ಕನ್ನಡಪ್ರಭ ವಾರ್ತೆ ಹಾಸನ
ನಂತರ ಮಾತನಾಡಿದ ಅವರು, ದಾಸರಕೊಪ್ಪಲು ಅಂಗಡಿ ರಾಜಣ್ಣನವರು ೨೦೦೨ರಲ್ಲಿ ರೈತ ಸಂಘಕ್ಕೆ ಬಂದು ಹಾಸನ ತಾಲೂಕು ಉಪಾಧ್ಯಕ್ಷರಾಗಿ ರೈತರ ಪರವಾಗಿ ಸೇವೆ ಸಲ್ಲಿಸಿ ಜಿಲ್ಲಾ ಖಜಾಂಚಿಯಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ದೆಹಲಿಗೆ ೭ ಬಾರಿ, ಬಾಂಬೆಗೆ ೩ ಬಾರಿ, ಬೆಳಗಾಂಗೆ ೨೦ ಬಾರಿ ನೂರಾರು ಬಾರಿ ಪೊಲೀಸರಿಂದ ಬಂಧನಕ್ಕೊಳಗಾದರೂ ಹೆದರದೆ ಧೀಮಂತ ನಾಯಕರಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇವರು ದೈವಾಧೀನರಾಗಿರುವರು ಎಂದು ನೆನಪಿಸಿಕೊಂಡರು. ಕೆಂಪೇಗೌಡ ಕೇವಲ ಬರೀ ರಾಜನಾಗಿ ಕೆಲಸ ಮಾಡಲಿಲ್ಲ. ನಾಡಪ್ರಭುವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸಮಸ್ಯೆ ತಿಳಿಯಲು ಅವರು ಭೇಟಿ ಮಾಡುವ ಕೆಲಸ ಇತ್ಯಾದಿ ಎಲ್ಲವೂ ಕೂಡ ತುಂಬ ಗೌರವಯುತವಾಗಿ ಯಾವುದೇ ಭಿನ್ನ, ಭೇದ ಇಲ್ಲದೆ ನಡೆದುಕೊಳ್ಳುತ್ತಿದ್ದರು. ಸಿಟಿ ಮಾರ್ಕೇಟ್, ಕಾಟನ್‌ಪೇಟೆ, ಚಿಕ್ಕಪೇಟೆ ಸೇರಿದಂತೆ ಒಂದೊಂದು ಮಾರುಕಟ್ಟೆ ಕೂಡ ಒಂದೊಂದು ವರ್ಗಗಳು ಎಲ್ಲೆಲ್ಲಿಂದಲೂ ಇಲ್ಲಿಗೆ ಬಂದು ನೆಲೆ ಕಟ್ಟಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಶ್ರೀಜಯಬಸವಾನಂದ ಸ್ವಾಮೀಜಿ, ಮಂದಗೆರೆಯ ಹಜರತ್ ಮೆಹಬೂಬ್ ಅಇಲ್ ಶಾ ಚಿಸ್ಟಿ ಹುಲ್ ಖಾದ್ರಿ, ಹಾಸನದ ಧರ್ಮಗುರು ಎಂ.ಎಸ್. ಶ್ರೀನಿವಾಸ್ ಮೂರ್ತಿ, ಮೋಹಿನ್ ಉಲ್ಲಾ ಷ ಖಾದ್ರಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಸಂಚಾಲಕ ಮೊಹಮ್ಮದ್ ಸಾಧಿಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋರನಕೊಪ್ಪಲು ಜಯರಾಮ್ ಇತರರು ಇದ್ದರು.