ, ಡಿ.ಟಿ.ಧರ್ಮ, ಶಂಕರ, ಚಿಕ್ಕಬ್ಯಾಡರಹಳ್ಳಿ ಡೇರಿ ಅಧ್ಯಕ್ಷ ಸಿ.ಎನ್.ಚಂದನ್, ಪಿಡಿಒ ಕುಮಾರ್, ಅಂಗನವಾಡಿ, ಆಶಾ ಕಾರ್‍ಯಕರ್ತೆಯರು, ಗ್ರಾಮದ ಮುಖಂಡರು, ಜಯಮಾನರು, ಯುವಕರು ಹಾಜರಿದ್ದರು.ಇಂದು ಪಟ್ಟಣಕ್ಕೆ ನಿಖಿಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಕೆ.ಆರ್.ಪೇಟೆ: ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜುಲೈ 1 ರಂದು ಪಟ್ಟಣಕ್ಕೆ ಆಗಮಿಸಲಿದ್ದು, ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ಯುವ ನಾಯಕನನ್ನು ಅದ್ದೂರಿಯಾಗಿ ಸ್ವಾಗತಿಸಲು ತಾಲೂಕು ಜೆಡಿಎಸ್ ಕಾರ್ಯಕರ್ತರು ನಿರ್ಧರಿಸಿದ್ದು, ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮೆರವಣಿಗೆ ಮೂಲಕ ಸಾವಿರಾರು ಕಾರ್ಯಕರ್ತರೊಂದಿಗೆ ನಿಖಿಲ್ ಅವರನ್ನು ಕರೆದೊಯ್ಯಲು ತೀರ್ಮಾನಿಸಿದ್ದಾರೆ.