ಕೆಂಪೇಗೌಡರ ನಗರ ನಿರ್ಮಾಣದ ಪರಿಕಲ್ಪನೆ ಮೆಚ್ಚುವಂಥದ್ದು: ಮಲ್ಲಿಕಾರ್ಜುನ್

KannadaprabhaNewsNetwork |  
Published : Jun 26, 2024, 12:36 AM IST
25ಕೆಎಂಎನ್ ಡಿ20 | Kannada Prabha

ಸಾರಾಂಶ

ಸಮಾಜ ಸುಧಾರಕರು ಮತ್ತು ದಾರ್ಶನಿಕರಿಗೆ ಯಾವುದೇ ಜಾತಿಯಿಲ್ಲ. ಸರ್ವ ಜನಾಂಗದ ಹಿತಕ್ಕಾಗಿ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ದುಡಿದಿದ್ದಾರೆ. ನಾಡಿನ ಎಲ್ಲ ಮಹನೀಯರ ಪರಿಚಯ ಮಕ್ಕಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಆಗಬೇಕು ಎನ್ನುವ ಕಾರಣಕ್ಕಾಗಿ ಮಹನೀಯರ ಜಯಂತಿ ವೇಳೆ ಭಾವಚಿತ್ರಗಳನ್ನು ಉಚಿತವಾಗಿ ಶಾಲಾ ಕಾಲೇಜುಗಳಿಗೆ ಮತ್ತು ಸಂಸ್ಥೆಗಳಿಗೆ ವಿತರಿಸುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

515 ವರ್ಷಗಳೇ ಕಳೆದಿದ್ದರೂ ಕೆಂಪೇಗೌಡರ ನಗರ ನಿರ್ಮಾಣದ ಪರಿಕಲ್ಪನೆ ಎಲ್ಲರೂ ಮೆಚ್ಚುವಂಥದ್ದು ಎಂದು ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ಜಯನಗರ ಬಡಾವಣೆಯ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿ, ಬುದ್ಧ, ಬಸವಣ್ಣನವರಿಂದ ಹಿಡಿದು ರಾಷ್ಟ್ರಕವಿ ಕುವೆಂಪು ಅವರವರೆಗೆ ರಾಷ್ಟ್ರದ ಎಲ್ಲಾ ಸಮಾಜ ಸುಧಾರಕರೂ ಸರ್ವ ಜನರ ಹಿತಕ್ಕಾಗಿಯೇ ಶ್ರಮಿಸಿದ್ದಾರೆ ಎಂದರು.

ಸಮಾಜ ಸುಧಾರಕರು ಮತ್ತು ದಾರ್ಶನಿಕರಿಗೆ ಯಾವುದೇ ಜಾತಿಯಿಲ್ಲ. ಸರ್ವ ಜನಾಂಗದ ಹಿತಕ್ಕಾಗಿ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ದುಡಿದಿದ್ದಾರೆ. ನಾಡಿನ ಎಲ್ಲ ಮಹನೀಯರ ಪರಿಚಯ ಮಕ್ಕಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಆಗಬೇಕು ಎನ್ನುವ ಕಾರಣಕ್ಕಾಗಿ ಮಹನೀಯರ ಜಯಂತಿ ವೇಳೆ ಭಾವಚಿತ್ರಗಳನ್ನು ಉಚಿತವಾಗಿ ಶಾಲಾ ಕಾಲೇಜುಗಳಿಗೆ ಮತ್ತು ಸಂಸ್ಥೆಗಳಿಗೆ ವಿತರಿಸುತ್ತಿದ್ದೇನೆ ಎಂದರು.

ಶಾಲೆಗಳಲ್ಲಿ ಮಹನೀಯರ ಭಾವಚಿತ್ರಗಳನ್ನು ಹಾಕಿದರೆ ಸಾಲದು. ಮಕ್ಕಳಿಗೆ ಅವರನ್ನು ಪರಿಚಯಿಸುವ ಕೆಲಸ ಶಿಕ್ಷಕ ಸಮುದಾಯ ಮಾಡಬೇಕು. ನಾಡಪ್ರಭು ಕೆಂಪೇಗೌಡರು ಪಾಳೆಯಗಾರರಾದರೂ ಸರ್ವರ ಹಿತಕ್ಕಾಗಿ ದುಡಿದ ಮಹನೀಯರ ಸಾಲಿನಲ್ಲಿ ನಿಲ್ಲುತ್ತಾರೆ ಎಂದರು.

59 ವರ್ಷಗಳ ಕಾಲ ಬದುಕಿದ್ದರೂ ಸಾವಿರಾರು ವರ್ಷಗಳ ಕಾಲಘಟ್ಟದ ಜನತೆ ನೆನಪಿನಲ್ಲಿ ಉಳಿಯುವಂಥಹ ಕೆಲಸವನ್ನು ಮಾಡಿದ್ದಾರೆ. ಇಂದಿನ ನಗರ ವ್ಯವಸ್ಥೆ ಲೋಪಗಳನ್ನು ನೋಡಿದಾಗ ಕೆಂಪೇಗೌಡರ ನಗರ ನಿರ್ಮಾಣದ ದೂರದೃಷ್ಟಿ ಎಷ್ಟಿತ್ತು ಎಂಬುದನ್ನು ನಾವೆಲ್ಲರೂ ಮೆಚ್ಚಬೇಕು. ಅವರ ಆದರ್ಶ ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.

ಇದೇ ವೇಳೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಲ್.ಎಸ್.ಧರ್ಮಪ್ಪ, ತಾಲೂಕು ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಕ್ರಟಯೋಗೇಶ್, ತಾಲೂಕು ಪ್ರತಿಭಾ ಪರಿಷತ್ ಅಧ್ಯಕ್ಷ ಉದೇಶ್ ಗೌಡ, ತೆಂಡೇಕೆರೆ ಪ್ರೌಢಶಾಲಾ ಮುಖ್ಯ ಶಿಕ್ಷಕ ಮುತ್ತುರಾಜು, ನಿವೃತ್ತ ಉಪ ತಹಸೀಲ್ದಾರ್ ಗೋಪಾಲಕೃಷ್ಣ, ಶಿಕ್ಷಕರಾದ ರಂಗಸ್ವಾಮಿ, ಮಹೇಶ್, ಹನುಮಂತಶೆಟ್ಟಿ, ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಸೇರಿದಂತೆ ಹಲವರು ಇದ್ದರು.

ಶಾಲಾ-ಕಾಲೇಜುಗಳಲ್ಲಿ ಪ್ರಬಂಧ, ಚರ್ಚಾ ಸ್ಪರ್ಧೆ

ಮಂಡ್ಯ:ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕೆಂಪೇಗೌಡರ ಜೀವನ ಸಾಧನೆ ಬಗ್ಗೆ ತಾಲೂಕು ಮಟ್ಟದಲ್ಲಿ ಬರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ. ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ-1500 ರು., ದ್ವಿತೀಯ-1000 ರು., ತೃತೀಯ-500 ರು. ಬಹುಮಾನ ಘೋಷಿಸಲಾಗಿದೆ. ಜೂ.27ರಂದು ಬಹುಮಾನ ವಿತರಿಸಲಾಗುವುದು ಮತ್ತು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ-2500 ರು., ದ್ವಿತೀಯ-1500 ರು., ತೃತೀಯ-1000 ರು. ಬಹುಮಾನವನ್ನು ಜೂ.30 ರಂದು ಅಂಬೇಡ್ಕರ್ ಭವನದಲ್ಲಿ ನೀಡಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ