ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಅಂಬಾ ಮಂದಿರದಲ್ಲಿ ಕೊಳ್ಳೇಗಾಲ ವಿಶ್ವಕರ್ಮ ಸಮಾಜ ಹಾಗೂ ವಿಶ್ವ ವಿಕಾಸ ಟ್ರಸ್ಟ್ ಚಾಮರಾಜನಗರ, ಮೈಸೂರು ವತಿಯಿಂದ ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿಯ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ವಿಶ್ವಕರ್ಮ ಸಮಾಜದ ನಿವೃತ್ತರಿಗೆ ಬಿಳ್ಕೋಡುಗೆ ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮತ್ತು ಬೆಳ್ಳಿ ಬೆಳಕು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲೇ ಪುರಾತನ ಪರಂಪರೆ ಹೊಂದಿದ ವಿಶ್ವಕರ್ಮ ಸಮಾಜ ಶ್ರೇಷ್ಠವೆಂದು ಎಂದು ಪುರುಷ ಸೂಕ್ತ ಒಪ್ಪಿಕೊಂಡಿದೆ. ಪುರುಷ ಸೂಕ್ತದ ಸೃಷ್ಟಿಕರ್ತನೇ ವಿಶ್ವಕರ್ಮ, ಹಾಗಾಗಿ ನಾವು ಧಾರ್ಮಿಕ ಮತ್ತು ರಾಜಕೀಯ ಭದ್ರತೆಯಿಂದ ಸಮಾಜದಲ್ಲಿ ಜಾಗೃತರಾಗಬೇಕು. ಆ ಮೂಲಕ ವಿಶ್ವಕರ್ಮ ಸಮಾಜಕ್ಕೆ ಆಗುವ ಎಲ್ಲಾ ವಿಘ್ನಗಳನ್ನು ಸಮರ್ಥವಾಗಿ ನಿವಾರಿಸಿ ಸುಭದ್ರ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದರು.ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿದ್ದಪ್ಪಾಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಮಾಜದ ಮುಖಂಡರು ಸಂಘಟಿತರಾಗುವ ಮೂಲಕ ಸಮಾಜ ಬಲಪಡಿಸಲು ಮುಂದಾಗಬೇಕು ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ತಾಲೂಕು ಕಾರ್ಯದರ್ಶಿ ಮುಳ್ಳೂರು ಸಿದ್ದಪ್ಪಾಜಿ. ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಸಂಚಾಲಕ ಭೀಮಸೇನ ಬಡಿಗೇರ್, ಜಿ.ಎಸ್.ರಾಜು, ಎಚ್.ಎಸ್.ನಂಜುಂಡಸ್ವಾಮಿ ಇನ್ನಿತರಿದ್ದರು.